* * * * * * HASSAN DISTRICT POLICE

Wednesday, March 7, 2018

PRESS NOTE : 06-03-2018


ಪತ್ರಿಕಾ ಪ್ರಕಟಣೆ             ದಿನಾಂಕ: 06-03-2018
ಜೂಜಾಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ ಸುಮಾರು 6,300/- ನಗದು ವಶ:
ದಿನಾಂಕ: 05-03-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಗುಂಡ್ಕಾನಹಳ್ಳಿ ಇಟ್ಟಿಗೆ ಫ್ಯಾಕ್ಟರಿ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ಯೋಗನಂಜಪ್ಪ, ಪಿಎಸ್ಐ, ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕಾಂತರಾಜನಾಯ್ಕ್ ಬಿನ್ ಪುಟ್ಟನಾಯ್ಕ್, 27 ವರ್ಷ, ಹಿರಿಯೂರು ಗ್ರಾಮ, ಅರಸೀಕೆರೆ ತಾಲ್ಲೂಕು 2) ಕಿರಣ್ರಾಜ ಬಿನ್ ಕುಮಾರ್, 23 ವರ್ಷ, ಸುಭಾಷ್ನಗರ, ಅರಸೀಕೆರೆ ನಗರ 3) ಮನೋಜ್ ಬಿನ್ ಶಾಂತಕುಮಾರ್, 24 ವರ್ಷ, ತಿರುಪತಿ ಗ್ರಾಮ, ಅರಸೀಕೆರೆ ತಾಲ್ಲೂಕು 4) ಹರೀಶ್ ಬಿನ್ ದೇವರಾಜು, 31 ವರ್ಷ, ಬಸವೇಶ್ವರನಗರ, ಅರಸೀಕೆರೆ ನಗರ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 6,300/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ಬೈಕ್ ಸಾವರ ಸಾವು:
ದಿನಾಂಕ: 05-03-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಸೋಮವಾರಪೇಟೆ ತಾಲ್ಲೂಕು, ಶನಿವಾರಸಂತೆ ಹೋಬಳಿ, ಯಡಳ್ಳಿ ಗ್ರಾಮದ ವಾಸಿ ಶ್ರೀ ಚೇತನ್, ರವರ ಬಾಬ್ತು ಕೆಎ-41  ಡಬ್ಲ್ಯೂ-9218 ರ ಬೈಕ್ನಲ್ಲಿ ಅರಕಲಗೂಡು ಕಾಲೇಜಿನಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಎದಿನಂತೆ ಕಾಲೇಜಿಗೆ ಹೋಗಲು ಅರಕಲಗೂಡು ತಾಲ್ಲೂಕು, ಅರಕಲಗೂಡು-ಮಲ್ಲಿಪಟ್ಟಣ ರಸ್ತೆ, ವಿಜಾಪುರ ಕಾಲೋನಿಯ ಏತನೀರಾವರಿ ಯೋಜನೆಯ ತಿರುವು ರಸ್ತೆಯ ಹತ್ತಿರ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಎದುರುಗಡೆಯಿಂದ ಬಂದ ಕೆಎ-57 ಎಫ್-2541 ರ ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ  ಶ್ರೀ ಚೇತನ್ ಬಿನ್ ಪ್ರವೀಣ, 21 ವರ್ಷ, ಯಡಳ್ಳಿ ಗ್ರಾಮ, ಶನಿವಾರಸಂತೆ ಹೋಬಳಿ, ಸೋಮವಾರಪೇಟೆ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದಶರ್ಿ, ಶ್ರೀ ಡಿ.ಆರ್. ರಂಗಪ್ಪ, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಗಂಡಸು ಕಾಣೆ
ದಿನಾಂಕ: 03-03-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಹುಳುವಾರೆ ಗ್ರಾಮದ ವಾಸಿ ಶ್ರೀ ಹೆಚ್.ಸಿ. ಧರಣೇಂದ್ರ, ರವರ ಬಾಬ್ತು ಕೆಎ-13 ವಿ-6930 ರ ಬೈಕ್ನಲ್ಲಿ ಮಕ್ಕಳ ಶಾಲಾ ಫಿಜ್ ಕಟ್ಟಿ ಬರುವುದಾಗಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಧರಣೇಂದ್ರ, ರವರ ತಮ್ಮ ಶ್ರೀ ಯಧುರಾಜ್, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಧರಣೇಂದ್ರ ಬಿನ್ ಲೇಟ್ ಚಂದ್ರಗೌಡ, 32 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-258038 ಕ್ಕೆ ಸಂಪಕರ್ಿಸುವುದು.

No comments: