* * * * * * HASSAN DISTRICT POLICE

Saturday, April 21, 2018

PRESS NOTE : 20-04-2018


ಪತ್ರಿಕಾ ಪ್ರಕಟಣೆ     ದಿನಾಂಕ: 20-04-2018

ಆಪೆ ಆಟೋಗೆ ಟಾಟಾ ಏಸ್ ವಾಹನ ಡಿಕ್ಕಿ, ಒಂದು ಸಾವು, ಉಳಿದ 10 ಜನರಿಗೆ ಗಾಯ : ದಿನಾಂಕ: 19-04-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ದಡಿಘಟ್ಟ ಗ್ರಾಮದ ವಾಸಿ ಶ್ರೀ ನಿಂಗೇಗೌಡ, ರವರ ಪತ್ನಿ ಶ್ರೀಮತಿ ತಾಯಮ್ಮ, ಶ್ರೀಮತಿ ರಾಧ, ಶ್ರೀಮತಿ ವಸಂತಮ್ಮ, ಶ್ರೀಮತಿ ಸಣ್ಣನಂಜಮ್ಮ, ಶ್ರೀ ಸುರೇಶ್, ಶ್ರೀ ನವೀನ, ಶ್ರೀ ರಾಮೇಗೌಡ, ಶ್ರೀಮತಿ ರೇಖಾ, ಶ್ರೀಮತಿ ವಸಂತಮ್ಮ, ಶ್ರೀಮತಿ ರಾಜಮ್ಮ, ರವರುಗಳೊಂದಿಗೆ ಕೆಎ-06, ಸಿ-3372 ರ ಆಪೆ ಆಟೋದಲ್ಲಿ ಶ್ರವಣಬೆಳಗೊಳಕ್ಕೆ ಮದುವೆಗೆ ಹೋಗಿದ್ದು, ವಾಪಸ್ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ನಾಗಮಂಗಲ-ಶ್ರವಣಬೆಳಗೊಳ ರಸ್ತೆ, ಸಾಣೇನಹಳ್ಳಿ ಕೊಪ್ಪಲು ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13,ಎ-2578ರ ಟಾಟಾ ಏಸ್ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಆಪೆ ಆಟೋಗೆ ಡಿಕ್ಕಿ ಮಾಡಿದ ಪರಿಣಾಮ ಆಟೋದಲ್ಲಿದ್ದ ಶ್ರೀ ನಿಂಗೇಗೌಡ, 62 ವರ್ಷ, ದಡಿಘಟ್ಟ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಉಳಿದ 10 ಜನರಿಗೆ ರಕ್ತಗಾಯಗಳಾಗಿರುತ್ತದೆಂದು  ಪ್ರತ್ಯಕ್ಷದರ್ಶಿ ಶ್ರೀಮತಿ ರಾಧ, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 843/-ಬೆಲೆಯ ಮದ್ಯ ವಶ: ದಿನಾಂಕ: 19-04-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಕೃತಿಕಾ ವೈನ್ಸ್ ಹತ್ತಿರ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಕು|| ಮಧು, ಪಿಎಸ್ಐ ಅರಕಲಗೂಡು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಲಕ್ಕಟ್ಟಿ ಬಿನ್ ಸಣ್ಣಯ್ಯ @ಕುಳ್ಳ ಹನುಮಯ್ಯ, 35 ವರ್ಷ, ಕೃತಿಕಾ ವೈನ್ಸ್ನಲ್ಲಿ ಕೆಲಸ, ದೊಡ್ಡಮಗ್ಗೆ ಗ್ರಾಮ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 843/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಗಂಡಸು ಕಾಣೆ : ದಿನಾಂಕ: 19-04-2018 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಹಾಸನದ ಆಡುವಳ್ಳಿ ವಾಸಿ ಶ್ರೀ ತಮ್ಮಪ್ಪ, ರವರ ಮಗ ಶ್ರೀ ಜಗ, ರವರು ಮನೆಯಿಂದ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಜಗನ ತಾಯಿ ಶ್ರೀಮತಿ ಸಾವಿತ್ರಮ್ಮ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಜಗ ಬಿನ್ ತಮ್ಮಪ್ಪ, 40 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.

ಹೆಂಗಸು ಕಾಣೆ : ದಿನಾಂಕ: 17-04-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ರಾಜಘಟ್ಟ ಗ್ರಾಮದ ವಾಸಿ ಶ್ರೀ ರವಿ, ರವರ ಪತ್ನಿ ಶ್ರೀಮತಿ ಭವಾನಿ, ಮನೆಯಿಂದ ಹೊರಗೆ ಹೋದವರು  ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಭವಾನಿಯ ಪತಿ ಶ್ರೀ ರವಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಶ್ರೀಮತಿ ಭವಾನಿ ಕೋಂ ರವಿ, 24 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪಕರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 15-04-2018 ರಂದು ಮಧ್ಯಾಹ್ನ 12-45 ಗಂಟೆ ಸಮಯದಲ್ಲಿ ಹಾಸನದ ಚಿಕ್ಕಹೊನ್ನೇನಹಳ್ಳಿ ಗ್ರಾಮದ ವಾಸಿ ಶ್ರೀ ಮಂಜುನಾಥ, ರವರ ಮಗಳು ಕು|| ಅರ್ಪಿತಾ, ಸ್ನೇಹಿತರ ಮನೆಗೆ ಹೋಗಿ ಮದುವೆಯ ಲಗ್ನ ಪತ್ರಿಕೆ ಕೊಟ್ಟು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಅರ್ಪಿತಾಳ ತಾಯಿ ಶ್ರೀಮತಿ ಸುಶೀಲಾ, ರವರು ದಿನಾಂಕ: 19-04-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಅರ್ಪಿತಾ ಬಿನ್ ಮಂಜುನಾಥ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-260819 ಕ್ಕೆ ಸಂಪರ್ಕಿಸುವುದು.

No comments: