* * * * * * HASSAN DISTRICT POLICE

Tuesday, February 6, 2018

PRESS NOTE : 03-02-2018


ಪತ್ರಿಕಾ ಪ್ರಕಟಣೆ                     ದಿನಾಂಕ: 03-02-2018.

ಮಗನೊಂದಿಗೆ ತಾಯಿ ಕಾಣೆ  :           ದಿನಾಂಕ: 25-01-2018 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರು ಹೋಬಳಿ, ಮಾಚಗೌಡನಹಳ್ಳಿಕೊಪ್ಪಲು ಗ್ರಾಮದ ಶಿವರಾಜ ರವರ ಪತ್ನಿ ಶ್ರೀಮತಿ ಅನು ತನ್ನ ಮಗ ವಿಜಯ್ನೊಂದಿಗೆ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಅನು ರವರ ಪತಿ ಶ್ರೀ ಶಿವರಾಜ ರವರು ದಿನಾಂಕ: 02-02-2018 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದವರ ಚಹರೆ: 1) ಅನು ಕೋಂ ಶಿವರಾಜ, 28 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ 2) ವಿಜಯ್ ಬಿನ್ ಶಿವರಾಜ, 28 ವರ್ಷ, 3'' ಅಡಿ ಎತ್ತರ,  ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಹಳ್ಳಿಮೈಸೂರು ಠಾಣೆ ಫೋನ್ ನಂ. 08175-260100 ಕ್ಕೆ ಸಂಪರ್ಕಿಸುವುದು.
  
ಹೆಂಗಸು ಕಾಣೆ : ದಿನಾಂಕ: 01-02-2018 ರಂದು  ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ, ಗಾಯಿತ್ರಿ ಬಡಾವಣೆ ವಾಸಿ ವೆಂಕಟೇಶ್ ಡಿ.ಆರ್. ರವರ ಪತ್ನಿ ಶಶಿಕಲಾ ವಿ.ಕೆ. ರವರು ಎಂದಿನಂತೆ  ಶ್ರವಣಬೆಳಗೊಳ ಹೋಬಳಿ, ರಾಚೇನಹಳ್ಳಿ ಜಿ.ಎಲ್.ಪಿ.ಎಸ್. ಶಾಲೆಗೆ ಕರ್ತವ್ಯಕ್ಕೆ ಹೋದವರು ವಾಪಸ್  ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶಶಿಕಲಾ ರವರ ಪತಿ ಶ್ರೀ ವೆಂಕಟೇಶ್, ಡಿ.ಆರ್. ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶಶಿಕಲಾ ವಿ.ಕೆ. ಕೋಂ ವೆಂಕಟೇಶ್, ಡಿ.ಆರ್. 32 ವರ್ಷ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಶ್ರವಣಬೆಳಗೊಳ ಠಾಣೆ ಫೋನ್ ನಂ. 08176-257229   ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ :     ದಿನಾಂಕ: 29-01-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಸೋಮೆನಹಳ್ಳಿ ಗ್ರಾಮದ  ವಿರೂಪಾಕ್ಷ ರವರ ಮಗಳು ವರ್ಷ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ವರ್ಷ ರವರ ತಾಯಿ ಶ್ರೀಮತಿ ಉಮಾ ರವರು ದಿನಾಂಕ: 03-02-2018 ರಂದು ಕೊಟ್ಟ ದೂರಿನ ಮೇರೆಗೆ  ಗಂಡಸಿ ಕಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ವರ್ಷ ಬಿನ್ ವಿರೂಪಾಕ್ಷ, 19 ವರ್ಷ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಗಂಡಸಿ ಠಾಣೆ ಫೋನ್ ನಂ.   08174-220630 ಕ್ಕೆ ಸಂಪರ್ಕಿಸುವುದು.

No comments: