* * * * * * HASSAN DISTRICT POLICE

Tuesday, April 3, 2018

PRESS NOTE 03-04-2018




ಪತ್ರಿಕಾ ಪ್ರಕಟಣೆ             ದಿನಾಂಕ:03-04-2018

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 900/- ಬೆಲೆಯ ಮದ್ಯ ವಶ: ದಿನಾಂಕ: 02-04-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಗೊರೂರು ಪೇಟೆ ಬೀದಿ ವಾಸಿ ಶ್ರೀ ಚಂದ್ರ, ರವರು ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾರೆಂದು ಶ್ರೀ ಈಶ್ವರಪ್ಪ, ಹೆಚ್ಸಿ-232, ಗೊರೂರು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತಿ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಚಂದ್ರು ಬಿನ್ ಈರಯ್ಯ, 60 ವರ್ಷ, ಅಂಬೇಡ್ಕರ್ ನಗರ, ಗೊರೂರು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 900/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ, ಬಂಧಿತರಿಂದ ಸುಮಾರು 1,320/- ಬೆಲೆಯ ಮದ್ಯ ವಶ: ದಿನಾಂಕ: 02-04-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಶಾಂತಿಗ್ರಾಮ ಪೊಲೀಸ್ ಠಾಣೆಯ ಶ್ರೀ ಎಂ.ಎನ್. ಜಯಕುಮಾರ್, ಹೆಚ್ಸಿ-154 ಮತ್ತು ಶ್ರೀ ಪಾಲಾಕ್ಷ-494, ರವರುಗಳು ವಡ್ಡರಹಳ್ಳಿ ಗ್ರಾಮದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಶಾಂತಿಗ್ರಾಮದ ಗ್ರಾಮದ ವಾಸಿ ಶ್ರೀಮತಿ ಸಾವಿತ್ರಮ್ಮ, ರವರ ಬಾಬ್ತು ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಸಾವಿತ್ರಮ್ಮ ಕೋಂ ರಂಗಸ್ವಾಮಿಶೆಟ್ಟಿ, 66 ವರ್ಷ, ಶಾಂತಿಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಸುಮಾರು 1,320/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪಿಐ, ಡಿಸಿಐಬಿ ದಾಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಇಬ್ಬರ ಬಂಧನ, ಮರಳು ಸಮೇತ 2 ಟಿಪ್ಪರ್ ಲಾರಿಗಳ ವಶ:  ದಿನಾಂಕ: 02-04-2018 ರಂದು ಬೆಳಗಿನ ಜಾವ 2-00 ಗಂಟೆ ಸಮಯದಲ್ಲಿ ಅರಸೀಕೆರೆ ನಗರಕ್ಕೆ ಹುಳಿಯಾರು ಮಾರ್ಗವಾಗಿ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದಾರೆಂದು ಶ್ರೀ ಮಂಜು, ಪಿಐ, ಡಿಸಿಐಬಿ ಘಟಕ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಕೆಎ-03, ಡಿ-869 ಮತ್ತು ಜಿಎ-09,ಯು-3095 ರ ಟಿಪ್ಪರ್ ಲಾರಿಗಳಲ್ಲಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಜಬೀವುಲ್ಲಾ ಬಿನ್ ಬಾಷಸಾಬ್ 24 ವರ್ಷ, ಚಾಲಕ, ಸರ್ಕಾರಿ ಆಸ್ಪತ್ರೆ ಹಿಂಭಾಗ, ಎನ್ಇಎಸ್ಬಡಾವಣೆ, ಹೊಸದುರ್ಗಾ ಟೌನ್, ಚಿತ್ರದುರ್ಗ ಜಿಲ್ಲೆ, 2) ಲೋಕೇಶ್ ಬಿನ್ ಕೆಂಚಪ್ಪ, 37 ವರ್ಷ, ಚಾಲಕ, ಮತ್ತೋಡು ಗ್ರಾಮ, ಹೊಸದುಗರ್ಾ ತಾಲ್ಲೂಕು, ಚಿತ್ರದುರ್ಗಾ ಜಿಲ್ಲೆ,  (ಹಾಲಿ ವಾಸ ಕಲ್ಲೇಶ್ವರ ಬಡಾವಣೆ ಹೊಸದುರ್ಗಾ) ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಟಿಪ್ಪರ್ ಲಾರಿಗಳ ಸಮೇತ ಮರಳನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.




No comments: