* * * * * * HASSAN DISTRICT POLICE

Monday, January 22, 2018

PRESS NOTE : 22-01-2018

ಪತ್ರಿಕಾ ಪ್ರಕಟಣೆ             ದಿನಾಂಕ: 22-01-2018
ಹುಡುಗಿ ಕಾಣೆ
ದಿನಾಂಕ: 17-01-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಟೌನ್, ಅಂಬೇಡ್ಕರ್ ಕಾಲೋನಿ ವಾಸಿ ಶ್ರೀ ಅಣ್ಣಯ್ಯ ರವರು ಕು|| ಸೌಮ್ಯ, ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು, ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸೌಮ್ಯಳ ಮಾವ ಶ್ರೀ ಬೈರೇಶ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸೌಮ್ಯ ಬಿನ್ ಅಣ್ಣಯ್ಯ, 20 ವರ್ಷ, 5'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-273201  ಕ್ಕೆ ಸಂಪರ್ಕಿಸುವುದು.



No comments: