* * * * * * HASSAN DISTRICT POLICE

Tuesday, February 6, 2018

PRESS NOTE : 05-02-2018


ಪತ್ರಿಕಾ ಪ್ರಕಟಣೆ                           ದಿನಾಂಕ: 05-02-2018.

ಬೈಕ್ ಡಿಕ್ಕಿ ಪಾದಾಚಾರಿ ಸಾವು :          ದಿನಾಂಕ: 04-02-2018 ರಂದು ರಾತ್ರಿ 11-45 ರಿಂದ 12-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಹಂಪಾಪುರ ಗ್ರಾಮದ ಗಣೇಶ ರವರು ರಾಮನಾಥಪುರದ ಬಸವೇಶ್ವರ ಸರ್ಕಲ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13-ವಿ-8425 ರ ಹಿರೋಹಿಂಡಾ  ಪ್ಯಾಷನ್ ಪ್ಲಸ್ ಬೈಕ್ ಸವಾರ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಕೊಣನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ಗಣೇಶ  ಬಿನ್ ನಂಜುಂಡೇಗೌಡ, 35 ವರ್ಷ ರವರರು ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಮಹೇಶ ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಗಂಡಸು ಕಾಣೆ  : ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಅತ್ತಿಹಳ್ಳಿ ಗ್ರಾಮದ  ಚನ್ನೇಗೌಡ ರವರ  ಹಿರಿಯ  ಮಗ ಶಿವಕುಮಾರನು ಹುಟ್ಟಿದಾಗಿನಿಂದಲು ಬುದ್ದಿಮಾಂದ್ಯನಾಗಿದ್ದು, ಈತನು ಮನೆ ಬಿಟ್ಟು ಹೋದರೆ ಊರೂರು ಅಲೆಯುತ್ತಾ ಎಲ್ಲೆಂದರಲ್ಲಿ ಮಲಗುತ್ತಾ ತಿರುಗಾಡುತ್ತಿದ್ದು, ದಿನಾಂಕ: 28-08-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಮನೆ ಬಿಟ್ಟು ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶಿವಕುಮಾರನ  ತಂದೆ ಶ್ರೀ ಚನ್ನೇಗೌಡ ರವರು ದಿನಾಂಕ: 04-02-2018 ರಂದು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಶಿವಕುಮಾರ ಬಿನ್ ಚನ್ನೇಗೌಡ, 40 ವರ್ಷ, 3'' ಅಡಿ ಎತ್ತರ, ಕೋಲುಮುಖ, ದೃಡಕಾಯ ಶರೀರ, ಸಣ್ಣತಲೆ, ಬಲಗಡೆ ಕುತ್ತಿಗೆಯಲ್ಲಿ ಹಳೆ ಗಾಯದ ಗುರುತಿದೆ.  ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ  ನುಗ್ಗೇಹಳ್ಳಿ ಠಾಣೆ ಫೋನ್ ನಂ. 08176-233033  ಕ್ಕೆ ಸಂಪರ್ಕಿಸುವುದು.

No comments: