* * * * * * HASSAN DISTRICT POLICE

Saturday, April 7, 2018

PRESS NOTE : 07-04-2018


ಪತ್ರಿಕಾ ಪ್ರಕಟಣೆ             ದಿನಾಂಕ: 07-04-2018

ಲಾರಿ ಡಿಕ್ಕಿ ಪಾದಚಾರಿ ಸಾವು: ದಿನಾಂಕ: 07-04-2018 ರಂದು ಬೆಳಿಗ್ಗಿನ ಜಾವ 2-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹೊಸನಗರ ವಾಸಿ ಶ್ರೀ ಅಬ್ಬಾಸ್ ಬೇರಿ, ರವರು ಬಾಬ್ತು ಲಕ್ಷ್ಮೀಪುರ ಗ್ರಾಮದ ಜಮೀನಿನ ಹತ್ತಿರ ಹೋಗಲು ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ರಾಯಪುರ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಉಡುಪಿಯಿಂದ ಬಂದ  ಕೆಎ-51 ಸಿ-1018 ರ ಲೈಲಾಂಡ್ ಸ್ಲೀಪರ್ ಕೋಚ್ನ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಶ್ರೀ ಅಬ್ಬಾಸ್ ಬೇರಿ ಬಿನ್ ಉನ್ನಿಬೇರಿ, 39 ವರ್ಷ, ಹೊಸನಗರ, ಬೇಲೂರು ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಪ್ರತ್ಯಕ್ಷದರ್ಶಿ  ಶ್ರೀ ಮಹಮದ್ ರಿಜ್ವಾನ್, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಡಿಕ್ಕಿ, ಪಾದಚಾರಿ ಸಾವು :  ದಿನಾಂಕ: 06-04-2018 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಬೀರನಹಳ್ಳಿ ಗ್ರಾಮದ ವಾಸಿ ಶ್ರೀ ಶಿವೇಗೌಡ, ರವರು ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ-ಹಿರೀಸಾವೆ ರಸ್ತೆ, ಚಲ್ಯ ಬೀರನಹಳ್ಳಿ ಗೇಟ್ ಹತ್ತಿರ ನಿಂತಿದ್ದಾಗ ಹಿಂಬದಿಯಿಂದ ಬಂದ ಕೆಎ-13, ಯು-5415 ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಶಿವೇಗೌಡ, ರವರ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶ್ರವಣಬೆಳಗೊಳ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ಶಿವೇಗೌಡ, 70 ವರ್ಷ, ಬೀರನಹಳ್ಳಿ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತ ಮಗ ಶ್ರೀ ಗಣೇಶ್, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂವರ ಬಂಧನ, ಬಂಧಿತರಿಂದ ಸುಮಾರು 3,948/- ಬೆಲೆಯ ಮದ್ಯ ವಶ: ದಿನಾಂಕ: 06-04-2018 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಕಾಮನಾಯಕನಹಳ್ಳಿ ಗ್ರಾಮದ ವಾಸಿ ಶ್ರೀ ಮಧು, ಅದೇ ಗ್ರಾಮದ ವಾಸಿ ಶ್ರೀ ಶಂಕರ, ರವರುಗಳ ಬಾಬ್ತು ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಯೋಗಾಂಬರಂ, ಎಎಸ್ಐ, ನುಗ್ಗೇಹಳ್ಳಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ಮಧು ಬಿನ್ ಮಹಾಲಿಂಗೇಗೌಡ,  25 2) ಶಂಕರ ಬಿನ್ ಜವರೇಗೌಡ, 40 ವರ್ಷ 3) ಅಮಾಸೇಗೌಡ ಬಿನ್ ದೊಡ್ಡೇಗೌಡ, 48 ವರ್ಷ, ಎಲ್ಲರೂ ಕಾಮನಾಯಕನಹಳ್ಳಿ ಗ್ರಾಮ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು  3,948/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಹುಡುಗ ಕಾಣೆ : ದಿನಾಂಕ: 05-04-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಅವ್ವೆರೇಹಳ್ಳಿ ಗ್ರಾಮದ ವಾಸಿ ಲೇಟ್ ಶ್ರೀ ಸುರೇಶ್, ರವರ ಮಗ ಶ್ರೀ ಭರತ್ಕುಮಾರ್, ರವರು ಹಾಸನ ತಾಲ್ಲೂಕು, ಬನವಾಸೆ ಗ್ರಾಮದಲ್ಲಿ ನಡೆಯುತ್ತಿದ್ದ ಪ್ಯಾಟೇ ಹುಡ್ಗೀರ್, ಹಳ್ಳಿ ಲೈಫ್ ಶೂಟಿಂಗ್ ಅನ್ನು ನೋಡಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಭರತ್ಕುಮಾರ್, ರವರ ತಾಯಿ ಶ್ರೀ ಹೇಮಾವತಿ, ರವರು ದಿನಾಂಕ: 06-04-2018 ರಂದು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗ ಚಹರೆ: ಶ್ರೀ ಭರತ್ ಬಿನ್ ಲೇಟ್ ಸುರೇಶ್, 24 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಬೆಳಿ ಶರ್ಟ  ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗನ ಸುಳಿವು ಸಿಕ್ಕಲ್ಲಿ 08172-225475 ಕ್ಕೆ ಸಂಪರ್ಕಿಸುವುದು.


No comments: