ಪತ್ರಿಕಾ ಪ್ರಕಟಣೆ ದಿನಾಂಕ: 16-07-2018
ಮನುಷ್ಯ ಕಾಣೆ : ದಿನಾಂಕ:29-06-2018 ರಂದು ಸಂಜೆ 04-45 ಗಂಟೆ ಸಮಯದಲ್ಲಿ
ಅರಸೀಕೆರೆ ಪಟ್ಟಣ, ಟಿಪ್ಪುನಗರ, 2 ನೇ ಕ್ರಾಸ್ ವಾಸಿ ಖಲೀಲ್ ಖಾನ್ ಪಿ. ಮನೆಯಿಂದ ಬೆಂಗಳೂರಿಗೆ ಹೋಗಿ
ಬರುವುದಾಗಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ
ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಖಲೀಲ್ ಖಾನ್ ರವರ ಅಣ್ಣ ಶ್ರೀ ಕೈಸರ್ ಖಾನ್
ಡಿ.ಪಿ ರವರು ದಿನಾಂಕ: 15-07-2018 ರಂದು ಕೊಟ್ಟ
ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ
ಚಹರೆ: ಖಲೀಲ್ ಖಾನ್ ಪಿ. ಬಿನ್ ಲೇಟ್ ಪೀರ್ ಖಾನ್, 54 ವರ್ಷ, ಕನ್ನಡ ಮತ್ತು
ಉದರ್ು ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಅರಸೀಕೆರೆ ನಗರ
ಠಾಣೆ ಫೋನ್ ನಂ. 08174-232233 ಕ್ಕೆ ಸಂಪರ್ಕಿಸುವುದು.
ಮನುಷ್ಯ ಕಾಣೆ : ದಿನಾಕ: 15-07-2018 ರಂದು ಮಧ್ಯಾಹ್ನ 03-00 ಗಂಟೆ
ಸಮಯದಲ್ಲಿ ಅರಸೀಕೆರೆ ಪಟ್ಟಣ, ಮಿನಿವಿಧಾನಸೌಧ ಹಿಂಭಾಗದ ವಾಸಿ ಲಿಂಗಪ್ಪ
ಕೆ.ಆರ್. ರವರ ಮಗಳು ಅಶ್ವಿನಿ ಕೆ.ಎಲ್. ರವರು ಮನೆಯಿಂದ ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ
ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ
ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು
ಅಶ್ವಿನಿ ಕೆ.ಎಲ್. ರವರ ತಂದೆ ಶ್ರೀ ಲಿಂಗಪ್ಪ ಕೆ.ಆರ್. ರವರು ಕೊಟ್ಟ ದೂರಿನ ಮೇರೆಗೆ
ಅರಸೀಕೆರೆ ನಗರ 7ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಅಶ್ವಿನಿ
ಕೆ.ಎಲ್. ಬಿನ್ ಲಿಂಗಪ್ಪ ಕೆ.ಆರ್., 26 ವರ್ಷ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು
ಸಿಕ್ಕಲ್ಲಿ ಅರಸೀಕೆರೆ ನಗರ ಠಾಣೆ ಫೋನ್ ನಂ. 08174-232233 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ : ದಿನಾಂಕ: 12-07-2018 ರಂದು ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಕಟ್ಟೇಪುರ ಗ್ರಾಮದ ಹರೀಶ ರವರ ಮಗಳು ಭೂಮಿಕಾ ಮನೆಯಿಂದ ಕೊಣನೂರಿಗೆ
ಬಟ್ಟೆ ತರುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ
ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಭೂಮಿಕಾ ರವರ ತಂದೆ ಶ್ರೀ ಹರೀಶ ರವರು ಕೊಟ್ಟ
ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:
ಭೂಮಿಕಾ ಬಿನ್ ಹರೀಶ, 19 ವರ್ಷ, 5' ಅಡಿ ಎತ್ತರ, ಸಾಧಾರಣ
ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಬಿಳಿಯ ಬಣ್ಣದ
ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೊಣನೂರು ಠಾಣೆ ಫೋನ್
ನಂ. 08175-226227 ಕ್ಕೆ ಸಂಪರ್ಕಿಸುವುದು.
No comments:
Post a Comment