* * * * * * HASSAN DISTRICT POLICE

Monday, July 16, 2018

PRESS NOTE : 15-07-2018


ಪತ್ರಿಕಾ ಪ್ರಕಟಣೆ             ದಿನಾಂಕ: 15-07-2018
           
ಜೂಜಾಡುತ್ತಿದ್ದ 9 ಜನರ ಬಂಧನ, ಬಂಧಿತರಿಂದ ಸುಮಾರು 3170/- ರೂ ನಗದು ವಶ : ದಿನಾಂಕ:14-07-2018 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಕಾಡ್ಲೂರು ಕೂಡಿಗೆ ಗ್ರಾಮದ ಗುರಪ್ಪಗೌಡ ಬಿನ್ ಕಾಳೇಗೌಡರವರ ಮನೆಯ ಪಕ್ಕದಲ್ಲಿರುವ  ಗಾಡಿ ಶೆಡ್ನಲ್ಲಿ ಹಣವನ್ನು ಕಟ್ಟಿಕೊಂಡು  ಕಾನೂನುಬಾಹಿರವಾಗಿ ಜೂಜಾಡುತ್ತಿದ್ದಾರೆಂದು   ಶ್ರೀ ಜಗದೀಶ್ ಪಿಎಸ್ಐ, ಸಕಲೇಶಪುರ ಗ್ರಾಮಾಂತರ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಲಕ್ಷ್ಮಣ ನಾಯ್ಕ ಬಿನ್ ತನಿಯಪ್ಪನಾಯ್ಕ 42 ವರ್ಷ, ಕೆ.ಹೊಸಕೋಟೆ ಗ್ರಾಮ, ಆಲೂರು ತಾಲ್ಲೂಕು 2) ಕಾಂತರಾಜು ಬಿನ್ ಚನ್ನಯ್ಯ, 40 ವರ್ಷ, ಕಾಡ್ಲೂರು ಕೂಡಿಗೆ ಗ್ರಾಮ, ಆಲೂರು ತಾಲ್ಲೂಕು 3) ಮಧು ಬಿನ್ ನಾರಾಯಣ, 26 ವರ್ಷ, ಕೆ.ಹೊಸಕೋಟೆ ಗ್ರಾಮ, ಆಲೂರು ತಾಲ್ಲೂಕು 4) ಇಸ್ಮಾಯಿಲ್ ಬಿನ್ ಮಹಮ್ಮದ್, 36 ವರ್ಷ, ಕಾಡ್ಲೂರು ಕೂಡಿಗೆ ಗ್ರಾಮ, ಆಲೂರು ತಾಲ್ಲೂಕು  5) ಅಶೋಕ ಬಿನ್ ರವಿ 25 ವರ್ಷ, ಕೆ.ಹೊಸಕೋಟೆ ಗ್ರಾಮ, ಆಲೂರು ತಾಲ್ಲೂಕು 6) ಭುವನೇಶ ಬಿನ್  ಧಮರ್ೆಗೌಡ 30 ವರ್ಷ, ಹರಿಹಳ್ಳಿ ಗ್ರಾಮ, ಆಲೂರು ತಾಲ್ಲೂಕು 7)  ಉಮ್ಮರ್ ಬಿನ್ ಆದಂ 43 ವರ್ಷ, ಕೆ.ಹೊಸಕೋಟೆ ಗ್ರಾಮ, ಆಲೂರು ತಾಲ್ಲೂಕು 8) ಮಂಜುನಾಥ ಬಿನ್ ಗುರುಮಲ್ಲಪ್ಪ  42 ವರ್ಷ, ಕೆ.ಹೊಸಕೋಟೆ ಗ್ರಾಮ, ಆಲೂರು ತಾಲ್ಲೂಕು 9) ಗುರಪ್ಪಗೌಡ ಬಿನ್ ಕಾಳೇಗೌಡ 60 ವರ್ಷ, ಕಾಡ್ಲೂರು ಕೂಡಿಗೆ ಗ್ರಾಮ ಆಲೂರು ತಾಲ್ಲೂಕು ಇವರುಗಳು  ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 3170/- ರೂ ನಗದನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಮಟ್ಕಾ  ಚೀಟಿ ಬರೆಯುತ್ತಿದ್ದವನ  ಬಂಧನ, ಬಂಧಿತನಿಂದ ಸುಮಾರು 1540/- ರೂ ನಗದು ವಶ. : ದಿನಾಂಕ:14-07-2018 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ  ಅರಸೀಕೆರೆ ಟೌನ್ ಪಿಪಿ ವೃತ್ತದ ಹತ್ತಿರ ಹೋಟೆಲ್ ಹತ್ತಿರ ಅಕ್ರಮವಾಗಿ ಸಾರ್ವಜನಿಕರಿಂದ 1 ರೂ ಗೆ 70 ರೂ ಹಣ ಕೊಡುವುದಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಾ  ಮಟ್ಕಾ ಚೀಟಿ ಬರೆಯುತ್ತಿದ್ದಾನೆಂದು  ಶ್ರೀ ಯೋಗಾಂಜನಪ್ಪ ಪಿಎಸ್ಐ, ಅರಸೀಕೆರೆ ನಗರ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ  ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ತಿಪ್ಪಯ್ಯ  ಶೆಟ್ಟಿ ಬಿನ್ ಕೃಷ್ಣಯ್ಯ ಶೆಟ್ಟಿ, 42 ವರ್ಷ, ಹೊಟೆಲ್ ಕೆಲಸ, ಪಿ.ಪಿ ವೃತ್ತ, ಅರಸೀಕೆರೆ ಎಂದು ತಿಳಿಸಿದ್ದು  ಈತನ ಬಳಿಯಿದ್ದ  ಸುಮಾರು 1540/- ರೂ ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಹುಡುಗಿ ಕಾಣೆ : ದಿನಾಂಕ: 13-07-2018 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು ಸತ್ಯಮಂಗಲ ಗ್ರಾಮ ಮತ್ತು ಕಸಬಾ ಹೋಬಳಿ ವಾಸಿ ಕುಮಾರಿ  ಜಯಲಕ್ಷ್ಮಿ ಬಿನ್ ನಾರಾಯಣ, 22 ವರ್ಷ, ಬಿ.ಇ ವಿದ್ಯಾಥರ್ಿ, ಅಂಗಡಿಗೆ ಹೋಗಿ ಬರುತ್ತೇನೆಂದು  ಹೇಳಿ ಹೋದವಳು ಇದೂವರೆಗೆ ಮನೆಗೆ ವಾಪಸ್ ಬಂದಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಜಯಲಕ್ಷ್ಮೀ ರವರ ತಂದೆ ಶ್ರೀ ನಾರಾಯಣರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕುಮಾರಿ ಜಯಲಕ್ಷ್ಮೀ ಬಿನ್ ನಾರಾಯಣ, 22 ವರ್ಷ, ಬಿ. ಇ ವಿದ್ಯಾಥರ್ಿ,  5'5'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಬಲಕೆನ್ನೆಯಲ್ಲಿ ಕಪ್ಪು ಮಚ್ಚೆ ಇರುತ್ತೆ. ಮನೆಯಿಂದ ಹೋಗುವಾಗ ಆರೆಂಜ್ ಬಣ್ಣದ ಟಾಪ್ ಹಾಗೂ ಬಿಳಿ ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ ಬಡಾವಣೆ ಪೊಲೀಸ್ ಠಾಣೆ ಫೋನ್ ನಂಬರ್; 08172-268967ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 12-07-2018 ರಂದು ರಾತ್ರಿ ಸುಮಾರು 12-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು ಅಂಚಿಹಳ್ಳಿ ಗ್ರಾಮ ಮತ್ತು ಕಸಬಾ ಹೋಬಳಿ ವಾಸಿ ಕುಮಾರಿ  ಪೂಜಾ  ಬಿನ್ ನಾಗರಾಜು, 19 ವರ್ಷ, ಬಿ.ಬಿ.ಎಂ ವಿದ್ಯಾಥರ್ಿ ಇವರು  ಬೊಮ್ಮನಾಯಕನಹಳ್ಳಿ ತನ್ನ ದೊಡ್ಡಮ್ಮನ ಮನೆಯಿಂದ ಯಾರಿಗೂ ತಿಳಿಯದಂತೆ ಹೊರಗಡೆ ಹೋದವಳು ಇದೂವರೆಗೆ ಮನೆಗೆ ವಾಪಸ್ ಬಂದಿರುವುದಿಲ್ಲ. ಇದೂವರೆಗೆ ಸ್ನೇಹಿತರು ಹಾಗೂ ಸಂಬಂದಿಕರ ಮನೆಯಲ್ಲಿ  ವಿಚಾರ ಮಾಡಲಾಗಿ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಕುಮಾರಿ ಪೂಜಾ ರವರ ತಾಯಿ ಶ್ರೀಮತಿ  ಲಕ್ಷ್ಮಮ್ಮರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕುಮಾರಿ ಪೂಜಾ ಪಿ.ಎನ್ ಬಿನ್ ನಾಗರಾಜು,  19 ವರ್ಷ, ಬಿ.ಬಿ.ಎಂ ವಿದ್ಯಾರ್ಥಿ,  5'4'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್ ಹಾಗೂ ಕೇಸರಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ ಬಡಾವಣೆ ಪೊಲೀಸ್ ಠಾಣೆ ಫೋನ್ ನಂಬರ್; 08172-268967ಕ್ಕೆ ಸಂಪರ್ಕಿಸುವುದು.

No comments: