* * * * * * HASSAN DISTRICT POLICE

Wednesday, November 14, 2018

PRESS NOTE : 14-11-2018


ಪತ್ರಿಕಾ ಪ್ರಕಟಣೆ              ದಿನಾಂಕ: 14-11-2018

ಜೂಜು ಅಡ್ಡೆ ಮೇಲೆ ಪಿಐ, ಸಿಇಎನ್, ಪೊಲೀಸ್ ಠಾಣೆ, ದಾಳಿ 8 ಜನರ ಬಂಧನ, ಬಂಧಿತರಿಂದ ಸುಮಾರು 25,300 ನಗದು ವಶ : ದಿನಾಂಕ: 13-11-2018 ರಂದು ರಾತ್ರಿ 11-15 ಗಂಟೆ ಸಮಯದಲ್ಲಿ ಹಾಸನದ ಸುವರ್ಣ ರೆಸಿಡೆನ್ಸಿ ಹಿಂಭಾಗ ರೆಲೈಬಲ್ ಫರ್ರ್ನಿಚರ್ ಮುಂಭಾಗ ಜೂಜಾಡುತ್ತಿದ್ದಾರೆಂದು ಶ್ರೀ ಡಿ. ಸತೀಶ್, ಪಿಐ, ಸಿಇಎನ್, ಪೊಲೀಸ್ ಠಾಣೆ ರವರಿಗೆ ಬಂದು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಯೋಗೇಶ್ಕುಮಾರ್ಬಿನ್ ರಾಜು, 38 ವರ್ಷ, ಅಡ್ಲಿಮನೆ ರಸ್ತೆ, ಹಾಸನ 2) ಶ್ರೀ ರೇಣು ಬಿನ್ ಅಪ್ಪಣ್ಣಶೆಟ್ಟಿ, 40 ವರ್ಷ, ಸಂಗಮೇಶ್ವರ ಬಡಾವಣೆ, ಹಾಸನ 3) ಶ್ರೀ ರಾಜೇಶ್ ಬಿನ್ ರಂಗಶೆಟ್ಟಿ, 45 ವರ್ಷ, 4) ಶ್ರೀ ಮಹೇಶ ಬಿನ್ ಶ್ರೀನಿವಾಸ, 41 ವರ್ಷ, ಅಡ್ಲಿಮನೆ ರಸ್ತೆ, ಹಾಸನ 5) ಶ್ರೀ ವಿನೋದಕುಮಾರ್ ಬಿನ್ ಶಿವಪ್ಪಶೆಟ್ಟಿ, 26 ವರ್ಷ, 1ನೇ ಕ್ರಾಸ್, ಅಡ್ಲಮನೆ ರಸ್ತೆ, ಹಾಸನ 6) ಶ್ರೀ ದೀಪಕ್ ಬಿನ್ ಹೆಚ್. ಎಸ್. ಶಂಕರ, 28 ವರ್ಷ. ಅಡ್ಲಿಮನೆ ರಸ್ತೆ, ಎಸ್ವಿಎಂ ಸ್ಕೂಲ್, ಹಾಸನ 7) ಶ್ರೀ ಕೇಶವ ಬಿನ್ ಬಲರಾಮಶೆಟ್ಟಿ, ಅಡ್ಲಿಮನೆ ರಸ್ತೆ, ಹಾಸನ 8) ಶ್ರೀ ಅನಿಲ ಬಿನ್ ಮಂಜಪ್ಪಶೆಟ್ಟಿ, 29 ವರ್ಷ, ಹೇಮಾವತಿ ಆಸ್ಪತ್ರೆ ಹತ್ತಿರ, ಆಟೋ ನಿಲ್ದಾಣ ಅಡ್ಲಿಮನೆ ರಸ್ತೆ, ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 25,300/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಹಾಸನ & ಆಲೂರು ತಾಲ್ಲೂಕು ಹೋಬಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಸುಮಾರು 1,455/-ಬೆಲೆಯ ಮದ್ಯ ವಶ: ಪ್ರಕರಣ:01, ದಿನಾಂಕ: 13-11-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಹೆಚ್. ಮೈಲನಹಳ್ಳಿ ಗ್ರಾಮದಲ್ಲಿ  ಶ್ರೀ ರಂಗೇಗೌಡ, ರವರ ಬಾಬ್ತು ಶೆಡ್ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಹರೀಶ್, ಪಿಎಸ್ಐ, ದುದ್ದ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ್ ಕೇಳಲಾಗಿ ಶ್ರೀ ರಂಗೇಗೌಢ ಬಿನ್ ಕಾಳೇಗೌಡ, 63 ವರ್ಷ, ಹೆಚ್. ಮೈಲನಹಳ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು  ಸುಮಾರು 303/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ:02, ದಿನಾಂಕ: 13-11-2018 ರಂದು ರಾತ್ರಿ 8-25 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ. ಹೊಸಕೋಟೆ ಹೋಬಳಿ, ಆನಗಳಲೆ ಗ್ರಾಮದ ವಾಸಿ ಶ್ರೀ ರವೀನ್, ರವರು ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಇ.ವಿ. ವಿನಯ್, ಪಿಐ, ಆಲೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ  ನೋಡಲಾಗಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರವೀನ್ ಬಿನ್ ಚಂದ್ರಯ್ಯ, 40 ವರ್ಷ, ಆನಗಳಲೆ ಗ್ರಾಮ, ಕೆ. ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸುಮಾರು 1,152/-ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ, ಒಂದು ಸಾವು, ಒಬ್ಬರಿಗೆ ಗಾಯ: ದಿನಾಂಕ: 13-11-2018 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ದಾರಿಕೊಂಗಳಲೆ ಗ್ರಾಮದ ವಾಸಿ ಶ್ರೀ ವಿಶ್ವನಾಥ, ರವರ ಬಾಬ್ತು ಬೈಕ್ನಲ್ಲಿ ಸ್ನೇಹಿತರಾದ ಶ್ರೀ ಮಹದೇವಪ್ಪ, ರವರೊಂದಿಗೆ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ವಿಜಾಪುರ ಕಾಲೋನಿ ಹತ್ತಿರ ಹೋಗುತ್ತಿದ್ದಾಗ ಕೆಎ-13, ಟಿ.ಎ-1268 ರ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ವಿಶ್ವನಾಥ, 40 ವರ್ಷ, ದಾರಿಕೊಂಗಳಲೆ ಗ್ರಾಮ, ಮಲ್ಲಿಪಟ್ಟಣ ಹೋಬಳಿ, ಅರಕಲಗೂಡು ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಶ್ರೀ ಮಹದೇವಪ್ಪ, ರಕ್ತಗಾಯಗಳಾಗಿರುತ್ತದೆಂದು ಪ್ರತ್ಯಕ್ಷದರ್ಶಿ ಶ್ರೀ ಕೆ.ಸಿ. ಜಗದೀಶ್, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮನೆಯ ಬೀಗ ಮುರಿದು ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಕಳವು : ದಿನಾಂಕ: 12-11-2018 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಯರೆಹಳ್ಳಿ ಗ್ರಾಮದ ವಾಸಿ ಶ್ರೀ ಲಕ್ಷ್ಮೇಗೌಡ, ರವರು ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯಲ್ಲಿ ಮಲಗಿದ್ದು, ದಿನಾಂಕ: 13-11-2018 ರಂದು ಬೆಳಿಗ್ಗೆ 6-00 ಗಂಟೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 5 ಗ್ರಾಂ ತೂಕದ ಓಲೆ ಜುಮಕಿ, 3 ಗ್ರಾಂ ತೂಕದ ಚಿಕ್ಕಗುಂಡು ಮತ್ತು ಹ್ಯಾಗಿಂಗ್ಸ್ ಮತ್ತು ಬೆಳ್ಳಿಯ ಕಾಲು ಚೈನ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಶ್ರೀ ಲಕ್ಷ್ಮೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದವನ ಬಂಧನ, ಜಾನುವಾರುಗಳ ಸಮೇತ ಸೂಪರ್ ಏಸ್ ವಾಹನ ವಶ:  ದಿನಾಂಕ: 13-11-2018 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಹಾಸನದಿಂದ ಸೂಪರ್ ಏಸ್ ವಾಹನದಲ್ಲಿ ಜಾನುವಾರುಗಳನ್ನು ಖಾಸಾಯಿಖಾನೆಗೆ ಸಾಗಿಸಲು ಸಕಲೇಶಪುರದ ಕಡೆಗೆ ಬರುತ್ತಿದ್ದಾರೆಂದು ಶ್ರೀ ರಾಘವೇಂದ್ರ, ಪಿಎಸ್ಐ, ಸಕಲೇಶಪುರ ನಗರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಕೆಎ-13, ಬಿ-1400 ರ ವಾಹನವನ್ನು ತಡೆದು ತಪಾಸಣೆ ನಡೆಸಿ 3 ಜಾನುವಾರುಗಳನ್ನು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ಕೇಳಲಾಗಿ ವಿಕ್ಕಿ@ವಿಪಿನ್ ಬಿನ್ ಬಾಬಣ್ಣ, 32 ವರ್ಷ, ಡ್ರೈವರ್ ಕೆಲಸ, ಕುಶಾಲನಗರ ಬಡಾವಣೆ, ಸಕಲೇಶಪುರ ನಗರ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜಾನುವಾರುಗಳ ಸಮೇತ ವಾಹವನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಜಮೀನಿನ ವಿವಾದ ದೊಣ್ಣೆಯಿಂದ ಹೊಡೆದು ರಕ್ತಗಾಯ:  ದಿನಾಂಕ: 16-10-2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳೀ, ಮಾದನಹಳ್ಳಿ ಗ್ರಾಮದ ವಾಸಿ ಶ್ರೀ ಸದಾಶಿವಪ್ಪ, ರವರ ಬಾಬ್ತು ತೋಟದ ಮನೆಯ ಹತ್ತಿರವಿದ್ದಾಗ ಪಿರ್ಯಾದಿ ತಮ್ಮ ಶ್ರೀ ಸಿದ್ದೇಗೌಡ ಮತ್ತು ಆತನ ಪತ್ನಿ ಶ್ರೀಮತಿ ಕಾವ್ಯ, ಆಸ್ತಿ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯಶಬ್ಧಗಳಿಂದ ನಿಂದಿಸಿ ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾಗ ಕೊಟ್ಟ ಹೇಳಿಕೆ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಕ್ಲುಲಕ ಕಾರಣ ಕೈ, ದೊಣ್ಣೆ, ಚಾಕು ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯ : ದಿನಾಂಕ: 12-11-2018 ರಾತ್ರಿ 9-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಚಿಮ್ಮಮತ್ತಿಘಟ್ಟ ಗ್ರಾಮದ ವಾಸಿ ಶ್ರೀ ದರ್ಶನ್, ರವರಿಗೆ ಸ್ನೇಹಿತರಾದ ಶ್ರೀ ದೇವರಾಜು, ರವರು ಪೋನ್ ಮಾಡಿ ನನಗೆ ಮತ್ತು ನಮ್ಮ ಲೇಬರ್ಗಳಿಗೆ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ದೇವಿಗೆರೆ ಗ್ರಾಮದ ವಾಸಿ ಶ್ರೀ ಭರತ ಮತ್ತು ಗಿರೀಶ್, ರವರುಗಳು ಜಗಳ ಮಾಡುತ್ತಿದ್ದಾರೆಂದು ತಿಳಿಸಿದ ಮೇರೆಗೆ ಪಿರ್ಯಾದಿ ಮತ್ತು ಸ್ನೇಹಿತರಾದ ಶ್ರೀ ಹರೀಶ್, ರವರು ಏಕೆ ಜಗಳ ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಕೈ, ದೊಣ್ಣೆ, ಚಾಕು ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿ ಶ್ರೀ ದರ್ಶನ್, ರವರು ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊಟ್ಟ ಹೇಳಿಕೆ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಬೆಳೆದಿದ್ದ ಸುಮಾರು 10 ಸಾವಿರ ಬೆಲೆಯಗಾಂಜಾ ಗಿಡಗಳ ವಶ : ದಿನಾಂಕ : 13-11-2018 ರಂದು ಮಧ್ಯಾಹ್ನ 02-45 ಗಂಟೆ ಸಮಯದಲ್ಲಿ  ಬೇಲೂರುತಾಲ್ಲೂಕು, ಕಸಬಾ ಹೋಬಳಿ, ನಿಟ್ಟೂರು ಬಾರೆ ಮನೆ ಗ್ರಾಮದ ವಾಸಿ ಈರೇಗೌಡ, ರವರು ಬಾಬ್ತು ಜಮೀನಿನಲ್ಲಿ ಮಾದಕ ವಸ್ತುಗಳಾದ ಗಾಂಜಾ ಗಿಡಗಳನ್ನು ಬೆಳೆದಿರುತ್ತಾರೆಂದು ಸಿಪಿಐ ಶ್ರೀ ಲೋಕೇಶ್, ಬೇಲೂರು ವೃತ್ತರವರಿಗೆ ಬಂದಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಈರೇಗೌಡರವರತೋಟಕ್ಕೆ ಹೋಗಿ ಪರಿಶೀಲಿಸಾಗಿ ತೋಟದಲ್ಲಿ 6*5 ಅಡಿ ಅಗಲದಗಾಂಜಾ ಗಿಡಗಳು ಬೆಳೆದಿದ್ದು,  ಸದರಿ ಗಿಡಗಳನ್ನು ಕಿತ್ತುತೂಕ ಮಾಡಲಾಗಿ 10 ಸಾವಿರ ಬೆಲೆಯಒಟ್ಟು 950 ಗ್ರಾಂಗಳಿದ್ದು, ಸದರಿಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡು ಬೇಲೂರುಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.
ಬೈಕ್ಗಳ ಮುಖಾಮುಖಿ ಡಿಕ್ಕಿ ಬೈಕ್ ಸವಾರನ ಸಾವು : ದಿನಾಂಕ : 13-11-2018 ರಂದು ಸಂಜೆ 07-40 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಬೊಮ್ಮಚವಳ್ಳಿ ಗ್ರಾಮದ ಮೋಹನ್ಕುಮಾರ್ ರವರು ಕೆಎ-46-ಜೆ-4492 ರಟಿವಿಎಸ್ ಬೈಕಿನಲ್ಲಿ ಬೈರಾಪುರದಿಮದ ಬೊಮ್ಮಚವಳ್ಳಿ ಗ್ರಾಮಕ್ಕೆ ಹೋಗಲು ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಮಗ್ಗೆ  ಕಡೆಯಿಂದ ಬಂದ ಕೆಎ-46-ಹೆಚ್-4462 ರ ಮೋಟಾರ್ ಸೈಕಲ್ ಸವಾರತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ  ಬೈಕ್ ಸಮೇತರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ  ಮೋಹನ್ಕುಮಾರ್, 50 ವರ್ಷ, ರವರು ಮೃತಪಟ್ಟಿರುತ್ತಾರೆಂದು ಶ್ರೀಪ್ರಶಾಂತ್ರವರುಕೊಟ್ಟದೂರಿನ ಮೇರೆಗೆಆಲೂರುಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

ಹೆಂಗಸು ಕಾಣೆ : ದಿನಾಂಕ: 09-11-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ಮರಗುಂದ ಗ್ರಾಮದ ವಾಸಿ ಶ್ರೀಮತಿ ನಾಗಮ್ಮ, ರವರು ಮನೆಯಿಂದ ಹೊರಗೆ ಹೋದವರು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ನಾಗಮ್ಮ, ರವರ ಅಣ್ಣನ ಮಗ ಶ್ರೀ ಸನ್ಮಾನ್, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ನಾಗಮ್ಮ, 45 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣ ಸೀರೆ ಮತ್ತು ರವಿಕೆ ಧರಿಸಿರುತ್ತಾರೆಂದು ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08173-245183 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 11-11-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಟೌನ್, ಹುಳಿಯಾರ್ ರಸ್ತೆ ವಾಸಿ ಶ್ರೀ ಬಾಬು ರಾವ್, ರವರ ಮಗಳು ಕು|| ಸ್ಪೂರ್ತಿ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸ್ಪೂತರ್ಿಯ ತಂದೆ ಶ್ರೀ ಬಾಬುರಾವ್, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸ್ಪೂರ್ತಿ ಬಿನ್ ಬಾಬುರಾವ್, 19 ವರ್ಷ, 5'5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-235633 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 11-11-2018 ರಂದು ರಾತ್ರಿ 1-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬಾಗೇಶಪುರ ಗ್ರಾಮದ ವಾಸಿ ಶ್ರೀ ನಂಜೇಗೌಡ, ರವರ ಮಗಳು ಕು|| ಬಿ.ಎಸ್. ಚೈತ್ರ, ಬಹಿರ್ದೆಸೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಚೈತ್ರಳ ತಂದೆ ಶ್ರೀ ನಂಜೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಚೈತ್ರ ಬಿನ್ ನಂಜೇಗೌಡ, 17 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಹುಡುಗಿಯ ಸುಳಿವು ಸಿಕ್ಕಲ್ಲಿ 08174-220630 ಕ್ಕೆ ಸಂಪರ್ಕಿಸುವುದು.


No comments: