* * * * * * HASSAN DISTRICT POLICE

Thursday, January 24, 2019

HASSAN DISTRICT PRESS NOTE 24-01-2019




                                              ಪತ್ರಿಕಾ ಪ್ರಕಟಣೆ                                  ದಿ: 24-01-2019

ಜೂಜಾಡುತ್ತಿದ್ದ 7 ಜನರ ಬಂಧನ, ಬಂಧಿತರಿಂದ 2,620/- ನಗದು ವಶ:
     ದಿನಾಂಕ: 23-01-2019 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಹಾಸನದ ಹುಣಸಿನಕೆರೆ ಕೋಡಿಯ ಗದ್ದೆಹಳ್ಳದ ಖಾಲಿ ಜಾಗದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಆರೋಕಿಯಪ್ಪ, ಪಿಎಸ್ಐ, ಪೆನ್ಷನ್ ಮೊಹಲ್ಲಾ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಅಸ್ಲಾಂ ಪಾಷ ಬಿನ್ ಗೌಸ್ ಮೊಹಿದ್ದೀನ್, 52 ವರ್ಷ, ಚಿಪ್ಪಿನಕಟ್ಟೆ, ಹಾಸನ 2) ವಿನು ಬಿನ್ ಹೆಚ್.ಎ.ಕೃಷ್ಣಪ್ಪ, 35 ವರ್ಷ, ವಲ್ಲಭಾಯಿ ರಸ್ತೆ, ಸಂತೇಪೇಟೆ ಸ್ಕೂಲ್ ಹಿಂಭಾಗ,ಹಾಸನ 3) ಮೊಕ್ಬುಲ್ ಬಿನ್ ಮನಾವರ್ ಪಾಷ, 40 ವರ್ಷ, ಚಿಕ್ಕನಾಳು ಹಾಸನ 4) ಶಾಯಿದ್ ಬಿನ್ ಲೇಟ್ ಇಸ್ಮಾಯಿಲ್, 43 ವರ್ಷ, ಸ್ಲಂಬೋಡರ್್, ಹಾಸನ. 5) ಇರ್ಫಾನ್ ಅಹಮದ್ ಬಿನ್ ನಜೀಬ್ ಅಹಮದ್, 26 ವರ್ಷ, 1 ನೇ ಕ್ರಾಸ್, ಮಿರ್ಜಾ ಮೊಹಲ್ಲಾ, ಹಾಸನ.6) ಪ್ರತಾಪ್ ಬಿನ್ ಸ್ವಾಮಿ, 24 ವರ್ಷ, 5 ನೇ ಕ್ರಾಸ್, ವಲ್ಲಭಾಯಿ ರಸ್ತೆ, ಹಾಸನ. 7) ಮೊಹಮದ್ ಅಕ್ಬರ್ ಬಿನ್ ನಜೀರ್ ಅಹಮದ್, 30 ವರ್ಷ, ಟಿಪ್ಪು ನಗರ, ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು  ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2,620/- ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಪಿಕಪ್ ವಾಹನ ಬೈಕ್ ಗೆ ಡಿಕ್ಕಿ, ಬೈಕ್ ಇಬ್ಬರ ಸಾವು:
     ದಿನಾಂಕ: 23-01-2019 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕಸಬಾ ಹೋಬಳಿ, ರಾಯಸಮುದ್ರ ಗ್ರಾಮದ ವಾಸಿ ಶ್ರೀ ಅಶೋಕ, ರವರ ಬಾಬ್ತು ಕೆಎ-13, ಇಎನ್-3920 ರ ಬೈಕ್ ನಲ್ಲಿ ಸ್ನೇಹಿತರಾದ ಆಲೂರು ತಾಲ್ಲೂಕು, ಕಸಬಾ ಹೋಬಳಿಮರಸು ಕಾಲೋನಿ ವಾಸಿ ಶ್ರೀ ಸುರೇಶ್, ರವರೊಂದಿಗೆ ಸಕಲೇಶಪುರ ತಾಲ್ಲೂಕು, ಬಾಳ್ಳುಪೇಟೆಯಲ್ಲಿ ಗಾರೆ ಕೆಲಸ ಮಾಡಿಕೊಂಡು ವಾಪಸ್ ಮನೆಗೆ ಹೋಗಲು ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಹೂವನಹಳ್ಳಿ ಎನ್ ಹೆಚ್-75, ಬಿ.ಎಂ. ರಸ್ತೆ ಹತ್ತಿರವಿರುವ ಚರ್ಚ್ ಎದುರುಗಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18, ಬಿ-9624 ರ ಅಶೋಕ ಲೈಲಾಂಡ್ ಪಿಕಪ್ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ 1) ಶ್ರೀ ಅಶೋಕ ಬಿನ್ ದೇವರಾಜು, 29 ವರ್ಷ, ರಾಯಸಮುದ್ರ ಗ್ರಾಮ, ಕಸಬಾ ಹೋಬಳಿ, ಆಲೂರು ತಾಲ್ಲೂಕು 2) ಶ್ರೀ ಸುರೇಶ್ ಬಿನ್ ದ್ಯಾವಯ್ಯ, 27 ವರ್ಷ, ಮರಸು ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತ ಅಶೋಕನ ತಂದೆ ಶ್ರೀ ದೇವರಾಜು, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಣಸೆ ಹಣ್ಣಿನ ವಿಚಾರಕ್ಕೆ ಮಹಿಳೆಯ ಮೇಲೆ ಹಲ್ಲೆ:
     ದಿನಾಂಕ: 21-01-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಅಲಗೌಡನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಯಶೋಧ, ರವರ ತಾಯಿ ಶ್ರೀಮತಿ ಸುಬ್ಬಮ್ಮ, ರವರು ಜಮೀನಿನಲ್ಲಿದ್ದ ಹುಣಸೆ ಮರದ ಬಳಿ ಬಿದ್ದಿದ್ದ ಹುಣಸೆ ಹಣ್ಣನ್ನು ಆಯ್ದುಕೊಳ್ಳುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ರಂಗಶೆಟ್ಟಿ, ರವರು ಹುಣಸೆ ಹಣ್ಣನ್ನು ಏಕೆ ಆಯ್ದುಕೊಳ್ಳುತ್ತಿಯಾ ಎಂದು ಅವಾಚ್ಯಶಬ್ಧಗಳಿಂದಿ ನಿಂದಿಸಿ, ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಅಪರಿಚಿತ ವ್ಯಕ್ತಿಯಿಂದ ವ್ಯಕ್ತಿಯ ಕೊಲೆ
     ದಿನಾಂಕ 22-01-2019 ರಂದು ರಾತ್ರಿ 9-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ನಾಗಸಮುದ್ರ ಗ್ರಾಮದ ವಾಸಿ ಶ್ರೀ ಕುಮಾರಸ್ವಾಮಿ, ರವರು ಚನ್ನರಾಯಪಟ್ಟಣಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು, ಶ್ರೀ ಕುಮಾರಸ್ವಾಮಿ, ರವರ ಪತ್ನಿ ಶ್ರೀಮತಿ ಮಂಗಳ, ರವರು ಮನೆಯಲ್ಲಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಮಂಜುನಾಥ್, ರವರ ಪತ್ನಿ ಶ್ರೀಮತಿ ಪ್ರೇಮ, ರವರು ಮನೆಗೆ ಬಂದು ಚನ್ನರಾಯಪಟ್ಟಣದ ಚೌಡೇಶ್ವರಿ ಪೆಟ್ರೋಲ್ ಬಂಕ್ ಹತ್ತಿರ ಹೊಡೆದು ಹಾಕಿರುತ್ತಾರೆಂದು ತಿಳಿಸಿದಾಗ ಶ್ರೀಮತಿ ಮಂಗಳ, ರವರು ಶ್ರೀ ಮಂಜುನಾಥ, ರವರನ್ನು ವಿಚಾರಿಸಲಾಗಿ  ಇಬ್ಬರು ಕ್ಯಾಟೀನ್ಗೆ ಹೋಗಿ ಊಟ ಮಾಡಿಕೊಂಡು ಹೊರಡುವಾಗ ಯಾರೋ ಅಪರಿಚಿತ ವ್ಯಕ್ತಿ ಬಂದು ವಿನಾಕಾರಣ ಶ್ರೀ ಕುಮಾರಸ್ವಾಮಿ, ರವರ ಮೇಲೆ ಜಗಳ ತೆಗೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಕೈಯಿಂದ ಹೊಡೆದಾಗ ನೆಲಕ್ಕೆ ಬಿದ್ದಿದ್ದು, ಶ್ರೀ ಕುಮಾರಸ್ವಾಮಿ, ರವರನ್ನು ಶ್ರೀ ಮಂಜುನಾಥ, ರವರು ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಿ, ಮೃತಪಟ್ಟಿರುವುದಾಗಿ ತಿಳಿಸಿದ ಮೇರಗೆ ಈ ಕೃತ್ಯ ವೆಸಗಿದ ಸುಮಾರು 30 ವರ್ಷ ಪ್ರಾಯದವನಾಗಿದ್ದು, ದೃಡಕಾಯ ಶರೀರವನ್ನು ಹೊಂದಿದ್ದು, ಗಲಾಟೆ ಮಾಡಿ ಕೊಲೆ ಮಾಡಿರುತ್ತಾನೆಂದು ಹಾಗೂ ಆರೋಪಿಯ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮೃತರ ಪತ್ನಿ ಶ್ರೀಮತಿ ಮಂಗಳ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಸ್ಥಳಕ್ಕೆ ಶ್ರೀ ಕಾಂತರಾಜು, ಸಿಪಿಐ ಚನ್ನರಾಯಪಟ್ಟಣ ವೃತ್ತ, ಶ್ರೀ ಯು.ಆರ್. ಮಂಜುನಾಥ, ಪಿಎಸ್ಐ ಚನ್ನರಾಯಪಟ್ಟಣ ನಗರ ಠಾಣೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ತನಿಖೆಕೈಗೊಂಡಿರುತ್ತೆ.
ತೋಟದ ಹತ್ತಿರ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಹಾಗೂ ಕೊಲೆ ಬೆದರಿಕೆ
     ದಿನಾಂಕ: 21-01-2019 ರಂದು ಸಂಜೆ 06-30 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ನೆಟ್ಟೆಕೆರೆ ಗ್ರಾಮದ ಹೇಮಂತಕುಮಾರ ತೋಟದಲ್ಲಿದ್ದಾಗ ಆರೋಪಿಗಳಾದ ಗೋವಿಂದೇಗೌಡ, ಹರೀಶ, ತೋಪೇಗೌಡ ರವರು ತೋಟದಲ್ಲಿ ತೆಂಗಿನ ಕಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾಗ ಹೇಮಂತಕುಮಾರ ಕೇಳಿದಕ್ಕೆ ಎಲ್ಲಾ ಆರೋಪಿಗಳು ಏಕಾಏಕಿ ಜಗಳ ತೆಗೆದು, ಅವಾಚ್ಯಶಬ್ಧಗಳಿಂದ ಬ್ಶೆದು. ಕೈಗಳಿಂದ ಮೈ ಕೈ ಹೊಡೆದು,  ತೆಂಗಿನ ಹೆಡೆ ಮಟ್ಟೆಯಿಂದ ಎಡ ಕಿವಿಯ ಹಿಂದೆ ಹೊಡೆದು ನೋವುಂಟು ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಹೇಮಂತ್ಕುಮಾರ ರವರ ತಂದೆ ಶ್ರೀ ರಂಗೇಗೌಡ ರವರು ನೀಡಿದ ದೂರಿನ ಮೇರೆಗೆ ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ
ಕ್ಲುಲಕ ಕಾರಣ, ತೆಂಗಿನ ಎಡೆ ಮಟ್ಟೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ:
     ದಿನಾಂಕ: 21-01-2019 ರಂದು ಬೆಳಿಗೆ 6-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ತೆಂಕನಹಳ್ಳಿ ಗ್ರಾಮದ ವಾಸಿ ಶ್ರೀ ಹೇಮಂತ್ ಕುಮಾರ್, ರವರ ಬಾಬ್ತು ತೋಟದಲ್ಲಿದ್ದಾಗ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಮತ್ತು ನೆಟ್ಟನಕೆರೆ ಗ್ರಾಮದ ವಾಸಿ ಶ್ರೀ ಗೋವಿಂದೇಗೌಡ, ಶ್ರೀ ಹರೀಶ್ & ತೋಪೇಗೌಡ, ರವರಗಳು ನಮ್ಮ ತೋಟದಲ್ಲಿ ತೆಂಗಿನಕಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾಗ ಶ್ರೀ ಹೇಮಂತ್ಕುಮಾರ್, ಕೇಳಿದ್ದಕ್ಕೆ ಏಕಾ-ಏಕಿ ಜಗಳ ತೆಗೆದು ಕೈಗಳಿಂದ ಹೊಡೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ತೆಂಗಿನ ಎಡೆ ಮಟ್ಟೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ಹೇಮಂತ್ ಕುಮಾರ್, ರವರ ತಂದೆ ಶ್ರೀ ರಂಗೇಗೌಡ, ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
     ದಿನಾಂಕ: 19-01-2019 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ನಗರದ ಹೌಸಿಂಗ್ ಬೋರ್ಡ್ ವಾಸಿ ಶ್ರೀಮತಿ ರಾಹುಲ್ ರವರ ಮಗಳು ಕು|| ಸಿಂಧು, ಹೊಳೆನರಸೀಪುರ ಪದವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸಿಂಧು, ರವರ ತಾಯಿ ಶ್ರೀಮತಿ ರೇಖಾ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸಿಂಧು ಬಿನ್ ರಾಹುಲ್, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-273333 ಕ್ಕೆ ಸಂಪರ್ಕಿಸುವುದು.

No comments: