* * * * * * HASSAN DISTRICT POLICE

Monday, July 15, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 15-07-2019



 ಪತ್ರಿಕಾ ಪ್ರಕಟಣೆ                      ದಿನಾಂಕ: 15-07-2019

ಲಾರಿ ಸಮೇತ 30,475 ಅಳತೆಯ ನೀಲಿಗಿರಿ ಪೋಲ್ಸ್ ಗಳ ವಶ:
     ದಿನಾಂಕ: 13-07-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ದೇವರಮುದ್ದನಹಳ್ಳಿ ಗ್ರಾಮದ ಬಳಿ ಇರುವ ಅರೇಹಳ್ಳಿ ಸಾಮಾಜಿಕ ಅರಣ್ಯದ ಫಾರೆಸ್ಟ್ ರವರು ಇತರರೊಂದಿಗೆ ಶಾಮೀಲಾಗಿ ಅರಣ್ಯದ ನೀಲಿಗಿರಿ ಮರಗಳನ್ನು ಬುಡ ಸಮೇತ ಜೆಸಿಬಿಯಿಂದ ಕೀಳಿಸಿ ತುಂಡು ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದಾರೆಂದು ಶ್ರೀ ಸುರೇಶ್, ಪಿಎಸ್ಐ, ಎಫ್ಎಂಎಸ್, ಶ್ರೀ ಅನಂತ, ಹೆಚ್ಸಿ-101, ಎಫ್ಎಂಎಸ್, ಸಕಲೇಶಪುರ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಲಾರಿಯಲ್ಲಿ 30,475 ಅಳತೆಯ ನೀಲಿಗಿರಿ ಪೋಲ್ಸ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಹಾಸನದ ಡಿಎಫ್ಓ ಕಛೇರಿ ಬಿಟ್ಟು ಹೋಗಿದ್ದು, ಲಾರಿ ಸಮೇತ ನೀಲಿಗಿರಿ ಪೋಲ್ಸ್ಗಳನ್ನು ಅಮಾನತ್ತುಪಡಿಸಿಕೊಂಡು ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಅಕ್ರಮವಾಗಿ ಮರಳು ತುಂಬಿದ್ದ ಲಾರಿ ವಶ
       ದಿನಾಂಕ: 14-07-2019 ರಂದು  ಬೆಳಿಗ್ಗೆ 10-40 ಗಂಟೆ ಸಮಯದಲ್ಲಿ  ಹೊಳೆನರಸೀಪುರ ತಾಲ್ಲೂಕು, ಹಳೆಕೋಟೆ ಹೋಬಳಿ, ಮಾರಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ಹೊಳೆಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬುತ್ತಿದ್ದಾರೆಂದು  ಪಿಎಸ್ಐ ಶ್ರೀ ಕುಮಾರ  ಹೊಳೆನರಸೀಪುರ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ  ಸ್ಥಳಕ್ಕೆ ಹೋಗಿ ಸ್ಥಳದಲ್ಲಿ ಕೆಎ-13-ಎ-3459 ರ ಲಾರಿಯಲ್ಲಿ ಅಕ್ರಮವಾಗಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಮರಳನ್ನು ತುಂಬಿದ್ದು, ಮರಳು ಸಮೇತ ಲಾರಿಯನ್ನು  ಅಮಾನತ್ತುಪಡಿಸಿಕೊಂಡು  ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
ಕ್ಷುಲ್ಲಕ ಕಾರಣ ಮಾರಣಾಂತಿಕ ಹಲ್ಲೆ
      ದಿನಾಂಕ: 13-07-2019 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ,  ಬೈರಾಗೊಂಡನಹಳ್ಳಿ ಬೋವಿ ಕಾಲೋನಿ ಗ್ರಾಮದ ಪಿರ್ಯಾದಿ ವೆಂಕಟೇಶ ಬಿನ್ ತಿಮ್ಮಬೋವಿ ರವರ ಅಕ್ಕನ ಮಗ ವೆಂಕಟೇಶ ಬಿನ್ ಚೌಡಾಬೋವಿ ರವರ ಮನೆಯ ಹತ್ತಿರ ಗಲಾಟೆ ಆಗುವ ಶಬ್ದ ಕೇಳಿ ಪಿರ್ಯಾದಿ ಮತ್ತು ಅವರ ಹೆಂಡತಿ ಇಬ್ಬರೂ  ವೆಂಕಟೇಶ ರವರ ಮನೆಯ ಹತ್ತಿರ ಹೋಗಿ0 ನೋಡಿದಾಗ ಅವರ ಜೊತೆ ಅದೇ ಗ್ರಾಮದ ಕಿರಣ, ಮಹೇಂದ್ರ, ಹರೀಶ ಮತ್ತು ಅವರ ಕಡೆಯವರು ಕುರಿಗಳು ನೀರು ಕುಡಿದ ವಿಚಾರದಲ್ಲಿ ಜಗಳ ತೆಗೆದು ಅವರ ಕೈಗಳಲ್ಲಿದ್ದ ಕಬ್ಬಿಣದ ರಾಡುಗಳಿಂದ ವೆಂಕಟೇಶನ ತಲೆಗೆ ಮೈಕೈಗೆ ಹೊಡೆದು ರಕ್ತಗಾಯಪಡಿಸಿದರು. ಏಕೆ ಹೊಡೆಯುತ್ತಿದ್ದೀರಾ ಎಂದು ಪಿರ್ಯಾದಿಯವರು ಜಗಳ ಬಿಡಿಸಲು ಹೋದಾಗ ಕಿರಣ ಮತ್ತು ಮಹೇಂದ್ರ ರವರುಗಳು ಪಿರ್ಯಾದಿಯವರನ್ನು ಕುರಿತು ಆವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಕಿರಣ ಮತ್ತು ಮಹೇಂದ್ರ ಇಬ್ಬರೂ ತಮ್ಮ ಕೈಗಳಲ್ಲಿದ್ದ ಕಬ್ಬಿಣದ ರಾಡುಗಳಿಂದ  ಪಿರ್ಯಾದಿಯವರ ತಲೆಗೆ ಹೊಡೆದು ರಕ್ತಗಾಯಪಡಿಸಿ ಕೊಲೆ ಪ್ರಯತ್ನ ಮಾಡಿ ಪಿರ್ಯಾದಿಯವರ ಕೈಗೆ ಬೆನ್ನಿಗೆ ರಾಡುಗಳಿಂದ  ಹೊಡೆದು ನೋವುಂಟು ಮಾಡಿರುತ್ತಾರೆಂದು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಹೆಂಗಸು ಕಾಣೆ
    ಹಾಸನ ತಾಲ್ಲೂಕು, ಕಸಬಾ ಹೋಬಳಿ, ನಿಡುಡಿ ಗ್ರಾಮದ ವಾಸಿ ಶ್ರೀ ಕೃಷ್ಣೇಗೌಡ ರವರ ಮಗಳು ಶ್ರೀಮತಿ ಗಂಗಮ್ಮ ಹಾಸನ ನಗರದ ತಾಲ್ಲೂಕು ಕಛೇರಿ ಎದುರು ವಾಸಿ ಶ್ರೀ ಜವರೇಗೌಡ ರವರ ಮಗ ಶ್ರೀ ದಯಾನಂದ ರವರನ್ನು ವಿವಾಹವಾಗಿ 8 ವರ್ಷಗಳಾಗಿದ್ದು, 7 ವರ್ಷದ ಒಂದು ಗಂಡುವಿದ್ದು, ದಿನಾಂಕ: 13-07-2019 ರಂದು ಸಂಜೆ 4-30 ಗಂಟೆ ಸಮಯದಲ್ಲಿ  ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದು, ಮಗುವನ್ನು ಬಿಟ್ಟು ಅದೇ ದಿನ ರಾತ್ರಿ 8-00 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಗಂಗಮ್ಮಳ ತಂದೆ ಶ್ರೀ ಕೃಷ್ಣೇಗೌಡ ರವರು ದಿನಾಂಕ: 14-07-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಗಂಗಮ್ಮ ಕೋಂ ದಯಾನಂದ, 30 ವರ್ಷ, 5'6 ಅಡಿ ಎತ್ತರ, ದುಂಡುಮುಖ, ಬಿಳಿ ಬಣ್ಣ, ತೆಳುವಾದ ಶರೀರ, ಮನೆಯಿಂದ ಹೋಗುವಾಗ ಪಿಂಕ್ ಬಣ್ಣದ ಟೌಪ್, ಹಸಿರು ಬಣ್ಣದ ಫ್ಯಾಂಟ್ ಹಾಗೂ ಹಸಿರು ಬಣ್ಣದ ಶ್ವೆಟರ್ನ್ನು ಧರಿಸಿರುತ್ತಾಳೆ. ಈ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಿಲ್ಲಿ ಹಾಸನ ಗ್ರಾಮಾಂತರ ಠಾಣೆ ಫೋನ್ ನಂ. 08172-268630 ಕ್ಕೆ ಸಂಪರ್ಕಿಸುವುದು.



No comments: