* * * * * * HASSAN DISTRICT POLICE

Monday, April 2, 2018

PRESS NOTE : 02-04-2018


ಪತ್ರಿಕಾ ಪ್ರಕಟಣೆ             ದಿನಾಂಕ:02-04-2018
ಪೊಲೀಸ್ ಧ್ವಜ ದಿನಾಚರಣೆ
ದಿನಾಂಕ: 02-04-2018 ರಂದು ಬೆಳಿಗ್ಗೆ 8-00 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯಿತ್ತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗಿತ್ತು.

ಕಾರು ಗೂಡ್ಸ್ ವಾಹನಕ್ಕೆ ಡಿಕ್ಕಿ, ಗೂಡ್ಸ್ ವಾಹನ ಚಾಲಕ ಸಾವು : ದಿನಾಂಕ: 01-04-2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಜೋಗಿಪುರ ಗ್ರಾಮದ ವಾಸಿ ಶ್ರೀ ಬಸವರಾಜು, ರವರ ಬಾಬ್ತು ಕೆಎ-14, ಎ-3639ರ ಗೂಡ್ಸ್ ಆಟೋದಲ್ಲಿ ಚನ್ನರಾಯಪಟ್ಟಣದಿಂದ ತಮ್ಮ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಎನ್ಹೆಚ್-75,ರಸ್ತೆ,  ಶೆಟ್ಟಿಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-01 ಎಂ.ಪಿ-2345 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಗೂಡ್ಸ್ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಆಟೋ ಜಖಂಗೊಂಡು ಶ್ರೀ ಬಸವರಾಜು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್ನ ಎ.ಸಿ. ಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಬಸವರಾಜು ಬಿನ್ ತಿಮ್ಮಯ್ಯ, 37 ವರ್ಷ, ಜೋಗಿಪುರ ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕು ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಪುಟ್ಟಸ್ವಾಮಿ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕಾರಿನ ನಿಯಂತ್ರಣ ತಪ್ಪಿ  ಮರಕ್ಕೆ ಡಿಕ್ಕಿ ಕಾರಿನಲ್ಲಿದ್ದ ಒಬ್ಬರ ಸಾವು, ನಾಲ್ವರಿಗೆ ಗಾಯ: ದಿನಾಂಕ: 01-04-2018 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ರಾಮನಹಳ್ಳಿ ಗ್ರಾಮದ ವಾಸಿ ಶ್ರೀ ಶಿವಾನಂದಯ್ಯ, ರವರು ಪತಿ ಶ್ರೀಮತಿ ವನಜಾಕ್ಷಮ್ಮ, ಮಗಳು ಮತ್ತು ಅಳಿಯ ಶ್ರೀಮತಿ ಮೇಘನ, ಶ್ರೀ ಕಿರಣ್ಕುಮಾರ್, ರವರ ಬಾಬ್ತು ಶ್ರೀ ಕೆಎ-11 ಎ-7306 ರ ಇಂಡಿಗೂ ಕಾರನಲ್ಲಿ ಸಂಬಂಧಿಕರಾದ ಶ್ರೀ ಪ್ರಸನ್ನಮೂತರ್ಿ, ರವರುಗಳೊಂದಿಗೆ ಅರಸೀಕೆರೆ ತಾಲ್ಲೂಕು, ಯಾದಾಪುರ ಗ್ರಾಮದ ಶ್ರೀ ಜೇನುಕಲ್ ಸಿದ್ದೇಶ್ವರ, ದೇವರ ಜಾತ್ರಾ ಮಹೋತ್ಸವ ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ಅರಸೀಕೆರೆ ತಾಲ್ಲೂಕು, ಪನ್ನಸಮುದ್ರ ಗ್ರಾಮದ ಕಲ್ಪಚಾರ್ ಪ್ರೈವೇಟ್ ಪ್ರಾಡಕ್ಟ್ ಫ್ಯಾಕ್ಟರಿಯ ಹತ್ತಿರ ಹೋಗುತ್ತಿದ್ದಾಗ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಸಾಲುಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಶಿವಾನಂದಯ್ಯ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅರಸೀಕೆರೆ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ಶಿವಾನಂದಯ್ಯ ಬಿನ್ ಬಸವರಾಜಯ್ಯ, 54 ವರ್ಷ,                 ರಾಮನಹಳ್ಳಿ ಗ್ರಾಮ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ, ರವರು ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ಗಾಯಾಳುಗಳಾದ ಶ್ರೀಮತಿ ವನಜಾಕ್ಷಮ್ಮ, ಶ್ರೀಮತಿ ಮೇಘನ, ಶ್ರೀ ಕಿರಣ್ಕುಮಾರ್, ಶ್ರೀ ಪ್ರಸನ್ನಮೂತರ್ಿ, ರವರುಗಳಿಗೂ ಸಹ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಮತಿ ಮೇಘನ, ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 984/- ಬೆಲೆಯ ಮದ್ಯ ವಶ
     ದಿನಾಂಕ:01-04-2018 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ  ಬೇಲೂರು ನೆಹರೂ ನಗರದ ವೃತ್ತದಲ್ಲಿ ಯಾರೋ ಒಬ್ಬ ವ್ಯಕ್ತಿ ಮದ್ಯವನ್ನು ಸಾಗಿಸಲು ನಿಂತಿರುತ್ತಾರೆಂದು ಶ್ರೀ ಶರತ್ಕಮಾರ್, ಪಿಎಸ್ಐ, ಬೇಲೂರು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶಶಿಕುಮಾರ್ ಬಿನ್ ನಾಗರಾಜು, 28 ವರ್ಷ, ಕರಗಡ ಗ್ರಾಮ, ಕಸಬಾ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 984/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಜೂಜಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ ಸುಮಾರು 12,460/- ನಗದು ವಶ:
ದಿನಾಂಕ: 01-04-2018 ರಂದು ರಾತ್ರಿ 8-10 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಉದ್ದೂರು ಗ್ರಾಮದ ಸಕರ್ಾರಿ ಶಾಲೆಯ ಹಿಂಭಾಗದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ವೈ. ಸತ್ಯನಾರಾಯಣ, ಸಿಪಿಐ ಹಾಸನ ನಗರ ವೃತ್ತ, ಹಾಸನ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶಶಿಕುಮಾರ್ ಬಿನ್ ನಾಗರಾಜು, 28 ವಷ್, ಮಣಿಚನಹಳ್ಳಿ ಗ್ರಾಮ, ಹಾಸನ ತಾಲ್ಲೂಕು 2) ಅನಿನಾಶ್ ಬಿನ್ ತಿಮ್ಮೇಗೌಡ, 28 ವರ್ಷ, ಉದ್ದೂರು ಗ್ರಾಮ, ಹಾಸನ ತಾಲ್ಲೂಕು 3) ಗಂಗಾಧರ ಬಿನ್ ವೆಂಕಟೇಶ್, 27 ವರ್ಷ, ಉದ್ದೂರು ಗ್ರಾಮ, ಹಾಸನ ತಾಲ್ಲೂಕು 4) ಸಂತೋಷ ಬಿನ್ ಸಿದ್ದೇಗೌಡ, 30 ವರ್ಷ, ಚಿಕ್ಕಕೊಂಡಗೊಳ ಗ್ರಾಮ, ಹಾಸನ ತಾಲ್ಲೂಕು 5) ನಾಗರಾಜು ಬಿನ್ ತಿಮ್ಮೇಗೌಡ, 28 ವರ್ಷ, ಗುಡ್ಡೇನಹಳ್ಳಿಕೊಪ್ಪಲು ಹಾಸನ ತಾಲ್ಲೂಕು 6) ಪ್ರಕಾಶ್ ಬಿನ್ ಚನ್ನಬಸವೇಗೌಡ, 36 ವರ್ಷ, ಮಣಿಚನಹಳ್ಳಿ ಗ್ರಾಮ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿದ್ದ ಸುಮಾರು 12,460/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಕಾರು ಬೈಕ್ಗೆ ಡಿಕ್ಕಿ, ಬೈಕ್ನಲ್ಲಿದ್ದ ಇಬ್ಬರ ಸಾವು
ದಿನಾಂಕ: 01-04-2018 ರಂದು ಬೆಳಗ್ಗೆ 11-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಬರಗೂರು ಗ್ರಾಮದ ವಾಸಿ ಶ್ರೀ ಸುರೇಶ್, ರವರ ಬಾಬ್ತು ಕೆಎ-54 ಜೆ-5291 ರ ಟಿವಿಎಸ್ ಎಕ್ಸ್ಎಲ್ ಬೈಕ್ನಲ್ಲಿ ಸ್ನೇಹಿತರಾದ ಶ್ರೀ ರಂಗಸ್ವಾಮಿ, ರವರೊಂದಿಗೆ ಸಂಬಂಧಿಕರ ಮನೆಗೆ ಹಬ್ಬದ ಊಟಕ್ಕೆ ಹೋಗಿದ್ದು, ಊಟ ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಜೋಡಗಟ್ಟೆ-ಹಿರೀಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-41, ಎಂಬಿ-1470 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ  ಶ್ರೀ ಸುರೇಶ್ ಬಿನ್ ಲೇಟ್ ನಂಜೇಗೌಡ, 36 ವರ್ಷ, 2) ರಂಗಸ್ವಾಮಿ ಬಿನ್ ಯಲ್ಲಯ್ಯ @ ಯಾಡಯ್ಯ, 50 ವರ್ಷ, ಇಬ್ಬರೂ ಬರಗೂರು ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕು  ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆಂದು ಮೃತ ಶ್ರೀ ಸುರೇಶ್, ರವರ ಪತ್ನಿ ಶ್ರೀಮತಿ ಸಾಕಮ್ಮ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ
ದಿನಾಂಕ: 31-03-2018 ರಂದು ಬೆಳಿಗ್ಗೆ 4-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕಡವಿನಕೋಟೆ ಗ್ರಾಮದ ವಾಸಿ ಶ್ರೀ ಪರಮೇಶ್, ರವರ ಪತ್ನಿ ಶ್ರೀಮತಿ ಅನಿತಾ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಅನಿತಾಳ ಪತಿ ಶ್ರೀ ಪರಮೇಶ್, ರವರು ದಿನಾಂಕ: 01-04-2018 ರಂದು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಅನಿತಾ ಕೋಂ ಪರಮೇಶ್, 26 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08175-273333 ಕ್ಕೆ ಸಂಪರ್ಕಿಸುವುದು.

No comments: