* * * * * * HASSAN DISTRICT POLICE

Tuesday, May 29, 2018

PRESS NOTE : 28-05-2018


  ಪತ್ರಿಕಾ ಪ್ರಕಟಣೆ                                 ದಿನಾಂಕ: 28-05-2018
  ಹುಡುಗಿ ಕಾಣೆ  :   ದಿನಾಂಕ: 25-05-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಮುತ್ತತ್ತಿ ಗ್ರಾಮದ ಸಿದ್ದರಾಜು ರವರ ಮಗಳು ತೇಜಸ್ವಿನಿ ಮನೆಯಿಂದ ಹಾಸನಕ್ಕೆ ಕಾಲೇಜಿಗೆ ಹೋಗಿ ಬರುವುದಾಗಿ ಹೋದವಳು ವಾಪಸ್ ಮನೆಗೆ  ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ತೇಜಸ್ವಿನಿ ರವರ ತಂದೆ ಶ್ರೀ ಸಿದ್ದರಾಜು ರವರು ದಿನಾಂಕ: 27-05-2018 ರಂದು ಕೊಟ್ಟ ದೂರಿನ ಮೇರೆಗೆ ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ತೇಜಸ್ವಿನಿ ಬಿನ್ ಸಿದ್ದರಾಜು, 18 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ದುದ್ದ ಠಾಣೆ ಫೋನ್ ನಂ. 08172-223935 ಕ್ಕೆ ಸಂಪರ್ಕಿಸುವುದು. 

ಮನುಷ್ಯ ಕಾಣೆ :  ದಿನಾಂಕ: 25-05-2018 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ.ಹೋಸಕೋಟೆ ಹೋಬಳಿ, ತಿಪ್ಪಾಪುರ ಗ್ರಾಮದ ಮ್ಯಾಕ್ಸಿ ಡಿಸೋಜಾ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮ್ಯಾಕ್ಸಿ ಡಿಸೋಜಾ ರವರ ಅಣ್ಣ ಶ್ರೀ ರೈಮಂಡ್ ಡಿಸೋಜಾ ರವರು ದಿನಾಂಕ: 27-05-2018 ರಂದು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಮ್ಯಾಕ್ಸಿ ಡಿಸೋಜಾ ಬಿನ್ ಅಂತೋಣಿ, 35 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಆಲೂರು ಠಾಣೆ ಫೋನ್ ನಂ. 08170-218231ಕ್ಕೆ ಸಂಪರ್ಕಿಸುವುದು         


No comments: