* * * * * * HASSAN DISTRICT POLICE

Monday, January 14, 2019

HASSAN DISTRICT PRESS NOTE : 13-01-2019


ಪತ್ರಿಕಾ ಪ್ರಕಟಣೆ                                   ದಿ: 13-01-2019.

ಹಾಸನ ನಗರ ಮತ್ತು  ಸಕಲೇಶಪುರ ಪಟ್ಟಣದಲ್ಲಿ ಜೂಜಾಡುತ್ತಿದ್ದ 06 ಜನರ ಬಂಧನ, ಬಂಧಿತರಿಂದ  11,380/- ನಗದು ವಶ :
ಪ್ರಕರಣ: 01 : ದಿನಾಂಕ: 12-01-2019 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಹಾಸನ ನಗರ ಚಿಪ್ಪಿನಕಟ್ಟೆ ಅಪ್ಸರ್ ರವರ ಟೀ ಕ್ಯಾಂಟೀನ್ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜೂಜಾಡಿಸುತ್ತಿದ್ದಾರೆಂದು ಸಿಪಿಐ ಶ್ರಿ ವೈ. ಸತ್ಯನಾರಾಯಣ, ಹಾಸನ ನಗರ ವೃತ್ತ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ ಜೂಜಾಡಿಸುತ್ತಿದ್ದವನ  ಹಿಡಿದು ಹೆಸರು ವಿಳಾಸ ಕೇಳಲಾಗಿ ಮೆಹಬೂಬ್ ಹೆಚ್.ಜಿ. ಬಿನ್ ಬಾಷಾ, 41 ವರ್ಷ, ರಾಜರಾಜೇಶ್ವರಿ ಮ್ಯಾಚ್ ಫ್ಯಾಕ್ಟರಿ ಹತ್ತಿರ, ಚಿಪ್ಪಿನಕಟ್ಟೆ, ಹಾಸನ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಆತನ ವಶದಲ್ಲಿದ್ದ 3140/- ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

ಪ್ರಕರಣ: 02 : ದಿನಾಂಕ: 12-01-2019 ರಂದು ಸಂಜೆ 04-30 ಗಂಟೆ ಸಮಯದಲ್ಲಿ ಹಾಸನ ನಗರ ವಲ್ಲಭಾಯಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಡಿಸುತ್ತಿದ್ದಾರೆಂದು ಪಿಎಸ್ಐ ಶ್ರೀ ಆರೋಕಿಯಪ್ಪ, ಪೆನ್ಷನ್ ಮೊಹಲ್ಲಾ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ ಜೂಜಾಡಿಸುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ರಖೀಬ್ ಬಿನ್ ಮಹಮದ್ ಯೂಸೂಪ್, 28 ವರ್ಷ, 2 ನೇ ಕ್ರಾಸ್, ವಲ್ಲಭಾಯಿ ರಸ್ತೆ, ಹಾಸನ ನಗರ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಆತನ ವಶದಲ್ಲಿದ್ದ  2800/- ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಪ್ರಕರಣ 03 :  ದಿನಾಂಕ: 13-01-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಸಕಲೇಶಪುರ ಪಟ್ಟಣ ಬಾಳೆಗದ್ದೆ ಬಡಾವಣೆ ಬಿ.ಎಂ. ರಸ್ತೆ ಕ್ವಾಲಿಟಿ ಕಂಫಟರ್್ ಲಾಡ್ಜ್ ರೂಮಿನೊಳಗೆ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ  ಅಂದರ್-ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದಾರೆಂದು  ಪಿಎಸ್ಐ  ಶ್ರೀ ರಾಘವೇಂದ್ರ ಬಿ.ಎನ್. ಸಕಲೇಶಪುರ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಾಹುಲ್ ಬಿನ್ ಶಿವಕುಮಾರ, 30 ವರ್ಷ, ಲಕ್ಷ್ಮಿಪುರ ಬಡಾವಣೆ ಸಕಲೇಶಪುರ 2) ಅಭಿಲಾಷ್ ಬಿನ್ ಲೇಟ್ ಸುರೇಶ, 29 ವರ್ಷ, ಬೈಕೆರೆ ಸಕಲೇಶಪುರ ತಾಲ್ಲೂಕು 3) ಶಿವರಾಮ್ ಬಿನ್ ನಾರಾಯಣ, 39 ವರ್ಷ, ಅರೇಹಳ್ಳಿ ಗ್ರಾಮ, ಬೇಲೂರು ತಾಲ್ಲೂಕು 4) ಮಹದೇವ್ ಬಿನ್ ಲೇಟ್ ಶಿವಪ್ಪ, 45 ವರ್ಷ, ಕ್ವಾಲಿಟಿ ರೆಸ್ಟೋರೆಂಟ್ ಕ್ಯಾಷಿಯರ್ ಕೆಲಸ. ಸ್ವಂತ ಊರು ಹಂಸಬಾವಿ ಗ್ರಾಮ, ಹಿರೆಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 5440/- ನಗದನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಚಾಲಕ ಸಾವು :
        ದಿನಾಂಕ: 12-01-2019 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ ಗುಲ್ಬರ್ಗ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಕೊಡ್ಲಿ ಗ್ರಾಮದ ಶ್ಯಾಮ್ರಾವ್ ಬೋವಿ ರವರು  ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಗೋಳೆನಹಳ್ಳಿ ಗ್ರಾಮದ ಸತೀಶ್ ರವರ ಕ್ರಷರ್ನಲ್ಲಿ ಕೆಎ-13-ಎ-2601 ಟ್ರ್ಯಾಕ್ಟರ್ ಟ್ರೈಲರ್ನಲ್ಲಿ ಕಲ್ಲುಕೋರೆಯಿಂದ ಬೋಡ್ರಸ್ ಕಲ್ಲನ್ನು ತುಂಬಿಕೊಂಡು ಕ್ರಷರ್ನ ಮೇಲೆ ಮಣ್ಣು ದಿಬ್ಬದಲ್ಲಿ ಟ್ರ್ಯಾಕ್ಟರ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಓಡಿಸಿಕೊಂಡು ಹೋಗಿ ಕಲ್ಲನ್ನು ಸುರಿದು ವಾಪಸ್ ಬರುತ್ತಿದ್ದಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ ಅಡಿಯಲ್ಲಿ ಸಿಕ್ಕಿಕೊಂಡು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಶ್ಯಾಮ್ರಾವ್ ಬೋವಿ, 28 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಶ್ರೀ ದೇವಪ್ಪ ಬೋವಿ ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಬೈಕಿನಿಂದ ಬಿದ್ದು ವ್ಯಕ್ತಿ ಸಾವು :

        ದಿನಾಂಕ: 11-01-2019 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಗುಳ್ಳೇನಹಳ್ಳಿ ಗ್ರಾಮದ ತಿಮ್ಮೇಗೌಡ @ ಕೃಷ್ಣೇಗೌಡ ರವರು ತಮ್ಮ ಬಾಬ್ತು ಕೆಎ-04-ಜೆಯು-5107 ರ ಹಿರೋಹೊಂಡಾ ಸ್ಪ್ಲೆಂಡರ್ ಬೈಕಿನಲ್ಲಿ ಹಿರೀಸಾವೆಯ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿ ಜಾತ್ರೆಯಲ್ಲಿ ಅಡಿಗೆ ಕೆಲಸಕ್ಕೆ ಹೋಗಿ ವಾಪಸ್ ಊರಿಗೆ ಹೋಗಲು  ಚನ್ನೇನಹಳ್ಳಿ ಗ್ರಾಮದ ಬಳಿ ಬೂಕ-ಶ್ರವಣಬೆಳಗೊಳ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಪರಮ 6 ಕಿ.ಮೀ ಎಂಬ ಮೈಲಿಕಲ್ಲಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಳಾಗಿ ತಿಮ್ಮೇಗೌಡ @ ಕೃಷ್ಣೇಗೌಡ, 57 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ  ಮಗ ಶ್ರೀ ಯೋಗೇಶ ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ದೇವಸ್ಥಾನದಲ್ಲಿ  60 ಸಾವಿರ ಬೆಲೆಯ ವಸ್ತುಗಳ ಕಳವು :

ದಿನಾಂಕ: 10-01-2019 ರಂದು ರಾತ್ರಿ ವೇಳೆಯಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಕೊಂಗಳ್ಳಿ ಗ್ರಾಮದಲ್ಲಿರುವ ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಸ್ಥಾನದ ಬಾಗಿಲನ ಪ್ರೇಂನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಒಳ ನುಗ್ಗಿ ದೇವಸ್ಥಾನದಲ್ಲಿದ್ದ ಸುಮಾರು 60 ಸಾವಿರ ಬೆಲೆ ಬಾಳುವ 1) ಲೂಮಿಯನ್ ಕಂಪನಿಯ ಯುಪಿಎಸ್ 2) ಯುಪಿಎಸ್ ಬ್ಯಾಟರಿ 3) ಸಿಸಿ ಕ್ಯಾಮರದ ಪರಿಕರ ಮತ್ತು ಕೋಟೆಜ್ ಡಿವಿಆರ್ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೇವಸ್ಥಾನದ ಕಾರ್ಯದರ್ಶಿ ಶ್ರೀ ಸಿದ್ದೇಗೌಡ ರವರು ಕೊಟ್ಟ ದೂರಿನ ಮೇರೆಗೆ  ಯಸಳೂರು ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಹುಡುಗಿ ಕಾಣೆ :
       ದಿನಾಂಕ: 08-01-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಗೂರನಹಳ್ಳಿ ವಾಸಿ  ಕಮಲ ರವರ ಮಗಳು ಲಕ್ಷ್ಮಿ ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಲಕ್ಷ್ಮಿ ರವರ ತಾಯಿ ಶ್ರೀಮತಿ  ಕಮಲ ರವರು  ದಿನಾಂಕ: 12-01-2019 ರಂದು ಕೊಟ್ಟ ದೂರಿನ ಮೇರೆಗೆ  ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:  ಲಕ್ಷ್ಮಿ ಬಿನ್ ಲೇಟ್ ಕೃಷ್ಣಮೂರ್ತಿ, 18 ವರ್ಷ,  5'2'' ಅಡಿ ಎತ್ತರ ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು.

No comments: