* * * * * * HASSAN DISTRICT POLICE

Sunday, December 31, 2017

PRESS NOTE : 31-12-2017

ಪತ್ರಿಕಾ ಪ್ರಕಟಣೆ               ದಿನಾಂಕ: 31-12-2017

ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ, ಮರಳು ಸಮೇತ ಓಮಿನಿ ವ್ಯಾನ್ ವಶ:
ದಿನಾಂಕ: 30/31-12-2017 ರಂದು ಬೆಳಗಿನ ಜಾವ 3-15 ಗಂಟೆ ಸಮಯದಲ್ಲಿ ಶ್ರೀ ಬಾಲಕೃಷ್ಣ, ಎಎಸ್ಐ, ಸಕಲೇಶಪುರ ನಗರ ಠಾಣೆ ರವರು ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಕಲೇಶಪುರ ತಾಲ್ಲೂಕು, ದೊಡ್ಡನಾಗರ ಗ್ರಾಮದ ಹೇಮಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಓಮ್ನಿನಿ ವಾಹನದಲ್ಲಿ ಮರಳು ಸಾಗಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸುನೀಲ್@ ಕುಮಾರ್ ಬಿನ್ ಸಂಗಯ್ಯ, 32 ವರ್ಷ, ಬೈಕೆರೆ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮರಳು ಸಮೇತ ಓಮಿನಿ ವ್ಯಾನ್ನ್ನು ಅಮಾನತ್ತು ಪಡಿಸಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಬೈಕ್ ಡಿಕ್ಕಿ, ಪಾದಚಾರಿ ಸಾವು
ದಿನಾಂಕ: 30-12-2017 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಇಬ್ಬೀಡು ಗ್ರಾಮದ ವಾಸಿ ಶ್ರೀ ನಾರಾಯಣಸ್ವಾಮಿ, ರವರು ಹಾಸನ ನಗರದ ಆರ್.ಸಿ. ರಸ್ತೆಯ ಮಾತಾಶ್ರಮ ಕ್ರಾಸ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ನೊಂದಣಿಯಾಗದ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ನಾರಾಯಣಸ್ವಾಮಿ ಬಿನ್ ರಾಜು, 50 ವರ್ಷ, ಇಬ್ಬೀಡು ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಐ.ಆರ್. ರಮೇಶ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ಡಿಕ್ಕಿ, ಪಾದ ಚಾರಿ ಸಾವು
ದಿನಾಂಕ: 30-12-2017 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಮುಸವತ್ತೂರು ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿಗೌಡ, ರವರು ಅರಕಲಗೂಡಿನಿಂದ ಹೊನ್ನವಳ್ಳಿ ಗ್ರಾಮದಕ್ಕೆ ಹೋಗಲು ಅರಕಲಗೂಡು ತಾಲ್ಲೂಕು, ಅರಕಲಗೂಡು-ಹೊಳೆನರಸೀಪುರ ರಸ್ತೆ, ಹೊನ್ನವಳ್ಳಿ ಗ್ರಾಮದ ಹೇಮಾವತಿ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18, ಕೆ-8610 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಪುಟ್ಟಸ್ವಾಮಿ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಪುಟ್ಟಸ್ವಾಮಿ ಬಿನ್ ಮರಿಹುಚ್ಚಯ್ಯ, 40 ವರ್ಷ, ಮುಸವತ್ತೂರು ಗ್ರಾಮ, ಮಲ್ಲಿಪಟ್ಟಣ ಹೋಬಳಿ, ಅರಕಲಗೂಡು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಗೀತಾ, ರವರು ಕೊಟ್ಟ ದೂರಿನ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: