* * * * * * HASSAN DISTRICT POLICE

Wednesday, July 11, 2018

PRESS NOTE : 11-07-2018


ಪತ್ರಿಕಾ ಪ್ರಕಟಣೆ          ದಿನಾಂಕ: 11-07-2018.

ಹುಡುಗಿ ಕಾಣೆ :   1.      ದಿನಾಂಕ: 06-07-2018 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ  ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಮಲ್ಲಿನಾಥಪುರ ಗ್ರಾಮದ ವಿಜಯಕುಮಾರ ರವರ ಮಗಳು ಅಮೃತ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಅಮೃತ ರವರ ತಾಯಿ ಶ್ರೀಮತಿ  ಕಮಲ ರವರು            ದಿನಾಂಕ: 10-07-2018 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಅಮೃತ ಬಿನ್ ಲೇಟ್ ವಿಜಯಕುಮಾರ, 20 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ  ಕೊಣನೂರು ಠಾಣೆ ಫೋನ್ ನಂ. 08175-226227 ಕ್ಕೆ ಸಂಪರ್ಕಿಸುವುದು.

          2. ದಿನಾಂಕ: 09-07-2018 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ  ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಹುಲಿಕಲ್ ಗ್ರಾಮದ ಬಸವರಾಜೇಗೌಡ ರವರ ಮಗಳು ರಮ್ಯ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ರಮ್ಯ ರವರ ತಂದೆ ಶ್ರೀ ಬಸವರಾಜೇಗೌಡ ರವರು ಕೊಟ್ಟ ದೂರಿನ ಮೇರೆಗೆ  ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ರಮ್ಯ ಬಿನ್  ಬಸವರಾಜೇಗೌಡ, 21 ವರ್ಷ, 5'4'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಅರಕಲಗೂಡು ಠಾಣೆ ಫೋನ್ ನಂ. 08175-220249 ಕ್ಕೆ ಸಂಪರ್ಕಿಸುವುದು.

No comments: