* * * * * * HASSAN DISTRICT POLICE

Monday, September 11, 2017

PRESS NOTE : 09-09-2017

ಪತ್ರಿಕಾ ಪ್ರಕಟಣೆ        ದಿನಾಂಕ:09-09-2017
ಮಟ್ಕಾ ಜೂಜಾಡುತ್ತಿದ್ದ ಒಬ್ಬನ ಬಂಧನ ಬಂಧಿತನಿಂದ 1095/- ನಗದು ವಶ
     ದಿನಾಂಕ:08-09-2017 ರಂದು ಸಂಜೆ 5-45 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಬಸ್ತಿಗುಡಿ ವೃತ್ತದ  ಆಟೋ ಸ್ಟಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದಾರೆಂದು ಅರಸೀಕೆರೆ ನಗರ ಠಾಣೆಯ ಪಿಐ ಶ್ರೀ.ಪ್ರಭಾಕರ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಸ್ಥಳದಲ್ಲಿ  1ರೂಗೆ 80 ರೂಪಾಯಿ ಕೊಡುವುದಾಗಿ ಜೂಜಾಟ ಆಡಿಸುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ರಫೀಕ್ ಬಿನ್ ಮಹಮದ್ ಹನೀಫ್, 24ವರ್ಷ, ಸುನ್ನಿ ಚೌಕ, ಅರಸೀಕೆರೆ ನಗರ ಎಂದು ತಿಳಿಸಿದವನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ ಜೂಜಾಟದಿಂದ ಗಳಿಸಿಟ್ಟಿದ್ದ 1095=00 ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗಿ ಕಾಣೆ


      ದಿನಾಂಕ :03-09-2017 ರಂದು ಬೆಳಗ್ಗೆ 9.00 ಗಂಟೆ  ಸಮಯದಲ್ಲಿ ಆಲೂರು ತಾಲ್ಲೂಕ್ ನಲ್ಲೂರು ಗ್ರಾಮವ ವಾಸಿ ದಿವಾಕರ ರವರ ಮಗಳು ಪುಷ್ಪ.ಎನ್.ಡಿ ರವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಕಂಪ್ಯೂಟರ್ ಪರೀಕ್ಷೆಗೆ ಹೋಗುವುದಾಗಿ ಹಾಸನ ನಗರದ ಬಸ್ಸ್ಟಾಂಡ್ಗೆ ಬಂದಿದ್ದು, ವಾಪಸ್ಸು ದಿನಾಂಕ :04-09-2017 ರಂದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪುಷ್ಟರವರ ತಂದೆ ದಿವಾಕರ ರವರು ದಿ :09-09-2017 ರಂದು ರಂದು ಕೊಟ್ಟ ದೂರಿನ ಮೇರೆಗೆ  ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿ ಚಹರೆ : ಪುಷ್ಪ.ಎನ್.ಡಿ ಬಿನ್ ದಿವಾಕರ, 20ವರ್ಷ, 5.2 ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಕನ್ನಡ ಬಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ  ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿ ಪತ್ತೆಯಾದಲ್ಲಿ ಹಾಸನ ಬಡಾವಣೆ ಪೊಲೀಸ್  ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

No comments: