* * * * * * HASSAN DISTRICT POLICE

Wednesday, May 2, 2018

PRESS NOTE : 02-05-2018


ಪತ್ರಿಕಾ ಪ್ರಕಟಣೆ                          ದಿನಾಂಕ: 02-05-2018.
ಹೆಂಗಸು ಕಾಣೆ :        ದಿನಾಂಕ: 25-04-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಚಂದನಹಳ್ಳಿ ಗ್ರಾಮದ ವೀರಭದ್ರಯ್ಯ ರವರ ಪತ್ನಿ ಶ್ರೀಮತಿ ವಿನೋಧ ರವರು ಸ್ನೇಹಿತೆಯ ಮದುವೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ವಿನೋಧ ರವರ ಪತಿ ಶ್ರೀ ವೀರಭದ್ರಯ್ಯ ರವರು ದಿನಾಂಕ: 01-05-2018 ರಂದು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ  ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ವಿನೋಧ ಕೋಂ ವೀರಭದ್ರಯ್ಯ, 33 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಅರೇಹಳ್ಳಿ ಠಾಣೆ ಫೋನ್ ನಂ. 08177-221342 ಕ್ಕೆ ಸಂಪರ್ಕಿಸುವುದು.

ಗಂಡಸು ಕಾಣೆ :       ದಿನಾಂಕ: 29-04-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ  ಹಾಸನ ವಿಜಯನಗರ ಬಡಾವಣೆ ವಾಸಿ ಮೋಹನ್ಕುಮಾರ್ ರವರು  ಪಾಳ್ಯಕ್ಕೆ ತಾಯಿ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮೋಹನ್ ಕುಮಾರ್ ರವರ ಪತ್ನಿ ಶ್ರೀಮತಿ ಸಂಗೀತ ರವರು ದಿನಾಂಕ: 01-05-2018 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಮೋಹನ್ಕುಮಾರ್, 34 ವರ್ಷ, 5'4'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೆನ್ಷನ್ ಮೊಹಲ್ಲಾ ಠಾಣೆ ಫೋನ್ ನಂ. 08172-272260 ಕ್ಕೆ ಸಂಪರ್ಕಿಸುವುದು.


No comments: