ಪತ್ರಿಕಾ ಪ್ರಕಟಣೆ ದಿನಾಂಕ:04-02-2018
ಹುಡುಗಿ ಕಾಣೆ
: ದಿನಾಂಕ :23-01-2018 ರಂದು
ಬೆಳಗ್ಗೆ 8.00 ಗಂಟೆ
ಸಮಯದಲ್ಲಿ ಬೇಲೂರು ತಾಲ್ಲೂಕ್ ಬಿಕ್ಕೋಡುಗ್ರಾಮದ ವಾಸಿ ಬಸವರಾಜು ರವರ ಮಗಳು ರಚನಾ ರವರು
ಮನೆಯಿಂದ ಹೊರಗೆ ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ
ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ರಚನಳ ತಂದೆ ಬಸವರಾಜು ರವರು
ದಿ :03-2-2018 ರಂದು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.
ಕಾಣೆಯಾದ ಹುಡುಗಿ ಚಹರೆ : ರಚನ.ಬಿ ಬಿನ್ ಬಸವರಾಜು 24ವರ್ಷ, 5.3 ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ
ಮೈಕಟ್ಟು, ಕೋಲುಮುಖ, ಕನ್ನಡ ಬಾಷೆ
ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ
ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿ ಪತ್ತೆಯಾದಲ್ಲಿ ಅರೇಹಳ್ಳಿ ಪೊಲೀಸ್ ಠಾಣೆ ಫೋನ್ ನಂ. 08177-221342 ಕ್ಕೆ ಸಂಪರ್ಕಿಸುವುದು.
No comments:
Post a Comment