* * * * * * HASSAN DISTRICT POLICE

Monday, July 30, 2018

HASSAN DISTRICT PRESS NOTE 29-07-2018
                                   ಪತ್ರಿಕಾ ಪ್ರಕಟಣೆ                   ದಿನಾಂಕ: 29-07-2018.
ಮನುಷ್ಯ ಕಾಣೆ
 ದಿನಾಂಕ: 24-07-2018 ರಂದು ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ನಲ್ಲುಲ್ಲಿ ಗ್ರಾಮದ ಶುಕ್ರಯ್ಯ ರವರು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದು, ಬೆಳಗ್ಗೆ ಎದ್ದು ನೋಡಲಾಗಿ ಮನೆಯಲ್ಲಿ ಇರಲಿಲ್ಲ  ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶುಕ್ರಯ್ಯ ರವರ ಮಗ ಗಿರೀಶ ರವರು ದಿನಾಂಕ: 28-07-2018 ರಂದು ಕೊಟ್ಟ ದೂರಿನ ಮೇರೆಗೆ  ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಶುಕ್ರಯ್ಯ ಬಿನ್ ಲೇಟ್ ಚನ್ನಯ್ಯ, 63 ವರ್ಷ, 5'3'' ಅಡಿ ಎತ್ತರ, ಸಾದಾರಣ ಮೈಕಟ್ಟು,  ಕನ್ನಡ ಭಾಷೆ ಮಾತನಾಡುತ್ತಾರೆ. ಧರಿಸಿದ ಬಟ್ಟೆಗಳು: ನೀಲಿ ಕಲರ್ ಅರ್ಧ ತೋಳಿನ ಶರ್ಟ್, ಚೆಕ್ಸ್ ಲುಂಗಿ, ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಸಕಲೇಶಪುರ ಗ್ರಾಮಾಂತರ ಠಾಣೆ ಫೋನ್ ನಂ. 08173-245183 ಕ್ಕೆ ಸಂಪರ್ಕಿಸುವುದು. 

ಎರಡು ಮಕ್ಕಳೊಂದಿಗೆ ತಂದೆ ಕಾಣೆ
 ದಿನಾಂಕ: 22-07-2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಸಂತೆಮರೂರು ಗ್ರಾಮದ ಮಂಜುನಾಥ ಎಂ.ಎಸ್. ರವರು ಮಗಳು ಮಾನ್ಯ ಮತ್ತು ಮಗ ದೇಶವಂತ್ ನೊಂದಿಗೆ ಎಲ್ಲಿಗೋ ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮಂಜುನಾಥ ರವರ ಪತ್ನಿ ಶ್ರೀಮತಿ ಸಂಗೀತಾ ದಿನಾಂಕ: 28-07-2018 ರಂದು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದವರ ಚಹರೆ: ಮಂಜುನಾಥ ಎಂ.ಎಸ್., 28 ವರ್ಷ, ಎಣ್ಣೆಗೆಂಪು ಬಣ್ಣ, 4'5'' ಅಡಿ ಎತ್ತರ, ಬಿಳಿ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಮಗಳ ಹೆಸರು: ಮಾನ್ಯ, 5 ವರ್ಷ, ಯುಕೆಜಿ.  ಶರ್ಟ್ ಮತ್ತು ಚಡ್ಡಿ ಧರಿಸಿರುತ್ತಾಳೆ. ಮಗನ ಹೆಸರು: ದೇಶವಂತ್, 3 ವರ್ಷ 6 ತಿಂಗಳು, ಎಲ್ ಕೆಜಿ, ಕಂದು ಬಣ್ಣದ ಶರ್ಟ್, ನೀಲಿ ನಿಕ್ಕರ್ ಧರಿಸಿರುತ್ತಾನೆ. ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಅರಕಲಗೂಡು ಠಾಣೆ ಫೋನ್ ನಂ. 08175-220249 ಕ್ಕೆ ಸಂಪರ್ಕಿಸುವುದು. 

No comments: