* * * * * * HASSAN DISTRICT POLICE

Saturday, November 17, 2018

HASSAN DISTRICT PRESS NOTE 17-11-2018


                                             
                             ಪತ್ರಿಕಾ ಪ್ರಕಟಣೆ                         ದಿನಾಂಕ: 17-11-2018.

ಹೆಣ್ಣು ಮಕ್ಕಳು ಹುಟ್ಟಿದ್ದ ವಿಚಾರಕ್ಕೆ ಪತಿ & ಪತ್ನಿಯ ನಡುವೆ ಜಗಳ, ಪತಿಯ ಪ್ರಚೋಧನೆಯಿಂದ ಪತ್ನಿ ಆತ್ಮಹತ್ಯೆ.
     ದಿನಾಂಕ: 14-11-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಕಡವಿನಹೊಸಹಳ್ಳಿ ಗ್ರಾಮದ ವಾಸಿ ಶ್ರೀಮತಿ ಗಾಯಿತ್ರಿ ಮತ್ತು ಪತಿ ಶ್ರೀ ಗೋವಿಂದ, ರವರು ಅನ್ಯೋನ್ಯವಾಗಿದ್ದು, ಇವರಿಗೆ ಇಬ್ಬರು ಹೆಣ್ಣು ಹುಟ್ಟಿದ್ದಾಗಿನಿಂದ ಪತಿ & ಪತ್ನಿಯರ ನಡುವೆ ಜಗಳವಾಡುತ್ತಿದ್ದು, ನಿನಗೆ ಗಂಡು ಮಗು ಹೆರಲು ಸಾಧ್ಯವಿಲ್ಲ, ನೀನು ಬದುಕಿದ್ದರೆ ನಾನು ಇನ್ನೊಂದು ಮದುವೆಯಾಗಲು ಸಾಧ್ಯವಿಲ್ಲವೆಂದು ಮದ್ಯ ಸೇವಿಸಿ ಪ್ರತಿನಿತ್ಯ ಮಾನಸಿಕ & ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಗ್ರಾಮಸ್ಥರು ಮತ್ತು ಶ್ರೀಮತಿ ಗಾಯಿತ್ರಿ, ರವರ ತಂದೆಯವರು ಸೇರಿ ರಾಜಿ ಪಂಚಾಯ್ತಿ ಮಾಡಿದ್ದರೂ ಸಹ ಇಬ್ಬರ ನಡುವೆ ಜಗಳವಾಡುತ್ತಿದ್ದು, ಪತಿಯ ಕುಮ್ಮಕ್ಕಿನಿಂದ ಮನನೊಂದು ಯಾವುದೋ ಕ್ರಿಮಿನಾಶಕ ಔಷಧಿ ಸೇವಿಸಿ, ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮೃತರ ತಂದೆ ಶ್ರೀ ರಂಗೇಶ್, ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿದ್ದು, ಸ್ಥಳಕ್ಕೆ ಶ್ರೀ ಶಕುಂತಲ, ಪಿಎಸ್ಐ, ಹಳ್ಳಿಮೈಸೂರು ಠಾಣೆ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. 



ಮನೆಯ ಬೀಗ ಮುರಿದು ಚಿನ್ನಾಭರಣಗಳ ಕಳವು.
     ದಿನಾಂಕ: 10-11-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ, ಪಿಳ್ಳೇಶ್ವರ ಬಡಾವಣೆ ವಾಸಿ ಶ್ರೀ ಪ್ರತಾಪ್, ರವರ ಪತ್ನಿ ಶ್ರೀಮತಿ ಶೋಭಾ, ರವರು ತವರು ಮನೆಗೆ ಹೋಗಿದ್ದು, ಶ್ರೀ ಪ್ರತಾಪ್, ರವರು ವಿಜಯಲಕ್ಷ್ಮೀ ಹೋಟೆಲ್ ಹೋಗಿದ್ದು, ಮಧ್ಯಾಹ್ನ 2-00 ಗಂಟೆಗೆ ಮನೆ ಹತ್ತಿರ ಬಂದು ನೋಡಲಾಗಿ ಯಾರೋ ಮನೆಯ ಬೀಗ ಮುರಿದು ಒಳಪ್ರವೇಶಿಸಿ, ಬೀರುವಿನ ಬಾಗಿಲ ಬೀಗ ಮುರಿದು 1) 10 ಸಾವಿರ ನಗದು, 2) 24 ಗ್ರಾಂ ತೂಕದ ಚಿನ್ನದ ಗಣಪರಿ ಡಾಲರ್ 3) 8 ಗ್ರಾಂ ತೂಕದ ಚಿನ್ನದ ಕರಿಮಣಿ ಸರ 4) 8 ಗ್ರಾಂ ತೂಕದ ಕೆಂಪು ಹರಳಿನ ಹ್ಯಾಂಗಿಗ್ಸ್ 5) 22 ಗ್ರಾಂ ತೂಕದ 2 ಜೊತೆ ಚಿನ್ನದ ಓಲೆ ಮತ್ತು ಜುಮುಕಿ 6) 10 ಗ್ರಾಂ ತೂಕದ 2 ಜೊತೆ ಚಿನ್ನದ ಓಲೆ ಮತ್ತು ಜುಮುಕಿ ಒಂದುವರೆ ಕೆ.ಜಿ. ಬೆಳ್ಳಿಯ ಪದಾರ್ಥಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀಮತಿ ಶೋಭಾ, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮನೆಯ ಮೇಲ್ಛಾವಣೆ ತೆಗೆದು ಸುಮಾರು 1,20,000/- ಬೆಲೆಯ 50 ಗ್ರಾಂ ತೂಕದ ಚಿನ್ನ ಒಡವೆಗಳ ಕಳವು.
     ದಿನಾಂಕ: 15-11-2018 ರಂದು ರಾತ್ರಿ 10-00 ಗಂಟೆಗೆ ಹಾಸನದ ವಲ್ಲಬಾಯಿ ರಸ್ತೆ, ಶ್ರೀ ದುಗರ್ಾಂಭ ದೇವಸ್ಥಾನದ ಹತ್ತಿರದ ವಾಸಿ ಶ್ರೀಮತಿ ಲತಾಬಾಯಿ, ರವರು ಮನೆಗೆ ಬೀಗ ಹಾಕಿಕೊಂಡು ಮೈದುನನ ಮನೆಗೆ ಹೋಗಿದ್ದು, ವಾಪಸ್ ದಿನಾಂಕ: 16-11-2018 ರಂದು ಬೆಳಿಗ್ಗೆ 7-30 ಗಂಟೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಮೇಲ್ಛಾವಣಿಗೆ ಒಳ ಪ್ರವೇಶಿಸಿ ಯಾವುದೇ ಆಯುಧದಿಂದ ಬೀರುವಿನ ಬೀಗ ಮುರಿದು ಬೀರುವಿನಲ್ಲಿಟ್ಟಿದ್ದ ಸುಮಾರು 1,20,000/- ಬೆಲೆಯ 50 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕುಡಿಯುವ ನೀರಿನ ವಿಚಾರಕ್ಕೆ ಕೋಲು ಮತ್ತು ಮಚ್ಚಿನಿಂದ ರಕ್ತಗಾಯ:
     ದಿನಾಂಕ: 15-11-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಸುಭಾಷ್ನಗರ ವಾಸಿ ಶ್ರೀಮತಿ ಶಾರದಮ್ಮ, ರವರು ನೀರು ಹಿಡಿಯಲು ನಲ್ಲಿ ಹೋಗಿ ಶ್ರೀಮತಿ ತಾರ, ರವರನ್ನು ಒಂದು ಕೊಡ ನೀರು ಹಿಡಿಯಲು ಕೇಳಿದಾಗ ಅವಾಚ್ಯಶಬ್ಧಗಳಿಂದ ನಿಂದಿಸಿ, ಶ್ರೀಮತಿ ತಾರ, ರವರ ಪತಿ ಶ್ರೀ ಯೋಗೇಶ್, ರವರು ಮಚ್ಚಿನಿಂದ ಎಡಗೈ ಹಸ್ತದ ಮಧ್ಯದ ಬೆರಳಿಗೆ ಕಡಿದು ಕೋಲಿನಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿಯವರು ಅರಸೀಕೆರೆ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮಕ್ಕಳು ಬಹಿರ್ದೆಸೆಗೆ ಹೋಗುವ ವಿಚಾರಕ್ಕೆ ಮಹಿಳೆ ಮತ್ತು ಮಕ್ಕಳಿಗೆ ದೊಣ್ಣೆಯಿಂದ ಹೊಡೆತ.
     ದಿನಾಂಕ: 14-11-2018 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮೊಕಲಿ ಗ್ರಾಮದ ವಾಸಿ ಶ್ರೀಮತಿ ದೇವಮ್ಮ, ರವರ ಮಕ್ಕಳಾದ ಕು||ಸುರ್ದಶನ್ ಮತ್ತು ಕು|| ಸುಚೇತನ ರವರು ಬಹಿರ್ದೆಸೆಗೆ ಹೋಗದಂತೆ ಅದೇ ಗ್ರಾಮದ ವಾಸಿ ಶ್ರೀ ಚಂದ್ರಶೇಖರ್, ರವರು ಬೈಕ್ ನ್ನು ಅಡ್ಡಲಾಗಿ ನಿಲ್ಲಿಸಿದ್ದು, ಶ್ರೀ ಮಹದೇವರ, ಶ್ರೀ ಕೇಶವ, ಶ್ರೀ ಬೇಲೂರಯ್ಯ, ರವರು ಮಕ್ಕಳಿಗೆ ದೊಣ್ಣೆಯಿಂದ ಹೊಡೆದು ಕಾಲಿನಿಂದ ತುಳಿದು ನೋವುಂಟುಮಾಡಿದ್ದು, ಮಕ್ಕಳು ಕಿರುಚಿಕೊಂಡಾಗ ಪಿರ್ಯಾದಿ ಬಂದು ನೋಡಿ ಬಿಡಿಸಲು ಬಂದಾಗ  ಶ್ರೀ ಮಹದೇವರ, ಶ್ರೀ ಕೇಶವ, ಶ್ರೀ ಬೇಲೂರಯ್ಯ, ಶ್ರೀ ಚಂದ್ರ, ಶ್ರೀ ಶೃತಿ, ರಘುನಂದ, ಶ್ರೀಮತಿ ಹೇಮಲತಾ, ಶ್ರೀಮತಿ ದ್ಯಾವಮ್ಮ, ಶ್ರೀಮತಿ ಮಂಜುಳ, ರವರು ತಳ್ಳಿಹಾಕಿ ಕೈಯಿಂದ ಹೊಡೆದು ನೋವುಂಟು ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ
     ದಿನಾಂಕ: 13-11-2018 ರಂದು ಬೆಳಿಗಿನ ಜಾವ ಹೊಳೆನರಸೀಪುರದ ಅಂಬೇಡ್ಕರ್ ನಗರದ ಆಶ್ರಯ ಶಾಲೆಯ ಬೀದಿ ವಾಸಿ ಶ್ರೀ ಬೈರಾಜು, ರವರ ಮಗಳು ಕು|| ನಿಶಾ, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ನಿಶಾಳ ತಂದೆ ಶ್ರೀ ಬೈರಾಜು, ರವರು ದಿನಾಂಕ: 16-11-2018 ರಂದು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ನಿಶಾ ಬಿನ್ ಬೈರಾಜು, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಧರಿಸಿರುತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-273333 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ
     ದಿನಾಂಕ: 15-11-2018 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಗಂಡಸಿ ಗ್ರಾಮದ ವಾಸಿ ಶ್ರೀ ಮಂಜೇಗೌಡ, ರವರ ಮಗಳು ಕು|| ಎಂ.ಜಿ. ವನಿತ, ಗಂಡಸಿ ಹ್ಯಾಂಡ್ ಪೋಸ್ಟ್ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಕು|| ಎಂ.ಜಿ. ವನಿತಾಳ ತಂದೆ ಶ್ರೀ ಮಂಜೇಗೌಡ, ರವರು ದಿನಾಂಕ: 16-12-2018 ರಂದು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಎಂ.ಜಿ. ವನಿತ ಬಿನ್ ಮಂಜೇಗೌಡ, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-220630 ಕ್ಕೆ ಸಂಪರ್ಕಿಸುವುದು.
                        

No comments: