* * * * * * HASSAN DISTRICT POLICE

Monday, January 28, 2019

HASSAN DISTRICT PRESS NOTE : 25-01-2019


ಪತ್ರಿಕಾ ಪ್ರಕಟಣೆ                         ದಿ: 25-01-2019

42 ಸಾವಿರ ಬೆಲೆಯ 16 ಗ್ರಾಂ ತೂಕದ ಚಿನ್ನದ ಸರ ಕಳವು :

ದಿನಾಂಕ : 23-01-019 ರಂದು ಬೆಳಿಗ್ಗೆ 08-30 ಗಂಟೆ ಸಮಯದಲ್ಲಿ ಹಾಸನ ನಗರ ಚನ್ನಪಟ್ಟಣದ ಹೌಸಿಂಗ್ ಬೋಡರ್್ ವಾಸಿ ಶ್ರೀಮತಿ ನಾಗಮ್ಮ ರವರು ಮನೆಯ ಬೀಗವನ್ನು ಹಾಕಿಕೊಂಡು ಅರಕಲಗೂಡಿಗೆ ಹೋಗಿದ್ದು, ವಾಪಸ್ ಸಂಜೆ 05-30 ಗಂಟೆಗೆ ಮನೆ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗವನ್ನು ಹೊಡೆದು ಒಳಪ್ರವೇಶಿಸಿ ಬೀರುವಿನ ಬೀಗವನ್ನು ಹೊಡೆದು ಬೀರುವಿನಲ್ಲಿಟ್ಟಿದ್ದ 16 ಗ್ರಾಂ ತೂಕದ 42 ಸಾವಿರ ಬೆಲೆಯ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ನಾಗಮ್ಮ ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

ಆಟೋ ನಿಯಂತ್ರಣ ತಪ್ಪಿ, ಆಟೋದಲ್ಲಿದ್ದವರಿಗೆ ರಕ್ತಗಾಯ:

ದಿನಾಂಕ: 24-01-2019 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಕಾಟೀಹಳ್ಳಿ ಗ್ರಾಮದ ವಾಸಿ ಶ್ರೀ ಶಿವರಾಜು, ಶ್ರೀ ಅಕ್ಷಯ್, ಶ್ರೀ ಅಭಿ, ಕು|| ಸಂಗೀತಾ, ಶ್ರೀ ಸಾರ್ತಕ್, ರವರುಗಳೊಂದಿಗೆ ಕಾಲೇಜಿಗೆ ಹೋಗಲು ಅದೇ ಗ್ರಾಮದ ವಾಸಿ ಶ್ರೀ ಮೋಹನ್ಕುಮಾರ್, ರವರ ಬಾಬ್ತು ಕೆಎ-46, 5953 ರ ಆಟೋದಲ್ಲಿ ಸಕಲೇಶಪುರ ತಾಲ್ಲೂಕು, ಜನ್ನಾಪುರ ಪ್ಲೇವುಡ್ ಫ್ಯಾಕ್ಟರಿ ಹತ್ತಿರ ಹೋಗುತ್ತಿದ್ದಾಗ ಆಟೋಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಆಟೋ ನಿಯಂತ್ರಣ ತಪ್ಪಿ, ಆಟೋ ಪಲ್ಟಿಯಾದ ಪರಿಣಾಮ ಆಟೋದಲ್ಲಿದ್ದ ಶ್ರೀ ಶಿವರಾಜು, ಶ್ರೀ ಅಕ್ಷಯ್, ಶ್ರೀ ಅಭಿ, ಕು|| ಸಂಗೀತಾ, ಶ್ರೀ ಸಾರ್ತಕ್, ರವರುಗಳಿಗೆ ರಕ್ತಗಾಯವಾಗಿರುತ್ತದೆಂದು ಶ್ರೀ ಶಿವರಾಜು, ರವರು ಸಕಲೇಶಪುರ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, 4,687/- ಬೆಲೆಯ ವಿವಿಧ ಮಾದರಿಯ ಮದ್ಯ ವಶ:

ದಿನಾಂಕ: 24-01-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಜಾಜೂರು ಬ್ರಿಗೇಡ್ ಡಾಬಾದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ವಿನೋದ್ ರಾಜ್, ಪಿಎಸ್ಐ, ಅರಸೀಕೆರೆ ಗ್ರಾಮಾಂತರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಧರ್ಮಪ್ಪ ಬಿನ್ ಲೇಟ್ ಚಂದ್ರಪ್ಪ, 35 ವರ್ಷ, ಹೊಸಕಲ್ಲನಾಯಕನಹಳ್ಳಿ ಗ್ರಾಮ, ಅರಸೀಕೆರೆ ತಾಲ್ಲೂಕು, ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 4,687/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

10 ಕೆ.ಜಿ. ತೂಕದ 4 ಸಾವಿರ ಬೆಲೆಯ ಮೆಣಸನ್ನು ಕದ್ದು ಕುಯ್ದು ಪರಾರಿ:

ದಿನಾಂಕ: 23-01-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಹಸಗನಹಳ್ಳಿ ಗ್ರಾಮ, ವಾಸಿ ಶ್ರೀ ಸೋಮಶೇಖರ್, ರವರ ಬಾಬ್ತು ತೋಟದಲ್ಲಿ ಕಾಪೀ ಮತ್ತು ಮೆಣಸನ್ನು ಬೆಳೆದಿದ್ದು, ಸಕಲೇಶಪುರ ತಾಲ್ಲೂಕು, ಬಾಳ್ಳುಪೇಟೆ ವಾಸಿಗಳಾದ ಶ್ರೀ ರಂಗಪ್ಪ & ಶ್ರೀ ಸೀನಾ, ರವರು 10 ಕೆ.ಜಿ.  ತೂಕದ 4 ಸಾವಿರ  ಬೆಲೆಯ ಮೆಣಸನ್ನು ಕುಯ್ಯದು ಓಡಿ ಹೋಗಿರುತ್ತಾರೆಂದು ಪಿರ್ಯಾದಿಯವರು ದಿನಾಂಕ: 24-01-2019 ರಂದು  ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಕ್ಲುಲಕ ವಿಚಾರ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆ

ದಿನಾಂಕ; 21-01-2019 ರಂದು ರಾತ್ರಿ 11-30 ಗಂಟೆ ಸಮಯದಲ್ಲಿಚನ್ನರಾಯಪಟ್ಟಣದ ಪಿರಂಗಿ ಮಠ, ಮಕಾನ್ ಕ್ರಾಸ್ ವಾಸಿ ಶ್ರೀ ಸುಹೀಲ್, ರವರು ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗಲು ಚನ್ನರಾಯಪಟ್ಟಣ ಬಿ.ಎಂ ರಸ್ತೆಯನಮ್ಮ ಡಾಬಾ ಹತ್ತಿರ ಬರುತ್ತಿದ್ದಾಗ 2 ಜನ ಅಪರಿಚಿತ ವ್ಯಕ್ತಿಗಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದು ಯಾಕೆ ನೀವು ಗಲಾಟೆ ಮಾಡಿಕೊಳ್ಳುತ್ತೀದ್ದಿರಾ ಎಂದು ಕೇಳಿದಕ್ಕೆ ಅವರು ಏಕಾಏಕಿ ಪಿರ್ಯಾದಿಗೆ ಬೀರು ಬಾಟಲಿಯಿಂದ ಬಲಭಾಗದ ಹಣೆಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ

ದಿನಾಂಕ: 10-01-2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಮೊಸಳೆ ಗ್ರಾಮ ವಾಸಿ ಶ್ರೀ ಓಹಿಲೇಶ್ವರಪ್ಪ, ರವರ ಮಗ ಶ್ರೀ ಪಂಚಾಕ್ಷರಿ, ರವರ ಬಾಬ್ತು ಕೆಎ-02, ಹೆಚ್ಡಬ್ಲ್ಯೂ-5235 ರ ಪಲ್ಸರ್ ಬೈಕ್ನಲ್ಲಿ ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಪಂಚಾಕ್ಷರಿಯ ತಂದೆ ಶ್ರೀ ಓಹಿಲೇಶ್ವರಪ್ಪ, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಪಂಚಾಕ್ಷರಿ ಬಿನ್ ಓಹಿಲೇಶ್ವರಪ್ಪ, 26 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶಟರ್್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ 08174-271221 ಕ್ಕೆ ಸಂಪರ್ಕಿಸುವುದು.

No comments: