* * * * * * HASSAN DISTRICT POLICE

Wednesday, November 14, 2018

PRESS NOTE : 13-11-2018


ಪತ್ರಿಕಾ ಪ್ರಕಟಣೆ                                          ದಿನಾಂಕ: 13-11-2018

3 ಜನ ಅಪರಿಚಿತ ಹುಡುಗರು ಬೈಕ್ನ್ನು ಅಡ್ಡಗಟ್ಟಿ, ಹಲ್ಲೆಪಡಿಸಿ 5 ಸಾವಿರ ನಗದು ಮತ್ತು 16 ಸಾವಿರ ಬೆಲೆಯ ಮೊಬೈಲ್ನ್ನು ಕಿತ್ತುಕೊಂಡು ಪರಾರಿ : ದಿನಾಂಕ: 12-11-2018 ರಂದು ಸಂಜೆ 7-45 ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲ್ಲೂಕು, ಜಿನ್ನೇನಹಳ್ಳಿ ಗ್ರಾಮದ ವಾಸಿ ಶ್ರೀ ಪ್ರಕಾಶ್, ರವರು ಹಾಸನ ಎನ್.ಹೆಚ್-75 ರಸ್ತೆ ಪಕ್ಕದಲ್ಲಿರುವ ಬೃಂದಾವನ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಎ-54, ಕೆ-6171 ರ ಆಕ್ಟೀವಾ ಹೊಂಡಾ ಬೈಕ್ನಲ್ಲಿ ಮಂಡ್ಯಕ್ಕೆ ಹೆಣ್ಣು ನೋಡಲು ಹೋಗಿ ನಂತರ ಚನ್ನರಾಯಪಟ್ಟಣ ತಾಲ್ಲೂಕು, ಸಾಸಲು ಗ್ರಾಮದ ಶುಂಭುಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಹಾಸನಕ್ಕೆ ಹೋಗಲು ಹೋಗಲು ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಎನ್ ಹೆಚ್-75 ಬಿ.ಎಂ. ರಸ್ತೆಯ ಟೋಲ್ ಹತ್ತಿರ ಹೋಗುತ್ತಿದ್ದಾಗ ಸುಮಾರು 20 ರಿಂದ 25 ವರ್ಷ ವಯಸ್ಸಿನ 3 ಅಪರಿಚಿತ ಹುಡುಗರು ಮುಖವಾಡ ಹಾಕಿಕೊಂಡು ಬೈಕ್ ಹತ್ತಿರ ಬಂದು ಹಣವನ್ನು ಕೇಳಿ ನಿರಾಕರಿಸಿದಾಗ ಯಾವುದೋ ಆಯುಧದಿಂದ ತಲೆಗೆ ಹೊಡೆದು ಜೇಬಿನಲ್ಲಿದ್ದ ಸುಮಾರು 5 ಸಾವಿರ ನಗದು ಮತ್ತು 16 ಸಾವಿರ ಬೆಲೆಯ ಮೊಬೈಲ್ನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ಗೆ ಆಟೋ ಡಿಕ್ಕಿ, ರಸ್ತೆ ಬಿದ್ದು ರಕ್ತಗಾಯ : ದಿನಾಂಕ: 12-11-2018 ರಂದು ಮಧ್ಯಾಹ್ನ 3-50 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕುದರಗುಂಡಿ ಪೋಸ್ಟ್, ವೇದಾವತಿ ಗ್ರಾಮದ ವಾಸಿ ಶ್ರೀ ವಿ.ಸಿ. ಆಶೋಕ ರವರ ಬಾಬ್ತು ಕೆಎ-13, ಇಜೆ-5190 ರ ಬೈಕ್ನಲ್ಲಿ ಹಾಸನದಿಂದ ಸಾಲಗಾಮೆಗೆ ಹೋಗಲು ಜಿಲ್ಲಾ ಕ್ರೀಡಾಂಗಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, 8131ರ ಆಟೋ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಹಾಸನದ ಜನತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪಿರ್ಯಾದಿ ಕೊಟ್ಟ ಹೇಳಿಕೆ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನಿನ ವಿಚಾರಕ್ಕೆ ಕೊಲೆ ಬೆದರಿಕೆ ಹಾಕಿ ಬೀರು ಬಾಟಲಿಯಿಂದ ರಕ್ತಗಾಯ: ದಿನಾಂಕ: 11-11-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಗಟ್ಟದಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣಮೂತರ್ಿ, ರವರು ಹಳೇಬೀಡಿನ ಬನಶಂಕರಿ ಕಲ್ಯಾಣ ಮಂಟಪಕ್ಕೆ ಮದುವೆಗೆ ಹೋಗಿದ್ದು, ಗ್ರಾಮಸ್ಥರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಅಭಿಮನ್ಯ, ರವರು ಜಮೀನಿನ ವಿಚಾರಕ್ಕೆ ಜಗಳ ತೆಗದು ಕೈಯಲ್ಲಿದ್ದ ಬೀರು ಬಾಟಲಿಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪತಿ ಪತ್ನಿಗೆ ವರದಕ್ಷಣಿ ಕಿರುಕುಳ : ದಿನಾಂಕ: 04-11-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಬಿದರುಮಣೆಕೊಪ್ಪಲು ಗ್ರಾಮದ ವಾಸಿ ಶ್ರೀಮತಿ ಶಿಲ್ಪಕಲಾ, ರವರ ಪತಿ ಶ್ರೀ ಮಂಜುನಾಥ, ರವರು ಪ್ರತಿನಿತ್ಯ ಮನೆಗೆ ಬಂದಾಗ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಅವಾಚ್ಯಶಬ್ಧಗಳಿಂದ ನಿಂದಿಸಿದ್ದು, ಅತ್ತೆ ಶ್ರೀಮತಿ ಯಶೋಧ, ಮತ್ತು ಮಾವ ಶ್ರೀ ರಾಜೇಗೌಡ, ರವರುಗಳ ಹಿಡಿದು ಎಳೆದಾಡಿ, ದೊಣ್ಣೆಯಿಂದ ಹೊಡೆಯಲು ಯತ್ನಿಸಿ, ಕೊಲೆ ಬೆದರಿಕೆ ಹಾಕಿ, ಹೆಚ್ಚಿನ ಹಣ ತರುವವರೆವಿಗೂ ಮನೆಗೆ ಬರಬೇಡವೆಂದು ಮನೆಯಿಂದ ಹೊರಗೆ ಹಾಕಿರುತ್ತಾರೆಂದು ಪಿರ್ಯಾದಿ ಶ್ರೀಮತಿ ಶಿಲ್ಪಕಲಾ, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ಗಳ ಡಿಕ್ಕಿ ಒಂದು ಸಾವು, ಒಬ್ಬರಿಗೆ ಗಾಯ : ದಿನಾಂಕ: 12-11-2018 ರಂದು ಸಂಜೆ 8-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಜಂಬೂರು ಗ್ರಾಮದ ವಾಸಿ ಶ್ರೀ ಮಧು, ರವರ ಬಾಬ್ತು ಕೆಎ-03, ಜೆಜಿ-3929 ರ ಬೈಕ್ನಲ್ಲಿ ಸ್ನೇಹಿತನಾದ ಶ್ರೀ ಎಸ್.ಎನ್, ಅಭಿಲಾಷ್ನೊಂದಿಗೆ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ, ತಿಪಟೂರು-ಚನ್ನರಾಯಪಟ್ಟಣ, ದಶರ್ಿನಿ, ಶಾಲೆಯ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎ-41, ಎಸ್-2088 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಯಾದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಶ್ರೀ ಮಧು ಬಿನ್ ಶ್ರೀಕಂಠಪ್ಪ, 30 ವರ್ಷ, ಜಂಬೂರು ಗ್ರಾಮ, ನುಗ್ಗೇಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಗಾಯಾಳು ಶ್ರೀ ಅಭಿಲಾಷ್, ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪ್ರತ್ಯಕ್ಷದರ್ಶಿ ಶ್ರೀ ಆಶೋಕ, ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಕಳವು : ದಿನಾಂಕ : 09-11-2018 ರಂದು ಮಧ್ಯಾಹ್ನ 03-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೆಕೋಟೆ ಹೋಬಳಿ, ಅತ್ತಿಚೌಡನಹಳ್ಳಿ ಗ್ರಾಮದ ಪ್ರದೀಪ್ಕುಮಾರ್ ರವರು ಚನ್ನರಾಯಪಟ್ಟಣದಲ್ಲಿ ಎಲ್&ಟಿಕಂಪನಿಯಲ್ಲಿ ಕೆಲಸ ಮಾಡಿಕೊಂಡು ವಿಶ್ರಾಂತಿಗಾಗಿಚನ್ನಿಗರಾಯ ಬಡಾವಣೆಲ್ಲಿರುವರೂಂಗೆತಮ್ಮ ಬಾಬ್ತು ಕೆಎ-13-ಇಸಿ-4024 ರ ಹಿರೋ ಹೊಂಡಾ ಸ್ಲ್ಪೆಂಡರ್ ಬೈಕಿನಲ್ಲಿ ಬಂದು ಬೈಕ್ನ್ನುಕೆನರಾ ಬ್ಯಾಂಕ್ಎಟಿಎಂ ಪಕ್ಕದಲ್ಲಿ ನಿಲ್ಲಿಸಿ ರೂಂಗೆ ಹೋಗಿ ವಿಶ್ರಾಂತಿ ಪಡೆದುಕೊಂಡು ವಾಪಸ್  ಬಂದು ನೋಡಲಾಗಿ ಬೈಕ್ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಬೈಕಿನ ಬೆಲೆ ಸುಮಾರು 18000/- ರೂಗಳಾಗಿರುತ್ತದೆ. ಪತ್ತೆ ಮಾಡಿಕೊಡಬೇಕೆಂದು ಶ್ರೀ ಪ್ರದೀಪ್ಕುಮಾರ್ರವರು ದಿನಾಂಕ : 12-11-2018 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

No comments: