* * * * * * HASSAN DISTRICT POLICE

Monday, July 23, 2018

PRESS NOTE : 22-07-2018



ಪತ್ರಿಕಾ ಪ್ರಕಟಣೆ               ದಿನಾಂಕ:22-07-2018

ಹೆಂಗಸು ಕಾಣೆ : ದಿನಾಂಕ:18-07-2018 ರಂದು ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ಹಾಸನ ಹುಣಸಿನಕೆರೆ ವಾಸಿ ಅಬ್ದುಲ್ ಫಾರೂಕ್ ರವರ ಹೆಂಡತಿ ಸಾಹಿರಭಾನು ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಸಾಹಿರಭಾನು ರವರ ಗಂಡು ಅಬ್ದುಲ್ ಫಾರೂಕ್ ರವರು ದಿನಾಂಕ:21-07-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಸಾಹಿರಭಾನು ಕೋಂ ಅಬ್ದುಲ್ಫಾರೂಕ್, 23ವರ್ಷ, ಗೋಧಿ ಬಣ್ಣ, ದುಂಡುಮುಖ, 5.4 ಅಡಿ ಎತ್ತರ ಕನ್ನಡ ಮತ್ತು ಉದರ್ು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಮತ್ತು ನೀಲಿ ಮಿಶ್ರಿತ ಚೂಡಿದಾರ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಹಾಸನ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆ ಪೋನ್ ನಂ.08172-272260 ಕ್ಕೆ ಸಂಪರ್ಕಿಸುವುದು.

No comments: