* * * * * * HASSAN DISTRICT POLICE

Tuesday, July 10, 2018

HASSAN DISTRICT PRESS NOTE 10-07-2018
                                                
                           ಪತ್ತಿಕಾ ಪ್ರಕಟಣೆ                          ದಿನಾಂಕ: 10-07-2018.


ಕಾರು ಬೈಕಿಗೆ ಡಿಕ್ಕಿ ಬೈಕಿನಲ್ಲಿದ್ದ ಒಬ್ಬರ ಸಾವು ಇನ್ನೊಬ್ಬರಿಗೆ ಗಾಯ:

     ದಿನಾಂಕ: 09-07-2018 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ವಿದ್ಯಾನಗರ ವಾಸಿ ತೇಜಸ್ ರವರ ಬಾಬ್ತು ಕೆಎ-13-ಇಎನ್-0427 ರ ಬಜಾಜ್ ಪಲ್ಸರ್ ಬೈಕಿನಲ್ಲಿ ಸ್ನೇಹಿತ ಪ್ರೀತಂನನ್ನು ಕೂರಿಸಿಕೊಂಡು ಹಾಸನದಿಂದ ಚಿಕ್ಕಮಗಳೂರಿಗೆ ಹೋಗಲು ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಇಬ್ಬೀಡು ಗ್ರಾಮದ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18-ಜೆಡ್-3750 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ  ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ತೇಜಸ್ ಬಿನ್ ಲೇಟ್ ವೇದ್ ವೇದ್ಮೂರ್ತಿ, 19 ವರ್ಷ ರವರು ಮೃತಪಟ್ಟಿರುತ್ತಾರೆ. ಮೃತರ ತಾಯಿ ಶ್ರೀಮತಿ ಮಾಲಿನಿ ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
     


No comments: