* * * * * * HASSAN DISTRICT POLICE

Monday, March 5, 2018

PRESS NOTE : 05-03-2018


ಪತ್ರಿಕಾ ಪ್ರಕಟಣೆ             ದಿನಾಂಕ: 05-03-2018
ಕಾರು ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು:
     ದಿನಾಂಕ: 04-03-3018 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕಗೊಂಡನಹಳ್ಳಿ ಗ್ರಾಮದ ವಾಸಿ ಶ್ರೀ ಪಾಂಡುರಂಗ ರವರ ಬಾಬ್ತು ಕೆಎ-13 ಇಎ-6674 ರ ಟಿವಿಎಸ್ ಸ್ಟಾರ್ ಸಿಟಿ ಬೈಕ್ನಲ್ಲಿ ಮಗಳು ಕು|| ರಕ್ಷಿತಳನ್ನು ಚನ್ನರಾಯಪಟ್ಟಣಕ್ಕೆ ಕರೆದುಕೊಂಡು ಹೋಗಿ ಬೆಂಗಳೂರಿನ ಬಸ್ ಹತ್ತಿಸಿ ವಾಪಸ್ ತಮ್ಮ ಗ್ರಾಮಕ್ಕೆ ಹೋಗಿ ಚನ್ನರಾಯಪಟ್ಟಣ ತಾಲ್ಲೂಕು, ಚಿಕ್ಕಗೊಂಡನಹಳ್ಳಿ ಗೇಟ್ ಹತ್ತಿರ ಹೋಗುತಿದ್ದಾಗ ಹಿಂಬದಿಯಿಂದ ಬಂದ ಕೆಎ-04, ಪಿ-4233ಎ ಸ್ಯಾಟ್ರೋ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಪಾಂಡುರಂಗ ಬಿನ್ ಲೇಟ್ ನಂಜುಂಡೇಗೌಡ, 54 ವರ್ಷ, ಚಿಕ್ಕಗೊಂಡನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಬೊಮ್ಮೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಟ್ರ್ಯಾಕ್ಟರ್ನ ನಿಯಂತ್ರಣ ತಪ್ಪಿ, ಟ್ರ್ಯಾಕ್ಟರ್ ಕೆಳಕ್ಕೆ ಬಿದ್ದು ಒಂದು ಸಾವು
ದಿನಾಂಕ: 04-03-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೈಕೆರೆ ಗಡಿ ಗ್ರಾಮದ ವಾಸಿ ಶ್ರೀ ಸುಂದರ, ರವರು ಅದೇ ಗ್ರಾಮದ ಶ್ರೀ ರಾಜೇಗೌಡ, ಮತ್ತು ಶ್ರೀ ಶಿವ ರವರೊಂದಿಗೆ ಕೆಎ-46 ಟಿ-2880-81 ರ ಟ್ರ್ಯಾಕ್ಟರ್ನಲ್ಲಿ ಸಕಲೇಶಪುರ ತಾಲ್ಲೂಕು, ಜನ್ನಾಪುರ ಗ್ರಾಮದ ಎಂ.ವಿ ರಾಜಶೇಖರ್, ರವರ ಬಾಬ್ತು ಕಾಫಿ ತೋಟದಲ್ಲಿ ಕಾಳು ಮೆಣಸು ಕೂಯ್ಯಲು ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಬೈಕೆರೆ ಗಡಿ ಹತ್ತಿರ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದ ಪರಿಣಾಮ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಶ್ರೀ ಸುಂದರ್, ರವರು ಕೆಳಕ್ಕೆ ಬಿದಿದ್ದು, ಟ್ರ್ಯಾಕ್ಟರ್ ಟ್ರೇಲರ್ನ ಚಕ್ರ ಹರಿದು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಕಲೇಶಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಸುಂದರ ಬಿನ್ ಕರಿಯ, 42 ವರ್ಷ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತ ಪತ್ನಿ ಶ್ರೀಮತಿ ಯಮುನಾ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಗಂಡಸು ಕಾಣೆ
ದಿನಾಂಕ: 18-02-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ಟೌನ್, ಟ್ಯಾಂಕ್ ಬಡಾವಣೆ ವಾಸಿ ಶ್ರೀ ಮಹೇಂದ್ರ, ರವರು ಲಿವರ್ ಜಾಂಡೀಸ್ ಕಾಯಿಲೆಯಾಗಿದ್ದು, ಇವರು ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಮಹೇಂದ್ರ, ರವರ ಪತ್ನಿ ಶ್ರೀಮತಿ ಪೂಣರ್ಿಮ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಮಹೇಂದ್ರ ಬಿನ್ ರಾಯಪ್ಪ, 35 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಶಟರ್್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪಕರ್ಿಸುವುದು.


No comments: