* * * * * * HASSAN DISTRICT POLICE

Tuesday, March 27, 2018

PRESS NOTE : 26-03-2018


ಪತ್ರಿಕಾ ಪ್ರಕಟಣೆ             ದಿನಾಂಕ:26-03-2018

ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು : ದಿನಾಂಕ: 26-03-2018 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಸಿಂಗಾಪುರ ಪಾಳ್ಯ ಗ್ರಾಮದ ವಾಸಿ ಶ್ರೀ ಸೋಮಶೇಖರ್, ರವರ ಬಾಬ್ತು ಕೆಎ-13, ಯು-2246 ಫ್ಯಾಶನ್ ಬೈಕ್ನಲ್ಲಿ ಸಂಬಂಧಿಕರಾದ ಶ್ರೀ ಪುಟ್ಟಸ್ವಾಮಿ, ರವರೊಂದಿಗೆ ಹೊಳೆನರಸೀಪುರಕ್ಕೆ ಬಂದು ಶ್ರೀ ಪುಟ್ಟಸ್ವಾಮಿ ರವರನ್ನು ಬಿಟ್ಟು ತಮ್ಮ ಗ್ರಾಮಕ್ಕೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಸಿಂಗಾಪುರ ಪಾಳ್ಯದ ಗ್ರಾಮದ  ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-46, ಟಿ-3487, ಕೆಎ-13, 929 ರ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿ ಪರಿಣಾಮ ಶ್ರೀ ಸೋಮಶೇಖರ ಬಿನ್ ರಂಗಸ್ವಾಮಿ, 18 ವರ್ಷ, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ರಂಗಸ್ವಾಮಿ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ  : ದಿನಾಂಕ: 24-03-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಹಿರಿಗರ್ಜೆ ಗ್ರಾಮದ ವಾಸಿ ಶ್ರೀ ಗುರುರಾಜು, ರವರ ಮಗಳು ಕು|| ಸುರಕ್ಷಾ, ಚಿಕ್ಕಮಗಳೂರಿನ ನಿರ್ವಾಹಣಾಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸುರಕ್ಷಾಳ ತಂದೆ ಶ್ರೀ ಗುರುರಾಜು, ರವರು ದಿನಾಂಕ: 25-03-2018 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸುರಕ್ಷಾ ಬಿನ್ ಗುರುರಾಜು, 24 ವರ್ಷ, 5'4 ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಟಾಪ್ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-222444  ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 22-03-2018 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಹಾಸನದ ವಿಜಯನಗರ ಬಡಾವಣೆ ವಾಸಿ ಶ್ರೀಮತಿ ರಾಣಿ, ರವರ ಮಗಳು ಕು|| ಯಶಸ್ವಿನಿ, ಮನೆಯಿಂದ ಹೊರಗೆ ಹೋದವಳು ಇದು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಯಶಸ್ವಿನಿಯ ತಾಯಿ ಶ್ರೀಮತಿ ರಾಣಿ, ರವರು ದಿನಾಂಕ: 25-03-2018 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಯಶಸ್ವಿನಿ ಬಿನ್ ಲೇಟ್ ಶಿವಕುಮಾರ್, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿಧಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08170-272260 ಕ್ಕೆ ಸಂಪರ್ಕಿಸುವುದು.

No comments: