* * * * * * HASSAN DISTRICT POLICE

Tuesday, March 27, 2018

PRESS NOTE : 24-03-2018


ಪತ್ರಿಕಾ ಪ್ರಕಟಣೆ           ದಿನಾಂಕ: 24-03-2018
               
ಜಿಲ್ಲೆಯ ವಿವಿದೆಡೆ ಅಕ್ರಮ ಮದ್ಯ ಮಾರುತ್ತಿದ್ದ 02 ಜನರ ಬಂಧನ, ಬಂದಿತರಿಂದ 1845/- ರೂ ಬೆಲೆಯ ಮದ್ಯ ವಶ
ಪ್ರಕರಣ 01 :  ದಿನಾಂಕ: 23-03-2018 ರಂದು ಮಧ್ಯಾಹ್ನ 02-12 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಮುದ್ದನಹಳ್ಳಿ ಗ್ರಾಮದ ಜಗದೀಶ ಬಿನ್ ಲೇ. ಕೃಷ್ಣನಾಯ್ಕ ರವರು ತನ್ನ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಪುರುಶೋತ್ತಮ, ಪಿಎಸ್ಐ, ಅರಸೀಕೆರೆ ಗ್ರಾಮಾಂತರ ವೃತ್ತ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಜಗದೀಶ ಬಿನ್ ಲೇ. ಕೃಷ್ಣನಾಯ್ಕ, 43 ವರ್ಷ, ಮುದ್ದನಹಳ್ಳಿ ಗ್ರಾಮ, ಅರಸೀಕೆರೆ ತಾಲ್ಲೂಕು, ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿ, ಮಾರಾಟಕ್ಕಿಟ್ಟಿದ್ದ, ಸುಮಾರತು 1575/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
               
ಪ್ರಕರಣ:02 ದಿನಾಂಕ: 23-03-2018 ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ಅರಸೀಕೆರೆಯ ರಂಗನಾಥ ವೈನ್ಸ್ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಯೋಗಾಂಜನಪ್ಪ, ಪಿಎಸ್ಐ, ಅರಸೀಕೆರೆ ನಗರ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಸಿದ್ದೇಶ ಬಿನ್ ವೀರಭದ್ರಯ್ಯ, 40 ವರ್ಷ, ಬೆಳಗುಂಬ ಗ್ರಾಮ, ಅರಸೀಕೆರೆ ತಾಲ್ಲೂಕು, ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿ, ಮಾರಾಟಕ್ಕಿಟ್ಟಿದ್ದ, ಸುಮಾರತು 270/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

No comments: