* * * * * * HASSAN DISTRICT POLICE

Tuesday, May 29, 2018

PRESS NOTE : 29-05-2018


ಪತ್ರಿಕಾ ಪ್ರಕಟಣೆ                    ದಿನಾಂಕ: 29-05-2018.

ಜೂಜಾಡುತ್ತಿದ್ದ 12 ಜನರ ಬಂಧನ, ಬಂಧಿತರಿಂದ 5,300/- ನಗದು ವಶ :      ದಿನಾಂಕ: 28-05-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಯಲಗುಂದ ಗ್ರಾಮದ ಹುಲಿಯಪ್ಪ ರವರ ಜಮೀನಿನಲ್ಲಿರುವ ಮಾವಿನ ಮರದ ಕೆಳಗೆ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಬಿ.ಆರ್.ಗೌಡ ಹಾಸನ ಗ್ರಾಮಾಂತರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಅಣ್ಣಪ್ಪ ಬಿನ್ ಪುಟ್ಟಬೋವಿ, 35 ವರ್ಷ, ಸಜ್ಜೇನಹಳ್ಳಿ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 2) ಗಂಗಾಧರ ಬಿನ್ ತಿಮ್ಮಯ್ಯ, 40 ವರ್ಷ, ಯಲಗುಂದ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 3) ನಿಂಗರಾಜು ಬಿನ್ ಲೇಟ್ ಸಿದ್ದರಾಮೇಗೌಡ, 50 ವರ್ಷ, ಯಲಗುಂದ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 4) ಚನ್ನಬಸಪ್ಪ ಬಿನ್ ಲೇಟ್ ಪುಟ್ಟಪ್ಪ, 65 ವರ್ಷ, ಯಲಗುಂದ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 5) ಮಂಜೇಗೌಡ ಬಿನ್ ಲೇಟ್ ಮಾಸ್ತಿಗೌಡ, 64 ವರ್ಷ, ನಿಟ್ಟೂರು ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 6) ಪುಟ್ಟಸ್ವಾಮಿ ಬಿನ್ ಲೇಟ್ ಹಾಲಶೆಟ್ಟಿ, 40 ವರ್ಷ, ನಿಟ್ಟೂರು ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 7) ಹರೀಶ ಬಿನ್ ಚಿಕ್ಕಯ್ಯ, 34 ವರ್ಷ, ನಿಟ್ಟೂರು ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 8) ಪ್ರಕಾಶ ಬಿನ್ ಲೇಟ್ ಹುಲಿಯಪ್ಪ, 48 ವರ್ಷ, ಯಲಗುಂದ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 9) ಹನುಮಂತಪ್ಪ ಬಿನ್ ಹನುಮಂತಪ್ಪ, 35 ವರ್ಷ, ಸಜ್ಜೇನಹಳ್ಳಿ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 10) ಜಗದೀಶ ಬಿನ್ ದೇವರಾಜು,  ಸಜ್ಜೇನಹಳ್ಳಿ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 11) ಜಗದೀಶ ಬಿನ್ ಬಸವರಾಜು, 37 ವರ್ಷ, ಯಲಗುಂದ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು 12) ಬೋವಿರಾಜು ಬಿನ್ ಸಿದ್ದಬೋವಿ, 38 ವರ್ಷ, ಸಜ್ಜೇನಹಳ್ಳಿ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ   5,300/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಅಪರಿಚಿತ  ವಾಹನ ಡಿಕ್ಕಿ ಪಾದಾಚಾರಿ ಮಹಿಳೆ ಸಾವು :            ದಿನಾಂಕ: 27-05-2018 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ  ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಹೊಸೂರು ಗ್ರಾಮದ ಜರೀನಾಬಿ ರವರು ಕೆ.ಬಿ.ಹಾಳ್ ಗ್ರಾಮಕ್ಕೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ವಾಪಸ್ ಊರಿಗೆ ಹೋಗಲು ಹಳೇಬೀಡು-ಜಾವಗಲ್ ರಸ್ತೆಯ ಹೊಸೂರು ಗೇಟ್ ಹತ್ತಿರ ರಾಮಬೋವಿ ರವರ ಮನೆಯ ಹತ್ತಿರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಜರೀನಾಬಿ ಕೋಂ ಲೇಟ್ ಸುಲ್ತಾನ್, 50 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಜಬೀವುಲ್ಲಾ ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಲಾರಿಗೆ ಪಿಕಪ್ ವಾಹನ ಡಿಕ್ಕಿ ಒಬ್ಬರ ಸಾವು ಇಬ್ಬರಿಗೆ ಗಾಯ :    ದಿನಾಂಕ: 28-05-2018 ರಂದು ಸಂಜೆ 06-00 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಹನುಮಂತಪುರ ಗ್ರಾಮದ ಪುರುಷೋತ್ತಮ ರವರು ಪ್ರತಿದಿನದಂತೆ ಹಾಸನ ನಗರದಲ್ಲಿರುವ ಅರವಿಂದ ಷೋ ರೂಂಗೆ ಮೆಕ್ಯಾನಿಕ್ ಕೆಲಸಕ್ಕೆ ಹೋಗಿ ಕಂಪನಿಯ ಕೆಎ-19-ಡಿ-9327 ಇಘಿಓಔಓ ಕಅಅಗಕ ವಾಹನದಲ್ಲಿ ಚಾಲಕ ಪಾಂಡು ಮತ್ತು ರವಿ ರವರೊಂದಿಗೆ ಗಂಡಸಿ ಹ್ಯಾಂಡ್ ಪೋಸ್ಟ್ ಹತ್ತಿರ ಕೆಟ್ಟು ನಿಂತಿದ್ದ ವಾಹನವನ್ನು ರಿಪೇರಿ ಮಾಡಿ ಹಾಸನಕ್ಕೆ ವಾಪಸ್ ಬರಲು ಅರಸೀಕೆರೆ- ಚನ್ನರಾಯಪಟ್ಟಣ ರಸ್ತೆ, ಬಿರೂರು ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಪಾಂಡು ಪಿಕಪ್ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಎದುರಿನಿಂದ ಬಂದ ಕೆಎ-12-8561 ರ ಲಾರಿಗೆ ಡಿಕ್ಕಿ ಮಾಡಿದ ಪರಿಣಾಮ ಎರಡು ವಾಹನಗಳು ಜಖಂಗೊಂಡು ಪುರುಷೋತ್ತಮ ಬಿನ್ ರಾಮೇಗೌಡ, 22 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದ ಇಬ್ಬರಿಗೆ ಪೆಟ್ಟು ಬಿದ್ದು ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತ ಪುರುಷೋತ್ತಮ ರವರ ತಂದೆ ಶ್ರೀ ರಾಮೇಗೌಡ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: