* * * * * * HASSAN DISTRICT POLICE

Tuesday, July 16, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 16-07-2019



                                      ಪತ್ರಿಕಾ ಪ್ರಕಟಣೆ                          ದಿನಾಂಕ: 16-07-2019

ಯಾರೋ 3 ಜನ ಅಪರಿಚಿತರು ಮನೆಯೊಳಗೆ ನುಗ್ಗಿ ಚಾಕು ತೋರಿಸಿ, ಕೊಲೆ ಬೆದರಿಕೆ ಹಾಕಿ 12.500/- ನಗದು ದೋಚಿಕೊಂಡು ಪರಾರಿ:
ದಿನಾಂಕ: 15-07-2019 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ಕ್ಯಾಮನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಭವಾನಿ, ರವರು ಮಗಳು ಕು|| ನಿಶಾ, ಶಾಲೆಗೆ ಹೋಗಲು ಮನೆಯಲ್ಲಿದ್ದಾಗ ಮನೆಯ ಹಿಂಭಾಗದ ಡೋರ್ ಹೊಡೆಯುವ ಶಬ್ಧ ಕೇಳಿದ್ದು, ಮನೆಯ ಬಾಗಿಲನ್ನು ತೆಗೆದು ನೋಡಿದಾಗ ಮೂರು ಜನರು ಮಂಕಿ ಕ್ಯಾಂಪ್ ಧರಿಸಿಕೊಂಡು ಕೈಯಲ್ಲಿ ಚಾಕು ಹಿಡಿದುಕೊಂಡು ಮನೆಯ ಹಿಂಬಾಗಿಲಿನಿಂದ ನುಗ್ಗಿ ಕು|| ನಿಶಾಳಿಗೆ ಚಾಕು ತೋರಿಸಿ, ಕೂಗಿದರೆ ಕೊಲೆ ಮಾಡುತ್ತೇವೆಂದು ಹೆದರಿಸಿ, ಕೋಲಿನಿಂದ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿ, ಬೀರುವಿನಲ್ಲಿಟ್ಟಿದ್ದ ಸುಮಾರು 12,500/- ನಗದನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆಂದು ಶ್ರೀಮತಿ ಭವಾನಿ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ಕಳವು
     ದಿನಾಂಕ: 08-07-2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಹಾಸನದ ವಿದ್ಯುತ್ ನಗರದ ಸಿದ್ದ ವಿನಾಯಕ ಪಿಜಿ ವಾಸಿ ಶ್ರೀ ಹೆಚ್.ಜಿ. ನಿಶ್ಚಿತ್, ಹಾಸನದ ರಾಮ್ಕೋ ಸಿಮೆಂಟ್ ಕಂಪನಿಯಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಪಿರ್ಯಾದಿಯವರ ತಂದೆ ಶ್ರೀ ಗಣೇಶ ರವರ ಬಾಬ್ತು ಕೆಎ-18, ಇ.ಜಿ. 9842 ರ ಹೊಂಡಾ ಯುನಿಕಾರ್ನ್ ಬೈಕ್ ನ್ನು ಪಿಜಿ ಮುಂದೆ ನಿಲ್ಲಿಸಿದ್ದು, ದಿನಾಂಕ: 09-07-2019 ರಂದು ಬೆಳಿಗ್ಗೆ 9-00 ಗಂಟೆ ಹೋಗಿ ನೋಡಲಾಗಿ ಬೈಕ್ ಇರಲಿಲ್ಲ, ಯಾರೋ ಕಳ್ಳರು ಸುಮಾರು 80 ಸಾವಿರ ಬೆಲೆಯ ಬೈಕ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಹೆಚ್.ಜಿ. ನಿಶ್ಚಿತ್, ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಟಿಪ್ಪರ್ ಲಾರಿ ಡಿಕ್ಕಿ ಬೈಕ್ ನಲ್ಲಿದ್ದ ಇಬ್ಬರ ಸಾವು:
     ದಿನಾಂಕ: 15-07-2019 ರಂದು 8-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಚೋಳೆನಹಳ್ಳಿ ಗ್ರಾಮದ ವಾಸಿ ಶ್ರೀ ಸಿ.ಎಸ್. ರವಿಕುಮಾರ, ರವರ ಬಾಬ್ತು ಕೆಎ-13, ಯು 8587 ರ ಬೈಕ್ ನಲ್ಲಿ ಸ್ನೇಹಿತನಾದ ಕೋಟೆ ಅರಕಲಗೂಡು ವಿನಾಯಕನಗರ ವಾಸಿ ಶ್ರೀ ಹರೀಶ್ ನೊಂದಿಗೆ ಹಾಸನಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು  ಹಾಸನ-ಅರಕಲಗೂಡು ರಸ್ತೆ, ವಡ್ಡರಹಳ್ಳಿ ಗ್ರಾಮದ ಹೇಮಾವತಿ ರೆಸಾರ್ಟ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13,ಸಿ-2341 ರ ಟಿಪ್ಪರ್ ಲಾರಿ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ 1) ಶ್ರೀ ಸಿ.ಎಸ್. ರವಿಕುಮಾರ ಬಿನ್ ಲೇಟ್ ಸ್ವಾಮಿಗೌಡ, 34 ವರ್ಷ, ಚೋಳೆನಹಳ್ಳಿ ಗ್ರಾಮ, ಕಸಬಾ ಹೋಬಳಿ, ಅರಕಲಗೂಡು ತಾಲ್ಲೂಕು 2) ಹರೀಶ್, 34 ವರ್ಷ, ವಿನಾಯಕ ನಗರ ಕೋಟೆ ಅರಕಲಗೂಡು ಟೌನ್ ರವರುಗಳಿಗೆ ತೀವ್ರ ಸ್ವರೂಪ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತ ಶ್ರೀ ಸಿ.ಎಸ್, ರವಿಕುಮಾರ್, ರವರ ತಮ್ಮ ಶ್ರೀ ಸಿ.ಎಸ್. ಚಂದ್ರೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 
ಅಪರಿಚಿತ 4 ಜನರು ವ್ಯಕ್ತಿ ತಡೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಬೀರು ಬಾಟಲಿ & ಕಲ್ಲಿನಿಂದ ಹೊಡೆದು ರಕ್ತಗಾಯ:
     ದಿನಾಂಕ: 14-07-2019 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಂದಲಿ ಪೋಸ್ಟ್,  ಎ ಕಾಟೀಹಳ್ಳಿ ಗ್ರಾಮದ ವಾಸಿ ಶ್ರೀ ರಾಮು, ಜಮೀನು ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗಲು ಕಂದಲಿ ಸಮೀಪ ಬೈಲಹಳ್ಳಿ ರಸ್ತೆಯಲ್ಲಿರುವ ಕೋನಾಕ್ ಬಾರ್ & ರೆಸ್ಟೋರೆಂಟ್ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ 4 ಜನ ಅಪರಿಚಿತ ಹುಡುಗರು ರಾಮನನ್ನು ತಡೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಬೀರು ಬಾಟಲಿ & ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ರಾಮು, ರವರ ದೊಡ್ಡಪ್ಪ, ಶ್ರೀ ಮಂಜೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಗಂಡಸು ಕಾಣೆ
     ದಿನಾಂಕ: 12-07-2019 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹೊಳಲು ಗ್ರಾಮದ ವಾಸಿ ಶ್ರೀ ಹೆಚ್.ಡಿ. ಶರತ್, ರವರು ಜಮೀನಿನ ಹತ್ತಿರ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಶರತ್, ರವರ ಪತ್ನಿ ಶ್ರೀಮತಿ ಕೀರ್ತಿ ರವರು ದಿನಾಂಕ: 15-07-2019 ರಂದು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಹೆಚ್.ಡಿ. ಶರತ್ ಬಿನ್ ಧರ್ಮ, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08177-221342 ಕ್ಕೆ ಸಂಪರ್ಕಿಸುವುದು.

No comments: