* * * * * * HASSAN DISTRICT POLICE

Monday, April 2, 2018

PRESS NOTE : 01-04-2018


ಪತ್ರಿಕಾ ಪ್ರಕಟಣೆ             ದಿನಾಂಕ:01-04-2018

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಅರಕಲಗೂಡು & ಹಾಸನ ತಾಲ್ಲೂಕುಗಳ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂವರ ಬಂಧನ, ಬಂಧಿತರಿಂದ ಸುಮಾರು 5,017/- ನಗದು ವಶ:
ಪ್ರಕರಣ-01 : ದಿನಾಂಕ: 31-03-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಅಂತನಹಳ್ಳಿ ಗೇಟ್  ಹತ್ತಿರವಿರುವ ಧನುಷ್ ಹೋಟೆಲ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಎಸ್.ಪಿ. ವಿನೋಧ್ರಾಜ್, ಪಿಎಸ್ಐ, ಚನ್ನರಾಯಪಟ್ಟಣ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಸ್ವಾಮಿ ಬಿನ್ ನಾಗರಾಜ, 35 ವರ್ಷ, ಅಂತನಹಳ್ಳಿ ಗೇಟ್ ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 2,358/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-02 :  ದಿನಾಂಕ: 31-03-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಬಬ್ಬಗಳಲೆ ಗ್ರಾಮದ ವಾಸಿ ಶ್ರೀ ರವಿ, ರವರ ಬಾಬ್ತು ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಎಂ.ಹೆಚ್. ಆನಂದ, ಎಎಸ್ಐ, ಅರಕಲಗೂಡು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರವಿ ಬಿನ್ ಲೇಟ್ ಕೃಷ್ಣೇಗೌಡ, 36 ವರ್ಷ, ಬಬ್ಬಗಳಲೆ ಗ್ರಾಮ, ಮಲ್ಲಿಪಟ್ಟಣ ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1462/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.


ಪ್ರಕರಣ-03 : ದಿನಾಂಕ: 31-03-2018 ರಂದು ಸಂಜೆ 5-20 ಗಂಟೆ ಸಮಯದಲ್ಲಿ ಶ್ರೀ ಎಸ್.ಕೆ. ಕೃಷ್ಣ, ಪಿಎಸ್ಐ, ಶಾಂತಿಗ್ರಾಮ ಪೊಲೀಸ್ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಶಾಂತಿಗ್ರಾಮ ಟೋಲ್ ರೌಂಡ್ಸ್ ಮಾಡಿಕೊಂಡು ಹೋಗುತ್ತಿದ್ದಾಗ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಹೆಚ್.ಹಲಸಿನಹಳ್ಳಿ, ಮಳಲಿ ರಸ್ತೆಯ ಹೊಂಗೆ ಮರದ ಹತ್ತಿರ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶಿವೇಗೌಡ ಬಿನ್ ಪುಟ್ಟೇಗೌಡ, 27 ವರ್ಷ, ಹೆಚ್. ಬಂಡೀಹಳ್ಳಿ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,197/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಕಾರು ಟ್ರ್ಯಾಕ್ಟರ್ಗೆ ಡಿಕ್ಕಿ, ಟ್ರ್ಯಾಕ್ಟರ್ ಚಾಲಕ ಸಾವು : ದಿನಾಂಕ: 31-03-2018 ರಂದು ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಮಡೆನೂರು ಗ್ರಾಮದ ವಾಸಿ ಶ್ರೀ ಹರೀಶ್, ರವರ ಬಾಬ್ತು ನೊಂದಣಿಯಾಗದ ಟ್ರ್ಯಾಕ್ಟರ್ನಲ್ಲಿ ಅದೇ ಗ್ರಾಮದ ವಾಸಿ ಶ್ರೀ ಶಿವರಾಜ್ @ ಪುಟ್ಟ, ರವರೊಂದಿಎಗ ಟ್ರ್ಯಾಕ್ಟರ್ ಇಂಜಿನ್ಗೆ ಕಟ್ಲಿವೇಟರ್ನ್ನು ಅಳವಡಿಸಲು, ಚನ್ನರಾಯಪಟ್ಟಣಕ್ಕೆ ಹೋಗಲು ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಎನ್ಹೆಚ್-75 ಬಿ.ಎಂ. ರಸ್ತೆ, ಕೃಷಿ ಕಾಲೇಜ್ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-09 ಎಂಎ-8235 ರ ಹೊಂಡೈ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಟ್ರ್ಯಾಕ್ಟರ್ಗೆ ಡಿಕ್ಕಿ ಮಾಡಿ ಪಲ್ಟಿಯಾದ ಪರಿಣಾಮ ಶ್ರೀ ಹರೀಶ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಜನಪ್ರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಹರೀಶ್ ಬಿನ್ ಕೃಷ್ಣೇಗೌಡ, 25 ವರ್ಷ, ಮಡೆನೂರು ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು, ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತ ಸಂಬಂಧಿಕರಾದ ಶ್ರೀ ವಸಂತ್ಕುಮಾರ್, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: