* * * * * * HASSAN DISTRICT POLICE

Tuesday, January 23, 2018

PRESS NOTE : 23-01-2018

ಪತ್ರಿಕಾ ಪ್ರಕಟಣೆ             ದಿನಾಂಕ: 23-01-2018

ಕೊಲೆ ಅಪರಾಧದಡಿ 3 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ದಂಢ
             ಅರಸೀಕೆರೆ ನಗರ ಠಾಣಾ ಮೊ.ನಂ. 115/2010  ಹಾಗೂ ಎಸ್.ಸಿ. ಸಂಖ್ಯೆ 160/2010 ರ ಆರೋಪಿಗಳಾದ 1) ಸೈಯಾದ್ ಶಬ್ಬೀರ್ 2) ಅಬ್ದುಲ್ ಜಮೀಲ್ 3) ಗುಲ್ಜಾರ್ ಭಾನು, ಜೇನುಕಲ್ಲು ನಗರ,  3ನೇ ಕ್ರಾಸ್, ಅರಸೀಕೆರೆ ನಗರ ಇವರುಗಳಿಗೆ ಮಾನ್ಯ ನ್ಯಾಯಧೀಶರಾದ ಶ್ರೀ ಚನ್ನಕೇಶವ ಇವರು ಜೀವಾವಧಿ ಕಾರಗೃಹ ಶಿಕ್ಷೆ ಹಾಗೂ 10,000/- ರೂ ದಂಡ ವಿಧಿಸಿ ದಿನಾಂಕ: 18-01-2018 ರಂದು ತೀರ್ಪು ನೀಡಿರುತ್ತಾರೆ.
      ಪ್ರಕರಣದ ಸಾರಾಂಶವೇನೆಂದರೆ: 1ನೇ ಆರೋಪಿ ಶಬ್ಬೀರ್ ಈತನು ಸಕೀನಾಳನ್ನು ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ಹಣ ಮತ್ತು ಚಿನ್ನದ ಆಭರಣಗಳನ್ನು ವರದಕ್ಷಿಣೆಯಾಗಿ ಪಡೆದಿದ್ದರೂ ಸಹ ಇನ್ನೂ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಆಕೆಯ ಗಂಡ 1ನೇ ಆರೋಪಿ ಹಾಗೂ ಆಕೆಯ ಮಾವ ಮತ್ತು ಅತ್ತೆಯಾದ 2 ಮತ್ತು 3ನೇ ಆರೋಪಿತರು ಸಕೀನಾಗಳಿಗೆ ಕಿರುಕುಳ ನೀಡಿ ಆಕೆಯ ಕುತ್ತಿಗೆಯನ್ನು ಕೈಯಿಂದ ಹಿಸುಕಿ ಉಸಿರು ಗಟ್ಟಿಸಿ ಸಾಯಿಸಿದ್ದು, ಈ ಬಗ್ಗೆ ಮೃತ ಸಕೀಲಾಳ ಅಣ್ಣ ಸಿದ್ದಿಕ್ ಈತನು ಕೊಟ್ಟ ದೂರಿನ ಮೇರೆಗೆ ಆರೋಪಿತರ ವಿರುದ್ಧ ಅಪರಾದ ಮೊಕದ್ದಮೆ ನೊಂದಾಯಿಸಿಕೊಂಡು ಅರಸೀಕೆರೆ ಉಪ-ವಿಭಾಗದ ಡಿವೈಎಸ್ಪಿ ಆಗಿದ್ದ ಶ್ರೀಮತಿ ರಶ್ಮಿ, ಇವರು ಪ್ರಕರಣ ತನಿಖೆ ಮಾಡಿ ಆರೋಪಿತರು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಅಪರಾಧ ಮಾಡಿರುವುದಾಗಿ ಆರೋಪಿತರ ವಿರುದ್ಧ ಭಾ.ದಂ.ಸಂ ಕಲಂ 302, 498 (ಎ), 304 (ಬಿ) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 4 ರ ರೀತಿ ಅಪರಾಧ ಮಾಡಿರುವುದಾಗಿ ಆಪಾಧನ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
      ಪ್ರಕರಣದ  ವಿಚಾರಣೆಯು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಶ್ರೀ ಮಲ್ಲರಾಜೇಗೌಡ, ಪಬ್ಲಿಕ್ ಪ್ರಾಸಿಕ್ಯೂಟರ್, ಇವರು ಸರ್ಕಾರದ ಪರವಾಗಿ ಪ್ರಕರಣ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿದ್ದರು.
ಗಂಡಸು ಕಾಣೆ

    ಅರಸೀಕೆರೆ ಪಟ್ಟಣ ಮಟನ್ ಮಾಕರ್ೆಟ್ ವಾಸಿ ಇಪ್ತಾಕಾರ್ ಅಹಮದ್ ರವರು ಅರಸೀಕೆರೆ ಟೌನ್ ಸಕರ್ಾರಿ ಆಸ್ಪತ್ರೆ ಎದುರುಗಡೆ ದರ್ಗಾ ಪಕ್ಕ ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದು, ಈಗ್ಗೆ ಮೂರು ವರ್ಷಗಳ ಹಿಂದೆ ದಿನಾಂಕ: 14-09-2014 ರಂದು ಸಂಜೆ ಸುಮಾರು 04-00 ಗಂಟೆ ಸಮಯದಲ್ಲಿ ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಇಪ್ತಾಕಾರ್ ಅಹಮದ್ ರವರ ಪತ್ನಿ ಶ್ರೀಮತಿ ಶಹನಾಜ್ ಉನ್ನೀಸಾ ರವರು ದಿನಾಂಕ: 22-01-2018 ರಂದು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಇಪ್ತಾಕಾರ್ ಅಹಮದ್, 48 ವರ್ಷ, 5'6'' ಅಡಿ ಎತ್ತರ, ಕನ್ನಡ ಮತ್ತು ಉದರ್ು ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಅರಸೀಕೆರೆ ನಗರ ಠಾಣೆ  ಫೋನ್ ನಂ. 08174-232233 ಕ್ಕೆ ಸಂಪರ್ಕಿಸುವುದು.

No comments: