* * * * * * HASSAN DISTRICT POLICE

Tuesday, March 26, 2019

HASSAN DISTRICT PRESS NOTE 26-03-2019




  ಪತ್ರಿಕಾ ಪ್ರಕಟಣೆ                    ದಿ: 26-03-2019

ಜೂಜಾಡುತ್ತಿದ್ದ ಐವರ ಬಂಧನ, ಬಂಧಿತರಿಂದ 15,140/- ನಗದು ವಶ:
     ದಿನಾಂಕ: 24-03-2019 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ತಳಲೂರು ಗ್ರಾಮದ ಕೆರೆಯ ಅಂಗಳದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಶ್ರೀ ಅಜಯ್ ಕುಮಾರ್, ಪಿಎಸ್ಐ, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ, ರವರಿಗೆ  ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶಿವಾನಂದ ಬಿನ್ ಸಿದ್ದಪ್ಪ, 32 ವರ್ಷ, ಹೆಚ್.ಕೆ. ಹೊಸೂರು ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 2) ಮಂಜು ಬಿನ್ ಬೆಟ್ಟಾನಾಯ್ಕ್, 47 ವರ್ಷ, ಬೇಕರಿ ಕೆಲಸ, ಮುದುಡಿ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು 3) ಮಹೇಸ್ ಬಿನ್ ಸಿದ್ದಯ್ಯ, 37 ವರ್ಷ, ತಳಲೂರು ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 4) ಕಲ್ಲೇಶ ಬಿನ್ ಮಲ್ಲಿಕಾರ್ಜುನ, 29 ವರ್ಷ, ತಳಲೂರು ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 5) ಶಿವರಾಜು ಬಿನ್ ನಂಜುಂಡಪ್ಪ, 43 ವರ್ಷ, ಅಣ್ಣಾಪುರ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 15,140/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮಕೈಗೊಂಡಿರುತ್ತೆ.

ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ, ಸ್ಥಳದಲ್ಲಿದ್ದ 120/-ಬೆಲೆಯ ಮದ್ಯ ವಶ:
     ದಿನಾಂಕ: 25-03-2019 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಶ್ರೀ ಸಚ್ಚಿನ್, ರವರ ಬಾಬ್ತು ಅಂಗಡಿ ಪಕ್ಕದ ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ಪುರಿಖಾರ & ಕಡಲೆ ಬೀಜಗಳನ್ನು ಕೊಟ್ಟು ಮದ್ಯಪಾನ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಕು|| ಎಂ.ಸಿ. ಮಧು, ಪಿಎಸ್ಐ, ನುಗ್ಗೇಹಳ್ಳಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸಚ್ಚಿನ್ ಬಿನ್ ಲೇಟ್ ರಾಜಣ್ಣ, 22 ವರ್ಷ, ಅಂಗಡಿ ವ್ಯಾಪರ, ಮುದ್ದನಹಳ್ಳಿ ಗ್ರಾಮ, ನುಗ್ಗೇಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸ್ಥಳದಲ್ಲಿದ್ದ 120/- ಬೆಲೆಯ 90 ಎಂ.ಎಲ್ನ 4 ಓರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯನ್ನು ಅಮಾನತ್ತುಪಡಿಸಿಕೊಂಡು ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಪತಿ & ಕುಟುಂಬದವರ ಕಿರುಕುಳದಿಂದ ಪತ್ನಿ ಮನನೊಂದು ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲು:
     ದಿನಾಂಕ: 14-03-2019 ರಂದು ಬೆಳಿಗೆ 7-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ದೊಡ್ಡಮೇದೂರು ಗ್ರಾಮದ ವಾಸಿ ಶ್ರೀಮತಿ ವಿನುತಾ, ರವರು ಮದುವೆಯಾಗಿ 10 ತಿಂಗಳಾಗಿದ್ದು, ಪತಿ ಶ್ರೀ ಕುಮಾರ, ಅತ್ತೆ ಶ್ರೀಮತಿ ಪುಷ್ಪಾವತಿ & ಮಾವ ಶ್ರೀ ಚಂದ್ರೇಗೌಡ, ರವರು ಶ್ರೀಮತಿ ವಿನುತಾ, ರವರನ್ನು ಉದ್ದೇಶಿಸಿ, ನೀನು ಮನೆಗೆ ಬಂದ ಮೇಲೆ ಕಾಲಗುಣ ಸರಿಯಿಲ್ಲಾ, ಮನೆಯಲ್ಲಿ ನೆಮ್ಮದಿಯಿಲ್ಲಾವೆಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ಮಾನಸಿಕ & ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಶ್ರೀಮತಿ ವಿನುತಾ, ರವರು ಬೇಸರಗೊಂಡು ದಿನಾಂಕ: 25-03-2019 ರಂದು ಗಂಟಲು ನೋವಿನ ಥೈರಾಯಿಡ್ ಮಾತ್ರೆಯನ್ನು ಹೆಚ್ಚಾಗಿ ಸೇವಿಸಿದ್ದು, ತಲೆಸುತ್ತು ಬಂದಿದ್ದು, ಪಿರ್ಯಾದಿ ಅಣ್ಣ ಶ್ರೀ ರಮೇಶ್, ರವರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮೇಲ್ಕಂಡ 3 ಜನರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಶ್ರೀಮತಿ ವಿನುತಾ, ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಕಾರು ಬೈಕ್ ಗೆ ಡಿಕ್ಕಿ, ಒಂದು ಸಾವು, ಒಬ್ಬರಿಗೆ ರಕ್ತಗಾಯ:
     ದಿನಾಂಕ: 24-03-2019 ರಂದು ರಾತ್ರಿ 11-45 ಗಂಟೆ ಸಮಯದಲ್ಲಿ ಹಾಸನದ ಟಿಪ್ಪುನಗರ ವಾಸಿ ಶ್ರೀ ಮಹಮದ್ ವಾಹಿದ್, ರವರ ಬಾಬ್ತು ಕೆಎ-13, ಇಬಿ-4738 ರ ಬೈಕ್ ನಲ್ಲಿ ಸ್ನೇಹಿತರಾದ ಶ್ರೀ ಶಾಹಿದ್, ರವರೊಂದಿಗೆ ಆಲೂರಿಗೆ ಹೋಗಿ ವಾಪಸ್ ಮನೆಗೆ ಹೋಗಲು ಆಲೂರು ಪಟ್ಟಣದ ಕೆಇಬಿ ವೃತ್ತದ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-21, ಎನ್-1581 ರ ಓಮಿನಿ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಮಹಮದ್ ವಾಹೀದ್ & ಶ್ರೀ ಶಾಹೀದ್, ರವರುಗಳು ಬೈಕ್ ಸಮೇತ ರಸ್ತೆಗೆ ಬಿದ್ದು, ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಆಲೂರು ಸಕರ್ಾರಿ ಆಸ್ಪತ್ರೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜನಪ್ರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಮಹಮದ್ ವಾಹೀದ್ ಬಿನ್ ಮಹಮದ್ ಫಾರೂಕ್, 55 ವರ್ಷ, ಟಿಪ್ಪುನಗರ, ಹಾಸನ. ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ಮಹಮದ್ ಫಾರೂಕ್, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನಿನ ವಿಚಾರಕ್ಕೆ 50 ಬೆಲೆಯ ಪೈಪುಗಳನ್ನು ನಷ್ಠಪಡಿಸಿ, ಕೊಲೆ ಬೆದರಿಕೆ
     ದಿನಾಂಕ: 24-03-2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ವಿವೇಕಾನಗರದ ವಾಸಿ ಶ್ರೀ ರಾಘವೇಂದ್ರ, ರವರ ಬಾಬ್ತು ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಜಿ. ಬಿಂಡೇನಹಳ್ಳಿ ಗ್ರಾಮದ ಜಮೀನಿನಲ್ಲಿ ತಾಯಿ ಶ್ರೀಮತಿ ಪದ್ಮಮ್ಮ, ರವರು ಶುಂಠಿ ಕೆಲಸ ಮಾಡುತ್ತಿದ್ದಾಗ ಪಿರ್ಯಾದಿ ಚಿಕ್ಕಪ್ಪ ಶ್ರೀ ಶಿವನಂಜೇಗೌಡ, ರವರ ಮಗ ಶ್ರೀ ವಿನಯ, ಶ್ರೀನಿವಾಸ & ಪಾಲಕ್ಷ, ಹಾಗೂ ಇತರೆ 5 & 6 ಜನರು ಹರಿತವಾದ ಆಯುಧದೊಂದಿಗೆ  ಅಕ್ರಮ ಕೂಟ ಕಟ್ಟಿಕೊಂಡು ಪಿರ್ಯಾದಿಯವರನ್ನು ತಡೆದು ಜಮೀನಿನ ವಿಚಾರವಾಗಿ ಜಗಳ ತೆಗೆದು ಶುಂಠಿಗೆ ಅಳವಡಿಸಿದ್ದ ಪೈಪ್ ನ್ನು ಕತ್ತರಿಸಿ, ಹಣ & ರಾಜಕೀಯ ಬಲವಿದೆ ಎಂದು ಕೊಲೆ ಬೆದರಿಕೆ ಹಾಕಿ 50 ಸಾವಿರ ನಷ್ಠಪಡಿಸಿರುತ್ತಾರೆಂದು ಶ್ರೀ ರಾಘವೇಂದ್ರ, ರವರು ದಿನಾಂಕ: 25-03-2019 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ,
     ದಿನಾಂಕ: 26-03-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ನಾರ್ವೆ ಗ್ರಾಮದ ವಾಸಿ ಶ್ರೀ ಭಾರ್ಗವ, ರವರ ಬಾಬ್ತು ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯ & ನೀರು ಪೂರೈಸುತ್ತಿದ್ದಾರೆಂದು ಶ್ರೀ ಎಂ.ಎ.ರವಿಕಿರಣ್, ಪಿಎಸ್ಐ, ಅರೇಹಳ್ಳಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಭಾರ್ಗವ ಬಿನ್ ಬಸವರಾಜು, 22 ವರ್ಷ, ನಾರ್ವೆ ಗ್ರಾಮ, ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಬೈಕ್ ಡಿಕ್ಕಿ, ಪಾದಚಾರಿ ವೃದ್ಧ ಮಹಿಳೆಗೆ ರಕ್ತಗಾಯ:
     ದಿನಾಂಕ: 24-03-2019 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ದೊಡ್ಡಮಂಡಿಗನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಲಕ್ಷ್ಮಮ್ಮ, ರವರು ಮಗ ಶ್ರೀ ಮಂಜು, ರವರೊಂದಿಗೆ ವಾಯು ವಿಹಾರಕ್ಕೆ ಹೋಗಿ ಹಾಲು ತರಲು ದೊಡ್ಡಮಂಡಿಗನಹಳ್ಳಿಯ ಹಿರೋ ಹೊಂಡಾ ಶೋ ರೂಂ ಹತ್ತಿರ ರಸ್ತೆ ದಾಟುತ್ತಿದ್ದಾಗ ಹಿಂದಿನಿಂದ ಬಂದ ಕೆಎ-13, ಕ್ಯೂ-3186 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ಲಕ್ಷ್ಮಮ್ಮ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಗಾಯಾಳು ಮಗ ಶ್ರೀ ಮಂಜು, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಬೈಕ್ ನಿಯಂತ್ರಣ ತಪ್ಪಿ ಬೈಕ್ ಹಿಂಬದಿ ಕುಳಿತಿದ್ದ ವ್ಯಕ್ತಿ ಸಾವು:
     ದಿನಾಂಕ: 22-03-2019 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಸಕಲೇಶಪುರಪಟ್ಟಣದ ಕುಶಾಲನಗರ ಬಡಾವಣೆ ವಾಸಿ ಶ್ರೀ ಗುರು, ರವರು ಸ್ವಂತ ಕೆಲಸದ ನಿಮಿತ್ತ ಕುಡುಗರಹಳ್ಳಿಗೆ ಹೋಗಲು ಪರಿಚಯವಿದ್ದ ಶ್ರೀ ಸೈಯಾದ್ ಜಮೀರ್, ರವರ ಬಾಬ್ತು ಕೆಎ-13, ಇಬಿ-4837 ರ ಬೈಕ್ನಲ್ಲಿ ಸಕಲೇಶಪುರ ತಾಲ್ಲೂಕು, ಬೇಲೂರು ರಸ್ತೆ, ಕುಡುಗರಹಳ್ಳಿಯ ತಿರುವು ರಸ್ತೆಯ ತುದಿಗೆ ಬೈಕ್ ಹತ್ತಿಸಿದ್ದರಿಂದ ಬೈಕ್ನ ನಿಯಂತ್ರಣ ತಪ್ಪಿ, ಶ್ರೀ ಗುರು, ರವರು ಹಿಮ್ಮುಖವಾಗಿ ಬಿದ್ದ ರಸ್ತೆಗೆ ಬಿದ್ದ ಪರಿಣಾಮ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ಹೋದಾಗ ವೆಂಟೆಲೇಟರ್ ಸೌಲಭ್ಯವಿಲ್ಲದ ಕಾರಣ ಬೆಳ್ಳೂರು ಕ್ರಾಸ್, ಬಿಜೆಎಸ್ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ: 24-03-2019 ರಂದು ರಾತ್ರಿ 11-45 ಗಂಟೆಗೆ ಶ್ರೀ ಗುರು, 48 ವರ್ಷ, ರವರು ಕುಶಾಲನಗರ, ಸಕಲೇಶಪುರ ಪಟ್ಟಣ, ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಸುನಿಲ್, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ
      ದಿನಾಂಕ: 06-03-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲ ಕೊಳ್ಳೇಗಾಲ ಜಿಲ್ಲೆ, ಕುಂತೂರು ಗ್ರಾಮದ ವಾಸಿ ಶ್ರಿಮತಿ ಪವಿತ್ರಾ, ಪತಿ ಶ್ರೀ ಹರೀಶ್ & ಮಕ್ಕಳೊಂದಿಗೆ ತವರು ಮನೆಯಾದ ಹಾಸನ ತಾಲ್ಲೂಕು, ದುದ್ದ ಹೋಬಳಿ, ಹಳೇಕೊಪ್ಪಲು ಗ್ರಾಮಕ್ಕೆ ಬಂದಿದ್ದು, ದಿನಾಂಕ: 12-03-2109 ರಂದು ಬೆಳಿಗ್ಗೆ 9-00 ಗಂಟೆಗೆ ಮಗುವಿನ ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಪವಿತ್ರಾಳ ತಂದೆ ಶ್ರೀ ಪರಮೇಶ್, ರವರು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಪವಿತ್ರಾ ಕೋಂ ಹರೀಶ್, 26 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣ ಸೀರೆ & ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 081472-223935 ಕ್ಕೆ ಸಂಪರ್ಕಿಸುವುದು.


No comments: