* * * * * * HASSAN DISTRICT POLICE

Monday, November 12, 2018

PRESS NOTE : 12-11-2018


ಪತ್ರಿಕಾ ಪ್ರಕಟಣೆ                                            ದಿನಾಂಕ: 12-11-2018

ಮಾಂಗಲ್ಯ ಸರ ಕಳವು : ದಿನಾಂಕ: 09-11-2018 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ಹನುಮನಹಳ್ಳಿ ಗ್ರಾಮದ ವಾಸಿ ಶ್ರೀಮತಿ ರಾಜಮ್ಮ, ರವರು ಹಾನುಬಾಳು ಗ್ರಾಮದಲ್ಲಿ ಗುಂಡುಬ್ರಹ್ಮ ದೇವರ ಜಾತ್ರೆಗೆ ಹೋಗಿದ್ದು, ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದಾಗ ಯಾರೋ ಕಳ್ಳರು ಸುಮಾರು 40 ಸಾವಿರ ಬೆಲೆಯ 50 ಗ್ರಾಂ ತೂಕದ ಚಿನ್ನ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯ ದಿನಾಂಕ: 11-11-2018 ರಂದು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮನೆಯ ಬೀಗ ಮುರಿದು ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಕಳವು : ದಿನಾಂಕ: 10-11-2018 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣದ ಹೊಳೆಬೀದಿ ವಾಸಿ ಶ್ರೀ ಚಂದ್ರಶೇಖರ, ರವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಅಕ್ಕನ ಮನೆಯಾದ ಕುರುವಂಗಿ ಗ್ರಾಮಕ್ಕೆ ಹಬ್ಬಕ್ಕೆ ಹೋಗಿದ್ದು, ವಾಪಸ್ ದಿನಾಂಕ: 11-11-2018 ರಂದು ಬೆಳಿಗ್ಗೆ 7-45 ಗಂಟೆಗೆ ಮನೆಯ ಹತ್ತಿರ ಬಂದು ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಬೀಗ ಮುರಿದು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ ಸುಮಾರು 1,30,000/- ಬೆಲೆಯ 32 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 70 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನಿನ ಮೇಲೆ ಓಡಾಡಿದ್ದಕ್ಕೆ ದೊಣ್ಣೆಯಿಂದ ಹೊಡೆದು ರಕ್ತಗಾಯ:  ದಿನಾಂಕ: 10-11-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಕೆ. ಹಿರೇಹಳ್ಳಿ ಗ್ರಾಮದ ವಾಸಿ ಶ್ರೀ ಹೆಚ್. ಜಿ. ದಿನೇಶ್, ರವರು ಅದೇ ಗ್ರಾಮದ ವಾಸಿ ಶ್ರೀ ಸತೀಶ್, ರವರ ಬಾಬ್ತು ಜಮೀನಿನ ಮೇಲೆ ದನಗಳನ್ನು ಹಿಡಿದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿಯವರನ್ನು ಅಡ್ಡಗಟ್ಟಿ ಜಮೀನಿನ ಮೇಲೆ ಏಕೆ ಓಡಾಡುತ್ತೀಯಾ ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕ್ಷುಲಕ ಜಗಳ, ಬೀರು ಬಾಟಲಿಯಿಂದ ಹೊಡೆದು ರಕ್ತಗಾಯ : ದಿನಾಂಕ: 11-11-2018 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಹಾಸನದ ವಿದ್ಯಾನಗರ ವಾಸಿ ಶ್ರೀ ಮರಿಗೌಡ, ರವರು ಸ್ನೇಹಿತನಾದ ಚಿಕ್ಕಗೇಣಿಗೆರೆ ಗ್ರಾಮದ ವಾಸಿ ಶ್ರೀ ಮಂಜೇಗೌಡ, ರವರೊಂದಿಗೆ ಮನಸ್ತಾಪವಿದ್ದು, ಈಗ್ಗೆ 6 ತಿಂಗಳಿನಿಂದ ಇಬ್ಬರು ಮಾತನಾಡುತ್ತಿರಲಿಲ್ಲ, ಹಾಸನದ ರಿಂಗ್ ರಸ್ತೆ, ಸುಪ್ರಿಯ ಪೆಗ್ನ ಕ್ಯಾಷ್ ಕೌಂಟರ್ ಹತ್ತಿರ ನಿಂತಿದ್ದಾಗ ಶ್ರೀ ಮಂಜೇಗೌಡ, ರವರು ಪಿರ್ಯಾದಿಗೆ ಹೊಡೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಏಕೆ ನನಗೆ ಹೊಡೆಯುತ್ತೀಯಾ ನಿನಗೆ ಸಾಲ ಕೊಡಬೇಕಾ ಎಂದು ಕೇಳಿದ್ದಕ್ಕೆ, ಬೀರು ಬಾಟಲಿಯಿಂದ ಹೊಡೆದು ಚುಚ್ಚಲು ಹೋದಾಗ ಎಡಗೈ ತಗಲಿ ರಕ್ತಗಾಯವಾಗಿದ್ದು, ಶ್ರೀ ಮಂಜೇಗೌಡನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

3 ಜನಅಪರಿಚಿತ ವ್ಯಕ್ತಿಗಳು ಯಾವುದೋ ಆಯುಧದಿಂದ ಹೊಡೆದು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಿತ್ತುಕೊಂಡು ಪರಾರಿ.
ದಿನಾಂಕ: 11-11-2018 ರಂದು ಮಧ್ಯರಾತ್ರಿ 2-00 ಗಂಟೆ ಸಮಯದಲ್ಲಿ ಹಾಸನದ ಹುಣಸಿನಕೆರೆ ರಸ್ತೆ, ಕಾಶಿವಿಶ್ವನಾಥ ದೇವಸ್ಥಾನದ ಎದುರುಗಡೆ ವಾಸಿ ಶ್ರೀ ಕುಮಾರ, ರವರು ಚನ್ನವೀರಪ್ಪ  ಕಲ್ಯಾಣ ಮಂಟಪದಲ್ಲಿ ಮಗಳ ಮದುವೆ ಕಾರ್ಯ ಹಮ್ಮಿಕೊಂಡಿದ್ದು, ಪಿರ್ಯಾದಿ ಮತ್ತು ಸ್ನೇಹಿತರಾದ ಶ್ರೀ ರಾಜು, ರವರೊಂದಿಗೆ ಕಾಫಿ ಕುಡಿಯಲು ಕಲ್ಯಾಣ ಮಂಟಪದ ಮುಂಭಾಗದ ವಲ್ಲಬಾಯಿ ರಸ್ತೆಯಲ್ಲಿರುವ ಬಂದೂಕು ರಿಪೇರಿ ಮಾಡುವ ಅಂಗಡಿ ಮುಂದೆ ಸಂತೇಪೇಟೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಸುಮಾರು 20-25 ವರ್ಷ ವಯಸ್ಸಿನ ಯಾರೋ 3 ಜನ ಅಪರಿಚಿತ ವ್ಯಕ್ತಿಗಳು  ಚಾಕುವನ್ನು ತೆಗೆದು ಮೈ ಮೇಲೆ ಹಾಕಿದ್ದ ಚಿನ್ನಾಭರಣಗಳನ್ನು ಕೊಡುವಂತೆ ಹೆದರಿಸಿ ಯಾವುದೂ ಆಯುಧದಿಂದ ಹೊಡೆದು 28 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ ಚಿನ್ನದ ಉಂಗುರ 10 ಗ್ರಾಂ ತೂಕದ ಬೆಳ್ಳಿಯ ಉಂಗುರ ಒಂದು ಮೊಬೈಲ್ನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ : ದಿನಾಂಕ: 07-11-2018 ರಂದು ಬೆಳಿಗ್ಗೆ 6-00 ಗಂಟೆಗೆ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ದೊರನಹಳ್ಳಿ ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿ. ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಪುಟ್ಟಸ್ವಾಮಿ, ರವರ ಪತ್ನಿ ಶ್ರೀಮತಿ ಪ್ರಮೀಳಾ, ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಪುಟ್ಟಸ್ವಾಮಿ, 55 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-225475 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 25-10-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಉದೇವಾರ ಪೋಸ್ಟ್, ಕಲ್ಲಳ್ಳಿ ಗ್ರಾಮದ ವಾಸಿ ಶ್ರೀ ಮಂಜುನಾಥಚಾರಿ, ರವರ ಮಗಳು ಕು|| ಪ್ರೀತಿ, ಬಾಳೆಗದ್ದೆಯಲ್ಲಿರುವ ಪ್ರಭು ಆಟೋ ಲಿಂಕ್ಸ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಪ್ರೀತಿಯ ತಂದೆ ಶ್ರೀ ಮಂಜುನಾಥಚಾರಿ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಪ್ರೀತಿ ಬಿನ್ ಮಂಜುನಾಥಚಾರಿ, 17 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08173-244100 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 19-09-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಹಲಸಿನಹಳ್ಳಿ ಗ್ರಾಮದ ವಾಸಿ ಶ್ರೀ ಹನುಮಂತೇಗೌಡ, ರವರ ಮಗಳು ಕು|| ಅಪರ್ಿತಾ, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಅಪರ್ಿತಾಳ ತಂದೆ ಶ್ರೀ ಹನುಮಂತೇಗೌಡ, ರವರು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಅಪರ್ಿತಾ ಬಿನ್ ಹನುಮಂತೇಗೌಡ, 19 ವರ್ಷ, 5 ಅಡಿ ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-223935 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 11-11-2018 ರಂದು ಬೆಳಗಿನ ಜಾವ 5-00 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಲಕ್ಷ್ಮೀಪುರ ಬಡಾವಣೆಯ ಎಸ್ಬಿಎಂ ಬ್ಯಾಂಕ್ ಹತ್ತಿರ ವಾಸಿ ಶ್ರೀ ಎ.ಪಿ. ಶ್ರೀನಿವಾಸ, ರವರ ಮಗಳು ಕು|| ರಂಜಿತಾ, ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಕಾಲೇಜಿಗೆ ರಜೆ ಇರುವ ಕಾರಣ ತಮ್ಮನ ಮನೆಗೆ ಹೋಗಿದ್ದು, ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರಂಜಿತಾಳ ತಂದೆ ಶ್ರೀ ಎ.ಪಿ. ಶ್ರೀನಿವಾಸ, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಕಾಣೆಯಾದ ಹುಡುಗಿಯ ಚಹರೆ: ಕು|| ರಂಜಿತಾ ಬಿನ್ ಶ್ರೀನಿವಾಸ, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-232233 ಕ್ಕೆ ಸಂಪರ್ಕಿಸುವುದು.

No comments: