* * * * * * HASSAN DISTRICT POLICE

Tuesday, March 27, 2018

PRESS NOTE : 25-03-2018

ಪತ್ರಿಕಾ ಪ್ರಕಟಣೆ           ದಿನಾಂಕ: 25-03-2018

ಹೆಂಗಸು ಕಾಣೆ : ದಿನಾಂಕ: 22-03-2018 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ  ಹಾಸನದ ಜಿಲ್ಲೆಯ ಅರಸೀಕೆರೆ ತಾಲ್ಲೂಕು ಪಡುವನಹಳ್ಳಿ ಗ್ರಾಮದ ಗುರುಸ್ವಾಮಿ ಬೋವಿ ರವರ ಮಗಳಾದ ಶ್ರೀಮತಿ ಸವಿತಾ ಎಂಬುವವರು ತನ್ನ ಸಂಬಂಧಿ ಈರಾಬೋವಿಯವರೊಂದಿಗೆ ಅನಾರೋಗ್ಯದ ನಿಮಿತ್ತ ಅರಸೀಕೆರೆ ಪಟ್ಟಣದ ಆಸ್ಪತ್ರೆಗೆ ಬಂದಿದ್ದು ನಂತರ ಸಂಜೆ 04-00 ಗಂಟೆಯ ಸಮಯದಲ್ಲಿ ವಾಪಸ್ ಪಡುವನಹಳ್ಳಿಗೆ ಬರಲು ಅರಸೀಕೆರೆಯ ಬಸ್ ನಿಲ್ದಾಣಕ್ಕೆ ಬಂದು ಕುಳಿತಿದ್ದು ಆ ಸಮಯದಲ್ಲಿ ಈರಾಬೋವಿಯವರು ಹಣ್ಣು ತರಲೆಂದು ಮಾಕರ್ೆಟ್ಗೆ ಹೋಗಿ ವಾಪಸ್ ಬಂದು ನೋಡಲಾಗಿ ಬಸ್ನಿಲ್ದಾಣದಲ್ಲಿ ಇರದೇ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ಸವಿತಾ ಕೋಂ ಲೇಟ್ ಜಯಬೋವಿ, ರವರ ತಂದೆ ಶ್ರೀ ಗುರುಸ್ವಾಮಿ ಬೋವಿ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಸವಿತಾ ಕೋಂ ಲೇಟ್ ಜಯಬೋವಿ,, 22 ವರ್ಷ, 5'4'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08174-232233ಕ್ಕೆ ಸಂಪರ್ಕಿಸುವುದು.

No comments: