* * * * * * HASSAN DISTRICT POLICE

Thursday, May 3, 2018

PRESS NOTE : 03-05-2018


ಪತ್ರಿಕಾ ಪ್ರಕಟಣೆ                 ದಿನಾಂಕ: 03-05-2018.
ಜೂಜಾಡುತ್ತಿದ್ದ 14 ಜನರ ಬಂಧನ, ಬಂಧಿತರಿಂದ ಸುಮಾರು 20,000/- ನಗದು ವಶ:
ದಿನಾಂಕ: 02-05-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನದ ಬಿಟ್ಟಗೌಡನಹಳ್ಳಿ ಹೆಚ್ಪಿ ಪೆಟ್ರೋಲ್ ಬಂಕ್ ಹಿಂಭಾಗ ಸಾರ್ವಜನಿಕರ ಸ್ಥಳದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಸುರೇಶ್, ಪಿಎಸ್ಐ, ಹಾಸನ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸ್ವಾಮಿ ಬಿನ್ ಪುಟ್ಟೇಗೌಡ, 43 ವರ್ಷ, ಬೂವನಹಳ್ಳಿ ಗ್ರಾಮ, ಹಾಸನ ತಾಲ್ಲೂಕು 2) ಸುರೇಶ್ ಬಿನ್ ಕುಮಾರ್, 35 ವರ್ಷ, ಆದರ್ಶನಗರ, ಹಾಸನ ನಗರ 3) ಶರತ್ಕುಮಾರ್ ಬಿನ್ ಜಯರಾಂ, 24 ವರ್ಷ, ಕುವೆಂಪುನಗರ, ಹಾಸನ 4) ಪದ್ಮರಾಜ್ ಬಿನ್ ಕೃಷ್ಣೇಗೌಡ, 39 ವಷ್, ಮಡೆನೂರು ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು 5) ಮಂಜು ಬಿನ್ ಮಲ್ಲೇಶ್ಗೌಡ, 32 ವರ್ಷ, ರಿಯಲ್ ಎಸ್ಟೇಟ್ ಆಡುವಳ್ಳಿ ಗ್ರಾಮ, ಹಾಸನ ತಾಲ್ಲೂಕು 6) ಗೋಪಾಲ ಬಿನ್ ರಂಗೇಗೌಡ, 40 ವರ್ಷ, ಗುಡ್ಡೇಹಳ್ಳಿ ಕೊಪ್ಪಲು, ಹಾಸನ. 7) ಶ್ರೀಕಾಂತ್ ಬಿನ್ ರುದ್ರಶೆಟ್ಟಿ, 25 ವರ್ಷ, ಕೂಲಿಕೆಲಸ, ಸಂತೇಪೇಟೆ ಶಾಲೆ, ಶನಿದೇವರ ದೇವಸ್ಥಾನದ ಹತ್ತಿರ, ಹಾಸನ 8) ಸೈಯಾದ್ ಮೀರ್ ಬಿನ್ ಸೈಯಾದ್ಯುಸೂಫ್, 46 ವರ್ಷ, 3ನೇ ಕ್ರಾಸ್, ವಲ್ಲಬಾಯಿ ರಸ್ತೆ, ಹಾಸನ 9) ರಘು ಬಿನ್ ಪುಟ್ಟಸ್ವಾಮಿಗೌಡ, 33 ವರ್ಷ, ಡ್ರೈವರ್, ಸಿಂಗೇನಹಳ್ಳಿಕೊಪ್ಪಲು, ಕಸಬಾ ಹೋಬಳಿ, ಹಾಸನ ತಾಲ್ಲೂಕು 10) ರಘು ಬಿನ್ ಶ್ಯಾಮಣ್ಣ, 29 ವರ್ಷ, ಇಂಜಿನಿಯರ್, ಬಸಟಿಕೊಪ್ಪಲು, ಹಾಸನ 11) ರಮೇಶ್ ಬಿನ್ ಮಲ್ಲೇಗೌಡ, 40 ವರ್ಷ, ಸತ್ಯಮಂಗಲ, ಹಾಸನ 12) ಕುಮಾರ ಬಿನ್ ಮೊಗಣ್ಣ, 34 ವರ್ಷ, ಕೇಬಲ್ ಕೆಲಸ, ಜೈಲ್ ಹಿಂಭಾಗ, ಶ್ರೀನಗರ, ಹಾಸನ 13) ಜಯರಾಂ ಬಿನ್ ರಾಮೇಗೌಡ, 35 ವರ್ಷ, ಮೀನು ವ್ಯಾಪಾರ, ಸುಣ್ಣದಗೂಡು, ದೇವಿನಗರ, ಹುಣಸಿನಕೆರೆ ಹಾಸನ 14) ರಮೇಶ್ ಬಿನ್ ರಾಜ, 37 ವರ್ಷ, ಕಂಟ್ರಾಕ್ಟರ್, ಕೆಲಸ, ಪೆನ್ಷನ್ ಮೊಹಲ್ಲಾ, ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 20,000/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ  : ದಿನಾಂಕ: 30-04-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ತಿರುಮಲನಹಳ್ಳಿ ಗ್ರಾಮದ ವಾಸಿ ಶ್ರೀ ರವಿ, ರವರ ಮಗಳು ಶ್ರೀಮತಿ ಕಲ್ಪನಾ, ರವರು ಗಂಡನ ಮನೆಯಿಂದ ತವರು ಮನೆಯಲಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಕಲ್ಪನಾಳ ತಂದೆ ಶ್ರೀ ರವಿ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಕಲ್ಪನಾ ಕೋಂ ಪ್ರವೀಣ, 24 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕೋಲುಮುಖ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08177-222444 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ : ದಿನಾಂಕ: 01-05-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಳೂಕು, ಜಾವಗಲ್ ಹೋಬಳಿ, ಕಮಲಾಪುರ ಗ್ರಾಮದ ವಾಸಿ ಶ್ರೀ ರಾಜ್ಗೋಪಾಲ್, ರವರ ಮಗಳು ಶ್ರೀಮತಿ ಸುಧಾ, ರವರನ್ನು ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಜೋಹಿಸರಕೊಪ್ಪಲು ಗ್ರಾಮದ ವಾಸಿ ಶ್ರೀ ಅಶೋಕ್, ರವರಿಗೆ ಮದುವೆ ಮಾಡಿಕೊಟ್ಟಿದ್ದು, ಇತ್ತೀಚಿಗೆ ಇಬ್ಬರ ನಡುವೆ ಅಸಮಾದಾನವಿದ್ದು, ಶ್ರೀಮತಿ ಸುಧಾ, ರವರು ಮನೆಗೆ ಬಂದಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಸುಧಾ, ರವರ ತಂದೆ ಶ್ರೀ ರಾಜ್ಗೋಪಾಲ್, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಸುಧಾ ಕೋಂ ಆಶೋಕ್, 30 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08174-271221 ಕ್ಕೆ ಸಂಪರ್ಕಿಸುವುದು.

No comments: