* * * * * * HASSAN DISTRICT POLICE

Tuesday, October 3, 2017

PRESS NOTE : 03-10-2017

ಪತ್ರಿಕಾ ಪ್ರಕಟಣೆ        ದಿನಾಂಕ: 03-10-2017
ಜೂಜಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ 5,120/- ನಗದು ವಶ
      ದಿನಾಂಕ: 02-10-2017 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕುರುಬರಹಳ್ಳಿ ತಾಂಡ್ಯ ಗ್ರಾಮದ ಶಿಶುವಿಹಾರದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ರತನ್ಸಿಂಗ್ ಬಾಣಾವರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಘುನಾಯ್ಕ ಬಿನ್ ಗಂಗ್ಲಾನಾಯ್ಕ, 46 ವರ್ಷ, ಕುರುಬರಹಳ್ಳಿ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 2) ಹರೀಶ ಬಿನ್ ಗುಂಡನಾಯ್ಕ, 30 ವರ್ಷ, ತಿರುಪತಿ ತಾಂಡ್ಯ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 3) ದಿನೇಶ್ ಬಿನ್ ಗಂಗ್ಲಾನಾಯ್ಕ, 46 ವರ್ಷ, ಕುರುಬರ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 4) ರಮೇಶ ಬಿನ್ ಲಿಂಗಪ್ಪ, ಬೈರಗೊಂಡನಹಳ್ಳಿ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 5) ರವಿ ಬಿನ್ ರಮೇಶನಾಯ್ಕ, ಕುರುಬರಹಳ್ಳಿ  ತಾಂಡ್ಯ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 6) ಕೃಷ್ಣನಾಯ್ಕ ಬಿನ್ ಚಂದ್ರನಾಯ್ಕ, 50 ವರ್ಷ, ಕುರುಬರಹಳ್ಳಿ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 5,120/- ನಗದನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗಿ ಕಾಣೆ
       ದಿನಾಂಕ: 30-09-2017 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ, ತಗ್ಯಮ್ಮ ಬಡಾವಣೆ, ನವೋದಯ ಸ್ಕೂಲ್ ಹಿಂಭಾಗದ ವಾಸಿ ಶ್ರೀನಿವಾಸ ರವರ ಮಗಳು ನಂದಿನಿ ಮನೆಯಿಂದ ಎಂದಿನಂತೆ ಬ್ಯೂಟಿ ಪಾರ್ಲರ್ಗೆ ಕೆಲಸಕ್ಕೆಂದು ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನಂದಿನಿ ರವರ ಅಣ್ಣ ಆನಂದ ಎ.ಎಸ್. ರವರು ದಿನಾಂಕ: 02-10-2017 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ನಂದಿನಿ ಬಿನ್ ಶ್ರೀನಿವಾಸ, 18 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೊನ್ ನಂ. 08176-252333 ಕ್ಕೆ ಸಂಪಕರ್ಿಸುವುದು.                                                                                                 

ಬೈಕ್ನ ನಿಯಂತ್ರಣ ತಪ್ಪಿ ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದವನ ಸಾವು


    ದಿನಾಂಕ: 30-09-2017 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಗೊರೂರು ಟೌನ್, ಅಂಬೇಡ್ಕರ್ ನಗರ ವಾಸಿ ಗಿರೀಶ್ ಜಿ.ಆರ್. ರವರು ಸ್ನೇಹಿತ ಜಾವಿದ್ ಖಾನ್ ನೊಂದಿಗೆ ಕೆಎ-09-ಇಡಿ-9873 ರ ಟಿವಿಎಸ್ ವಿಕ್ಟರ್ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಅರಕಲಗೂಡಿನಲ್ಲಿ ನಡೆಯುತ್ತಿರುವ ದಸರಾ ನೋಡಲು ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಅಂಕನಾಯಕನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ, ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಬೀಳಿಸಿದ್ದರ ಪರಿಣಾಮ ಬೈಕ್ನಿಂದ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಜಿ.ಆರ್. ಬಿನ್ ರಂಗಯ್ಯ, 27 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿ ಶ್ರೀ ಹೇಮರಾಜು ಬಿ.ಆರ್. ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: