* * * * * * HASSAN DISTRICT POLICE

Wednesday, January 10, 2018

PRESS NOTE : 09-01-2018


ಪತ್ರಿಕಾ ಪ್ರಕಟಣೆ              ದಿನಾಂಕ: 09-01-2018

ಹುಡುಗಿ ಕಾಣೆ
ದಿನಾಂಕ: 05-01-2018 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಮಲಸಾವರ ಗ್ರಾಮ, ಲಕ್ಷ್ಮೀಪುರ ವಾಸಿ ಶ್ರೀ ಜುಲೈಕಾ, ರವರ ಮಗಳು ಕು|| ಹಸೀನಾಭಾನು, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಹಸೀನಾಭಾನುಳ ತಂದೆ ಶ್ರೀ ಜುಲೈಕಾ, ರವರು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಹಸೀನಾಭಾನು ಬಿನ್ ಜುಲೈಕಾ, 25 ವರ್ಷ, 5 ಅಡಿ ಎತ್ತರ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣ ಮೈಕಟ್ಟು, ಉದರ್ು ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-221342 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ


ದಿನಾಂಕ: 06-01-2018 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ಹೋಬಳಿ ಕುಂಬಾರಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟರಮಣಯ್ಯ, ರವರ ಪತ್ನಿ ಶ್ರೀಮತಿ ಲಲಿತಮ್ಮ ರವರು ಮಗಳು ಕು|| ರೋಜಾದೊಂದಿಗೆ ನಾಗಮಂಗಲಕ್ಕೆ ಹೋಗಲು  ಚನ್ನರಾಯಪಟ್ಟಣ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದು, ಶ್ರೀಮತಿ ಲಲಿತಮ್ಮರವರು ರೋಜಾಳನ್ನು ಅಲ್ಲಿಯೇ ಬಿಟ್ಟು ಹಣ್ಣು ತರಲು ಹೋಗಿದ್ದು ವಾಪಸ್ ಬಂದು ನೋಡಲಾಗಿ ಕುಮಾರಿ ರೋಜಾ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರೋಜಾಳ ತಂದೆ ಶ್ರೀ ವೆಂಕಟರಮಣಯ್ಯ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ರೋಜಾ ಬಿನ್ ವೆಂಕಟರಮಣಯ್ಯ, 19 ವರ್ಷ, 5.5 ಅಡಿ ಎತ್ತರ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾರೆ. ಕೆಂಪುಬಣ್ಣ ಟಾಪ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-252333 ಕ್ಕೆ  ಸಂಪರ್ಕಿಸುವುದು.

No comments: