* * * * * * HASSAN DISTRICT POLICE

Monday, June 25, 2018

PRESS NOTE : 24-06-2018


ಪತ್ರಿಕಾ ಪ್ರಕಟಣೆ  ದಿನಾಂಕ: 24-06-2018.
ಹುಡುಗಿ ಕಾಣೆ : ಈಗ್ಗೆ ಮೂರು ವರ್ಷಗಳಿಂದ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಗಟ್ಟದಹಳ್ಳಿ ಗ್ರಾಮದ ವಾಸಿ ಶ್ರೀ ಶಿವಪ್ಪನಾಯಕ, ರವರ ಮಗಳು ಕು|| ಜ್ಯೋತಿ, ಸಾಲಗಾಮೆಯಲ್ಲಿರುವ ಪುಷ್ಪಗಿರಿ ಹಾಸ್ಟೆಲ್ನಲ್ಲಿ ವಾಸವಾಗಿದ್ದು, ಪ್ರತಿದಿನ ಹನುಮಂತಪುರದಲ್ಲಿರುವ ಹಿಮತಸಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗಿದ್ದು, ದಿನಾಂಕ: 21-06-2018 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಪುಪ್ಪಗಿರಿ ಹಾಸ್ಟೆಲ್ನಿಂದ ಹೊರಗೆ ಹೋದವಳು, ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಜ್ಯೋತಿಯ ತಂದೆ ಶ್ರೀ ಶಿವಪ್ಪನಾಯಕ, ರವರು ದಿನಾಂಕ: 21-06-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಜ್ಯೋತಿ ಬಿನ್ ಶಿವಪ್ಪನಾಯಕ, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೆಂಪುಬಣ್ಣ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.

No comments: