* * * * * * HASSAN DISTRICT POLICE

Tuesday, October 3, 2017

PRESS NOTE : 02-10-2017

ಪತ್ರಿಕಾ ಪ್ರಕಟಣೆ             ದಿನಾಂಕ: 02-10-2017
ಕಾರು ಡಿಕ್ಕಿ, ಮಹಿಳೆ ಸಾವು
     ದಿನಾಂಕ: 01-10-2017 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಬೆಂಗಳೂರು ನಗರದ  # 09 ಆರ್ಎಂವಿ, 2ನೇ ಹಂತ, 3ನೇ ಬ್ಲಾಕ್, ವಾಸಿ ಶ್ರೀಮತಿ ಬಿ.ಸಿ.ಮೀನಾಕ್ಷಮ್ಮ ರವರು ಪತಿ ಶ್ರೀ ಡಿ.ಬಿ. ಕುಮಾರಚಾರ್, ರವರ ಬಾಬ್ತು ಕೆಎ-04 ಸಿ-1438 ರ ಕಾರಿನಲ್ಲಿ ಉಜಿರೆಗೆ ಹೋಗಿ ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಉದಯಪುರದ ಹತ್ತಿರವಿರುವ ಎ2 ಬಿ ಹೋಟೆಲ್ಗೆ ಹೋಗಿ ತಿಂಡಿ ತಿಂದು ವಾಪಸ್ ಕಾರು ಬಳಿ ಶ್ರೀಮತಿ ಮೀನಾಕ್ಷಮ್ಮ, ರವರು ನಿಂತಿದ್ದಾಗ ಎದುರುಗಡೆಯಿಂದ ಬಂದ ಕೆಎ-04ಸಿ-1438 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ಮೀನಾಕ್ಷಮ್ಮ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶ್ರೀಮತಿ ಬಿ.ಸಿ. ಮೀನಾಕ್ಷಮ್ಮ ಕೋಂ ಕುಮಾರಚಾರ್, 63 ವರ್ಷ, # 09 ಆರ್ಎಂವಿ, 2ನೇ ಹಂತ, 3ನೇ ಬ್ಲಾಕ್, ಬೆಂಗಳೂರು ನಗರ ರವರು ಚಿಕಿತೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೃತರ ಪತಿ ಶ್ರೀ ಡಿ.ಬಿ. ಕುಮಾರಚಾರ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ನಿಯಂತ್ರಣ ತಪ್ಪಿ ಬೈಕ್ ಸಾವರನ ಸಾವು
     ದಿನಾಂಕ: 30-09-2017 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಡಿ.ಎಂ. ಕುಕರ್ೆ ಗ್ರಾಮದ ವಾಸಿ ಶ್ರೀ ದೀಪು, ರವರ ಬಾಬ್ತು ಕೆಎ-13-ಈಜಿ-386 ರ ಬೈಕ್ನಲ್ಲಿ ಹೊಳಲ್ಕೆರೆಗೆ ನಾಮಕರಣದ ಡೆಕೋರೇಷನ್ಗೆ ಹೋಗಲು ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಡಿ.ಎಂ. ಕುಕರ್ೆ ಗ್ರಾಮದ ಪ್ರತಿಮಾ ರಸಗೊಬ್ಬರದ ಅಂಗಡಿಯ ಮುಂಭಾಗ ಅರಸೀಕೆರೆ-ಹುಳಿಯಾರ್ ರಸ್ತೆಯಲ್ಲಿ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅರಸೀಕೆರೆ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ದೀಪು ಬಿನ್ ಲೇಟ್ ಚನ್ನಬಸಪ್ಪ, 23 ವರ್ಷ, ಡಿ.ಎಂ. ಕುಕರ್ೆ ಗ್ರಾಮ, ಕಣಕಟ್ಟೆ ಹೋಬಳಿ, ಅರಸೀಕೆರೆ ತಾಲ್ಲೂಕು, ರವರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸದ ಮೇರೆಗೆ ಮೃತರ ತಾಯಿ ಶ್ರೀಮತಿ ಲಕ್ಷ್ಮಮ್ಮ, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗ ಕಾಣೆ

     ದಿನಾಂಕ: 30-09-2017 ರಂದು ರಾತ್ರಿ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ಹಾದಿಗೆ ಗ್ರಾಮದ ಶ್ರೀ ಪ್ರದೀಪ, ರವರ ಮಗಳು ಕು|| ಪ್ರಿಯಾ ಊಟ ಮಾಡಿ ಮಲಗಿದ್ದು, ದಿನಾಂಕ: 01-10-2017 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ., ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಪ್ರಿಯಾಳ ತಂದೆ ಶ್ರೀ ಪ್ರದೀಪ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಪ್ರಿಯಾ ಬಿನ್ ಪ್ರದೀಪ, 19 ವರ್ಷ, ದ್ವಿತೀಯ ಪಿಯುಸಿ, ವಿದ್ಯಾಥರ್ಿನಿ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ & ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. 

No comments: