* * * * * * HASSAN DISTRICT POLICE

Monday, August 20, 2018

PRESS NOTE : 18-08-2018


                        ಪತ್ರಿಕಾ ಪ್ರಕಟಣೆ               ದಿನಾಂಕ: 18-08-2018.

ಮಟ್ಕಾ ಜೂಜಾಡುತ್ತಿದ್ದ ಮೂವರ ಬಂಧನ, ಬಂಧಿತರಿಂದ 1380/-ವಶ : ದಿನಾಂಕ: 18-08-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಬಸ್ತಿಗುಡಿ ಆಟೋಸ್ಟ್ಯಾಂಡ್ ಹತ್ತಿರ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಯೋಗಾನಂಜಪ್ಪ, ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸಾರ್ವಜನಿಕರಿಂದ 1 ರೂಗೆ 70 ರೂಪಾಯಿ ಹಣ ಕೊಡುವುದಾಗಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾ ಮಟ್ಕಾ ಚೀಟಿಯನ್ನು ಬರೆಯುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಹನೀಫ್ @ ಫಟಗುಳು ಬಿನ್ ಅಯೂಬ್, 27 ವರ್ಷ, 3 ನೇ ಕ್ರಾಸ್, ಸುನ್ನಿಚೌಕ ಅರಸೀಕೆರೆ ಪಟ್ಟಣ 2) ಅಮ್ಜದ್ ಬಿನ್ ಇಂತಿಯಾಜ್, 30 ವರ್ಷ, ಟಿಪ್ಪುನಗರ, 2 ನೇ ಕ್ರಾಸ್, ಅರಸೀಕೆರೆ ಪಟ್ಟಣ 3) ಹಮೀದ್ ಬಿನ್ ಎಂ.ಜಿ.ಶಫಿ, 35 ವರ್ಷ, ಸುನ್ನಿ ಚೌಕ, 2 ನೇ ಕ್ರಾಸ್, ಅರಸೀಕೆರೆ ಪಟ್ಟಣ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ 1380/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: