* * * * * * HASSAN DISTRICT POLICE

Monday, January 14, 2019

HASSAN DISTRICT PRESS NOTE : 12-01-2019


ಪತ್ರಿಕಾ ಪ್ರಕಟಣೆ                                  ದಿ: 12-01-2019

ಜಮೀನಿನ ವಿಚಾರದಲ್ಲಿ ವ್ಯಕ್ತಿಯೊಂದಿಗೆ ಜಗಳ ತೆಗೆದು ಹಲ್ಲೆ :

ದಿನಾಂಕ: 10-01-2019 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್, ನುಗ್ಗೇಹಳ್ಳಿ ಹೋಬಳಿ, ಕಟಗಿಹಳ್ಳಿ ಗ್ರಾಮದ ಶ್ರೀ ನಿಂಗೇಗೌಡ, ರವರ ಬಾಬ್ತು ಸರ್ವರ್ ನಂ 115ರ ಜಮೀನಿಗೆ ಅದೇ ಗ್ರಾಮದ ನಿಂಗರಾಜು ಮತ್ತು ಕಿರಣ್ ಕುಮಾರ್ ಎಂಬುವವರು ಅತಿಕ್ರಮ ಪ್ರವೇಶ ಮಾಡಿ, ನಮ್ಮ ಜಮೀನಿಗೆ ಏಕೆ ಹುಲ್ಲಿನ ಮೆದೆ ಒಟ್ಟಿದ್ದಿರಾ ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಂಗರಾಜುರವರನ್ನು ಅಡ್ಡಗಟ್ಟಿ ದೊಣ್ಣೆ ಮತ್ತು ಮಚ್ಚಿನಿಂದ ಮೈಕೈಗೆ ಹೊಡೆದು ನೋವುಂಟು ಮಾಡಿರುತ್ತಾರೆಂದು ಶ್ರೀ ನಿಂಗರಾಜು ಬಿನ್ ಲೇಟ್ ಮರೀಗೌಡರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಸಾಲ ಮರುಪಾವತಿಸುವಂತೆ ಪೀಡಿಸಿದ್ದರಿಂದ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆ.

ಹಾಸನ ನಗರ ಆಜಾದ್ ನಗರದ ಶ್ರೀ ಶಫಿ ಅಹಮ್ಮದ್ ರವರು ಈಗ್ಗೆ 15 ವರ್ಷಗಳಿಂದ ಶುಂಠಿ ವ್ಯಾಪಾರ ಮಾಡಿಕೊಂಡಿದ್ದು, ವ್ಯಾಪಾರದಲ್ಲಿ ನಷ್ಟವಾಗಿದ್ದು ವ್ಯಾಪಾರಕ್ಕಾಗಿ ಸಜ್ಜು, ಕಬೀರ್ ಮತ್ತು ತೌಗೀರ್ ಎಂಬುವವರಿಂದ ಸಾಲ ಪಡೆದುಕೊಂಡಿದ್ದು, ಸದರಿಯವರು ತಮಗೆ ಬರಬೇಕಾದ ಸಾಲ ಕೊಡು ಇಲ್ಲದಿದ್ದರೆ ವಿಷ ಕುಡಿದು ಸಾಯು ಎಂದು ನಿಂದಿಸುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 10-01-2019 ರಂದು ಶ್ರೀ ಶಫಿ ಅಹಮ್ಮದ್ ರವರು ಆಲೂರಿನ ರೈಲ್ವೇ ಹಳಿಯ ಹತ್ತಿರ ಯಾವುದೋ ವಿಷ ಸೇವನೆ ಮಾಡಿದ್ದು, ಚಿಕಿತ್ಸೆಗಾಗಿ ಆಲೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 11-01-2019 ರಂದು ಬೆಳಗಿನ ಜಾವ 2-05 ಗಂಟೆಯಲ್ಲಿ ಮೃತಪಟ್ಟಿರುತ್ತಾರೆಂದು ಮೃತ ಶಫಿರವರ ಹೆಂಡತಿ ಶ್ರೀಮತಿ ಹೀನಾ ಕೌಸರ್ ರವರು ನೀಡಿದ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ಟ್ರಾಕ್ಟರ್ ಮರಕ್ಕೆ ಡಿಕ್ಕಿ ಚಾಲಕ ಸಾವು :

ದಿನಾಂಕ:10-01-2019 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ, ಮಾರನಹಳ್ಳಿ ಗ್ರಾಮದ ವಾಸಿ ಹರೀಶ್ ರವರು ಕೆಎ-15ಟಿ5134 ರ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಅನ್ನು ಹಾಸನ ತಾಲ್ಲೂಕಿನ ಅಗಿಲೆ ಗ್ರಾಮದಿಂದ ಹಾಸನಕ್ಕೆ ಚಾಲನೆ ಮಾಡಿಕೊಂಡು ಬರುತ್ತಿರುವಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ಹರೀಶನ ಎದೆಗೆ ಹಾಗೂ ತಲೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಅಣ್ಣೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಬೈಕ್ನ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಸಾವು.

ದಿನಾಂಕ:11-01-2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆಯ ಬೆಟ್ಟದಪುರ ತಾಲ್ಲೂಕಿನ ಬೆಟ್ಟದಪುರ ಪಟ್ಟಣದ ವಾಸಿ ಕೀರ್ತಿರಾಜ್ ರವರು ತಮ್ಮ ಬಾಬ್ತು ಕೆಎ45ಡಬ್ಲ್ಯೂ4918 ಹೀರೋ ಕಂಪನಿಯ ಬೈಕಿನಲ್ಲಿ ಅರಕಲಗೂಡು ತಾಲ್ಲೂಕಿನ ವಿಜಾಪುರ ಗ್ರಾಮಕ್ಕೆ ತಮ್ಮ ಮಾವನ ಮನೆಗೆ ಹೋಗಲು ಬರುತ್ತಿರುವಾಗ ರಾಮನಾಥಪುರ ಹೋಬಳಿ ಗಂಗೂರು ಒಂಟಿ ಮನೆಯ ಮುಂಭಾಗದ ರಸ್ತೆಯಲ್ಲಿ ಹೋಗುವಾಗ ಚಾಲಕ ಕೀರ್ತಿರಾಜ್ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋದ ಪರಿಣಾಮ ಬೈಕ್ನ ನಿಯಂತ್ರಣ ತಪ್ಪಿ ಬೈಕ್ ಸಮೇತ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ನಂತರ ಯಾರೋ ಒಬ್ಬರು ಕೆಳಗೆ ಬಿದ್ದಿದ್ದ ಕೀರ್ತಿರಾಜು ರವರನ್ನು ಯಾವುದೋ ಒಂದು ಕಾರಿನಲ್ಲಿ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲು ಹೋದಾಗ ಆಸ್ಪತ್ರೆಯ ವೈದ್ಯರು ಕೀರ್ತಿರಾಜು ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ಮೃತರ ಮಾವ ರಾಮಲಿಂಗೇಗೌಡ ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

No comments: