* * * * * * HASSAN DISTRICT POLICE

Thursday, March 1, 2018

PRESS NOTE : 26-02-2018


ಪತ್ರಿಕಾ ಪ್ರಕಟಣೆ             ದಿನಾಂಕ:26-02-2018
ಐಚರ್ ಕ್ಯಾಂಟರ್ ಡಿಕ್ಕಿ, ಪಾದಚಾರಿ ಸಾವು

ದಿನಾಂಕ: 25-02-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಬೆಟ್ಟದಕೊಪ್ಪಲು ಗ್ರಾಮದ ವಾಸಿ ಶ್ರೀ ಸುಬ್ಬೇಗೌಡ, ರವರು ತಮ್ಮ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಎನ್ಹೆಚ್-75 ಬಿ.ಎಂ. ರಸ್ತೆ ದಾಟಲೆಂದು ನಿಂತಿದ್ದಾಗ ಎದುರುಗಡೆಯಿಂದ ಬಂದ ಕೆಎ-13 ಬಿ-3724 ರ ಐಚರ್ ಕ್ಯಾಂಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಸುಬ್ಬೇಗೌಡ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಸುಬ್ಬೇಗೌಡ ಬಿನ್ ಲೇಟ್ ನಂಜಪ್ಪ, 52 ವರ್ಷ, ಬೆಟ್ಟದಕೊಪ್ಪಲು ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಬಸವರಾಜು, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: