* * * * * * HASSAN DISTRICT POLICE

Monday, April 9, 2018

PRESS NOTE : 08-04-2018


ಪತ್ರಿಕಾ ಪ್ರಕಟಣೆ             ದಿನಾಂಕ: 08-04-2018

ಕಾರು ಡಿಕ್ಕಿ ಪಾದಚಾರಿ ಸಾವು:  ದಿನಾಂಕ: 07-04-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಹಾಸನ ನಗರ ಬಸಟ್ಟಿ ಕೊಪ್ಪಲು ವಾಸಿ  ಶ್ರೀಮತಿ ಮಲ್ಲಿಗೆಮ್ಮ ಕೊಂ ರಾಜೇಗೌಡ ಮನೆಯಿಂದ ಹೊರಟು ಕೂಲಿ ಕೆಲಸಕ್ಕೆ  ಹೋಗಲು ಚಿಕ್ಕಹೊನ್ನೇನಹಳ್ಳಿ  ಹತ್ತಿರ  ರಿಂಗ್ ರಸ್ತೆಯಲ್ಲಿರುವ  ನಬಿ ಅಹಮ್ಮದ್  ರವರ ಗುಜರಿ ಅಂಗಡಿ ಮುಂಭಾಗ  ರಸ್ತೆ ಮದ್ಯದಲ್ಲಿದ್ದ ಡಿವೈಡರ್  ಪಕ್ಕದಲ್ಲಿ ರಸ್ತೆ ದಾಟಲು  ನಿಂತಿದ್ದಾಗ  ಸಾಲಗಾಮೆ ಕಡೆಯಿಂದ ಬಂದ ಕೆಎ-23-ಎಂ-5884ಕಾರಿನ ಚಾಲಕ  ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಮಲ್ಲಿಗೆಮ್ಮ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಮಲ್ಲಿಗೆಮ್ಮರವರಿಗೆ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನದ ಸಕರ್ಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಲಾಗಿ ಪರೀಕ್ಷಿಸಿದ ವೈದ್ಯರು, ಮಲ್ಲಿಗಮ್ಮ ಕೋಂ ರಾಜೇಗೌಡ, 60 ವರ್ಷ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು  ಮೃತಳ ಪತಿ ಶ್ರೀ ರಾಜೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಇನ್ನೋವಾ ಕಾರು ಬೈಕಿಗೆ  ಡಿಕ್ಕಿ, ಬೈಕ್ ಹಿಂಬದಿ ಕುಳಿತ್ತಿದ್ದವರ  ಸಾವು :  ದಿನಾಂಕ: 07-04-2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಹೊಳೇನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ತೆರಣ್ಯ ಗ್ರಾಮದ ವಾಸಿ ಚನ್ನಕೇಶವ ರವರು ಸ್ನೇಹಿತ ಶ್ರೀನಿವಾಸಸ್ವಾಮಿ ರವರ ಬಾಬ್ತು  ಕೆಎ-13-ಇಇ-6854 ಸ್ಪೆಂಡರ್ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು  ಸ್ವಂತ ಕೆಲಸದ ನಿಮಿತ್ತ  ಅಂಕನಳ್ಳಿಗೆ ಹೋಗಿ ವಾಪಸ್ ಊರಿಗೆ ಬರಲು ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ತೆರಣ್ಯ ಗ್ರಾಮದ ಮಂಜೇಗೌಡ ರವರ ಮನೆಯ ಹತ್ತಿರ ಹೋಗುತ್ತಿದ್ದಾಗ  ಹಿಂಬದಿಯಿಂದ ಬಂದ ಕೆಎ-01-ಎಡಿ-7169 ಇನ್ನೋವಾ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ  ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು,  ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ  ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯೆ ಚನ್ನಕೇಶವ ಬಿನ್ ರಾಜೇಗೌಡ, 38 ವರ್ಷ ರವರು ಮೃತಪಟ್ಟಿರುತ್ತಾರೆಂದು  ಮೃತರ ತಮ್ಮ  ಶ್ರೀ ಯೋಗಣ್ಣ ಟಿ.ಆರ್  ರವರು ಕೊಟ್ಟ ದೂರಿನ ಮೇರೆಗೆ ಹೊಳೇನರಸೀಪುರ ನಗರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಬಂಧಿತರಿಂದ ಸುಮಾರು 1969/- ಬೆಲೆಯ ಮದ್ಯ ವಶ:   ಪ್ರಕರಣ:1; ದಿನಾಂಕ: 07-04-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ದುಂಡನಾಯಕನಹಳ್ಳಿ ಗ್ರಾಮದ ವಾಸಿ ಶ್ರೀ ಪಾಪಯ್ಯ ಬಿನ್ ಯಾಲಕ್ಕಯ್ಯರವರು ಗ್ರಾಮದ ಸರ್ಕಲ್ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ರವಿಕುಮಾರ್ ಗೊರೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಪಾಪಯ್ಯ ಬಿನ್ ಯಾಲಕ್ಕಯ್ಯ,  68 ವರ್ಷ,  ದುಂಡನಾಯಕನಹಳ್ಳಿ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ ಸುಮಾರು 1181/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

   ಪ್ರಕರಣ 2:  ದಿನಾಂಕ: 07-04-2018 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣ ಬಿಜಿಎಸ್ ಕಾಲೇಜು ರಸ್ತೆಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಕು|| ಮಧು ಎಂ.ಸಿ. ಅರಕಲಗೂಡು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವರ ಹೆಸರು ವಿಳಾಸ ಕೇಳಲಾಗಿ ಮೈಲಾರಿಗೌಡ ಬಿನ್ ನಿಂಗೇಗೌಡ, 65 ವರ್ಷ, ಬಿಜಿಎಸ್ ಕಾಲೇಜು ಮುಂಭಾಗ, ಕೋಟೆ, ಅರಕಲಗೂಡು ಪಟ್ಟಣ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 788/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ :    ದಿನಾಂಕ: 02-04-2018 ರಂದು ಅರಕಗಲೂಡು ಪಟ್ಟಣ ಮೇಗಲ ಸಾಲಗೇರಿ ವಾಸಿ ಕಾಳಾಚಾರ್ ರವರ ಪತ್ನಿ ಸಹನ ಹೊಳೇನರಸೀಪುರಕ್ಕೆ ಸಂಬಂಧಿಕರ  ಮನೆಗೆ ಹೋಗಿ ಬರುವುದಾಗಿ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಸಹನ ರವರ ಪತಿ ಶ್ರೀ ಕಾಳಾಚಾರ್ ಬಿನ್ ಲೇಟ್ ವೀರಭದ್ರಾಚಾರ್ ರವರು ದಿನಾಂಕ: 07-04-2018 ರಂದು ಕೊಟ್ಟ ದೂರಿನ ಮೇರೆಗೆ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಸಹನ ಕೊಂ ಕಾಳಾಚಾರ್, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಕಪ್ಪು ಟಾಪ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಈ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹೊಳೆನರಸೀಪುರ ನಗರ ಠಾಣೆ ಫೋನ್ ನಂ. 08175-273333 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ, ಚಕ್ಕುಡಿಗೆ ಗ್ರಾಮದ ಪ್ರಕಾಶ್ ರವರ ಮಗಳು ಗಾನವಿ ಹಾಸನ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಹಾಸನದ ಬುಸ್ತೇನಹಳ್ಳಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ದಿನಾಂಕ: 07-04-2018 ರಂದು ಬೆಳಿಗ್ಗೆ 08-30 ಗಂಟೆ ಸಮಯದಲ್ಲಿ ಎಂದಿನಂತೆ ಕಾಲೇಜಿಗೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಗಾನವಿ ರವರ ತಂದೆ ಶ್ರೀ ಪ್ರಕಾಶ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಗಾನವಿ ಸಿ.ಪಿ. ಬಿನ್ ಪ್ರಕಾಶ್, 19 ವರ್ಷ, 5' ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು,  ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಟಾಪ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

No comments: