* * * * * * HASSAN DISTRICT POLICE

Wednesday, January 23, 2019

ಹಾಸನ ಜಿಲ್ಲೆಯ ಪತ್ರಿಕಾ ಪ್ರಕಟಣೆ ದಿ: 23-01-2019                                           ಪತ್ರಿಕಾ ಪ್ರಕಟಣೆ                           ದಿ: 23-01-2019

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, 1,236/- ಬೆಲೆಯ ಮದ್ಯ ವಶ:
      ದಿನಾಂಕ: 22-01-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಶ್ರೀ ತಿಮ್ಮಪ್ಪಗೌಡ, ಪಿಎಸ್ಐ ಚನ್ನರಾಯಪಟ್ಟಣ ನಗರ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಚನ್ನರಾಯಪಟ್ಟಣ ತಾಲ್ಲೂಕು, ಗೌಡಗೆರೆ ಗ್ರಾಮ ವಾಸಿ ಶ್ರೀ ನಂಜೇಗೌಡ, ರವರ ಬಾಬ್ತು ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ನಂಜೇಗೌಡ ಬಿನ್ ರಂಗೇಗೌಡ, 30 ವರ್ಷ, ಗೌಡಗೆರೆ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 1,236/- ನಗದನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರರಕಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಗೂಡ್ಸ್ ವಾಹನ ಡಿಕ್ಕಿ, ಪಾದಚಾರಿ ಸಾವು:
     ದಿನಾಂಕ: 22-01-2019 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಗವೇನಹಳ್ಳಿ ಗ್ರಾಮದ ವಾಸಿ ಶ್ರೀ ಜಿ. ಹೋರಿಗೌಡ, ರವರು ಕೆಲಸದ ನಿಮಿತ್ತ ಹಾಸನದ ಡೈರಿ ವೃತ್ತಕ್ಕೆ ಬಂದಿದ್ದು, ವಾಪಸ್ ಮನೆಗೆ ಹೋಗಲು ಹಾಸನಸ ಡೈರಿ ವೃತ್ತ ಹತ್ತಿರವಿರುವ ರೈಲ್ವೆ ಬ್ರಿಡ್ಜ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಬಿ-8861 ರ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಜಿ. ಹೋರಿಗೌಡ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಜಿ. ಹೋರಿಗೌಡ ಬಿನ್ ಲೇಟ್ ಗಿಡ್ಡೇಗೌಡ, 62 ವರ್ಷ, ಗವೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು. ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಚಿದಾನಂದ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
     ದಿನಾಂಕ: 20-01-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ವೃಂದಾವನಹಳ್ಳಿ ಗ್ರಾಮದ ವಾಸಿ ಶ್ರೀ ಗುರುಸಿದ್ದಪ್ಪ, ರವರ ಮಗಳು ಕು|| ವಿನುತಾ, ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ವಿನುತಾಳ ತಂದೆ ಶ್ರೀ ಗುರುಸಿದ್ದಪ್ಪ, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ವಿನುತಾ ಬಿನ್ ಗುರುಸಿದ್ದಪ್ಪ, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-271221 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ
     ದಿನಾಂಕ: 18-01-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಲಕ್ಷ್ಮೀಪುರ ಗ್ರಾಮದ ವಾಸಿ ಶ್ರೀ ಶ್ರೀನಿವಾಸ, ರವರ ಮಗಳು ಕು|| ಎಲ್.ಎಸ್. ವೆನ್ನೆಲಾ, ಕಾರೆಗೇಟ್ ಗೇಟ್ ಬಳಿ ಇರುವ ಕೃಷಿ ಕಾಲೇಜಿನಲ್ಲಿ 3 ನೇ ವರ್ಷದ ಅಗ್ರಿ ಬಯೋಟೆಕ್ ವಿದ್ಯಾಭ್ಯಾಸ ಮಾಡಿಕೊಂಡು ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸವಿದ್ದು, ಅನುಮತಿ ಪಡೆದುಕೊಂಡು ಹಾಸ್ಟೆಲಿ ನಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ವೆನ್ನೆಲ್ಲಾಳ ತಂದೆ ಶ್ರೀ ಶ್ರೀನಿವಾಸ, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ವೆನ್ನೆಲ್ಲಾ ಬಿನ್ ಶ್ರೀನಿವಾಸ, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ & ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-258038 ಕ್ಕೆ ಸಂಪರ್ಕಿಸುವುದು

ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ : 22-01-2019


ಪತ್ರಿಕಾ ಪ್ರಕಟಣೆ                           ದಿ: 22-01-2019


ಯಾರೋ ಕಳ್ಳರು ದೇವಸ್ಥಾನದ ಬೀಗ ಮುರಿದು, ಪೂಜಾ ಸಾಮಗ್ರಿಗಳ ಕಳವು:

ದಿನಾಂಕ: 18-01-2019 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಸಂಕಲಾಪುರ ಗ್ರಾಮದ ವಾಸಿ ಶ್ರೀ ಮಹಾದೇವ, ರವರು ಗ್ರಾಮದ ಶ್ರೀ ದಂಡಿನ ಮಾರಮ್ಮ ದೇವಸ್ಥಾನದ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ: 19-01-2019 ರಂದು ಮಧ್ಯಾಹ್ನ 3-00 ಗಂಟೆಗೆ ದೇವಸ್ಥಾನದ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ 4 ಅಡಿ ಉದ್ದದ ಒಂದು ದೀಪಾಲೆ ಕಂಬ, 3 ಅಡಿ ಉದ್ದದ 1 ಜೊತೆ ದೀಪಾಲೆ ಕಂಬ 5 ಹಿತ್ತಾಳೆ ಬಿಂದಿಗೆಗಳು ಮತ್ತು ಹಿತ್ತಾಳೆ ಚಂಬು, 1/2 ತೂಕದ 01 ಬೆಳ್ಳಿ ಛತ್ರಿ ಮತ್ತು ಬೆಳ್ಳಿ ಸರ, 3 ಗ್ರಾಂ ತೂಕದ ಚಿನ್ನದ ಗುಂಡು, 4 ದೊಡ್ಡ ಗಂಟೆ, 2 ಚಿಕ್ಕ ಗಂಟೆ 2 ಹಿತ್ತಾಳೆ ತಟ್ಟೆಗಳನ್ನು ಕಳವು ಮಾಡಿಕೊಂಡು ಹೋಗಿತ್ತಾರೆಂದು ಪಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪತ್ನಿ, ಪತಿಯೊಂದಿಗೆ ಜಗಳ ಪತಿಗೆ ಮಾರಣಾಂತಿಕ ಹಲ್ಲೆ:

ದಿನಾಂಕ: 20-01-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ವಿಜಾಪುರ ಗ್ರಾಮದ ವಾಸಿ ಶ್ರೀ ಚಿಕ್ಕಣ, ರವರ ಪತ್ನಿ ಶ್ರೀಮತಿ ರುಕ್ಮಣಿ, ರವರೊಂದಿಗೆ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೆ ಸಣ್ಣ-ಪುಟ್ಟ ವಿಚಾರಗಳಿಗೆ ಅಗಾಗ್ಗೆ ಜಗಳವಾಡುತ್ತಿದ್ದು, ಶ್ರೀ ಚಿಕ್ಕಣ್ಣ, ರವರು ಕೂಲಿ ಕೆಲಸ ಮಾಡಿಕೊಂಡು ಮನೆಗೆ ಬಂದಿದ್ದಾಗ ಪತ್ನಿ ಶ್ರೀಮತಿ ರುಕ್ಮಣಿ, ರವರು ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಸೀಮೆಎಣ್ಣೆ ದೀಪದಿಂದ ಹೊಡೆದಾಗ ಸೀಮೆಎಣ್ಣೆ ಮೈಮೇಲೆ ಚಲ್ಲಿದಾಗ ಹಣೆ, ಮುಖ, ಬಲಭುಜಕ್ಕೆ ಸುಟ್ಟಗಾಯಗಳಾಗಿರುತ್ತದೆಂದು ಪಿರ್ಯಾದಿಯವರು ಅಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕೆಎಸ್ಆರ್ಟಿ ಬಸ್ ಬೈಕ್ಗೆ ಡಿಕ್ಕಿ, ಬೈಕ್ ಹಿಂಬದಿ ಕುಳಿತಿದ್ದವನ ಸಾವು:      

ದಿನಾಂಕ:  21-01-2019 ರಂದು ಸಂಜೆ 5-20 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಜಾನೆಕೆರೆ ಗ್ರಾಮದ ವಾಸಿ ಶ್ರೀ ಮೋಹನ್, ರವರು ಅದೇ ಗ್ರಾಮದ ವಾಸಿ ಶ್ರೀ ಲಕ್ಷ್ಮಣ, ರವರ ಬಾಬ್ತು ಕೆಎ-46, ಹೆಚ್-6476 ರ ಟಿವಿಎಸ್ ಬೈಕ್ನಲ್ಲಿ ಬಾಳ್ಳುಪೇಟೆಗೆ ಹೋಗಲು ಸಕಲೇಶಪುರ ತಾಲ್ಲೂಕು, ಕೊಲ್ಲಹಳ್ಳಿ ಬಿ.ಎಂ. ರಸ್ತೆ ಹತ್ತಿರ ಹೋಗುತ್ತಿದ್ದಾಗ ಎದುಗಡೆಯಿಂದ ಬಂದ ಕೆಎ-18, ಎಫ್-687 ರ ಕೆಎಸಆರ್ಟಿಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯೆತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಶ್ರೀ ಮೋಹನ್ ಬಿನ್ ದೊಡ್ಡಯ್ಯ, 35 ವರ್ಷ, ಜಾನೆಕೆರೆ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ದೊಡ್ಡಯ್ಯ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.  
                  
ಅಪರಿಚಿತ ವ್ಯಕ್ತಿ ವೃದ್ದೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಹೆದರಿಸಿ 45 ಸಾವಿರ ಬೆಲೆ ಬಾಳುವ ಚಿನ್ನದ ಸರವನ್ನುಕಿತ್ತುಕೊಂಡು ಪರಾರಿ :

ದಿನಾಂಕ: 15-01-2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬೂವನಹಳ್ಳಿ ಗ್ರಾಮದ 70 ವರ್ಷ ವಯಸ್ಸಿನ ಸಾವಿತ್ರಮ್ಮರವರು ಹಾಸನ ತಾಲ್ಲೂಕು, ಕೌಶಿಕ ಹಿರಿಹಳ್ಳಿ ಗ್ರಾಮದ ದೇವಸ್ಥಾನಕ್ಕೆ ಹೋಗಲು ಹಾಸನಕ್ಕೆ ಬಂದು ದೇವರ ಪೂಜೆ ಸಾಮಾನು ತರಲು ಗಣಪತಿ ಪೆಂಡಾಲ್ ಹತ್ತಿರ ಹೋಗುತ್ತಿದ್ದಾಗ ಯಾರೋ ಒಬ್ಬಅಪರಿಚಿತ ವ್ಯಕ್ತಿ ಯಾವುದೋ ಒಂದು ಬೈಕಿನಲ್ಲಿ ಸಾವಿತ್ರಮ್ಮರವರ ಹತ್ತಿರ ಬಂದು ನಿಮ್ಮ ಮಗನಿಗೆ ಆಕ್ಸಿಡೆಂಟ್ ಆಗಿ ತುಂಬಾ ಏಟಾಗಿದೆ ಬನ್ನಿ ಕರೆದುಕೊಂಡು ಹೋಗುತ್ತೇನೆಂದು ಬೈಕಿನಲ್ಲಿ ಕೂರಿಸಿಕೊಂಡು ಪವನಪುತ್ರ ರೆಸಾರ್ಟ್ ಹತ್ತಿರದ ನಿರ್ಜನ ಪ್ರದೇಶಕ್ಕೆಕರೆದುಕೊಂಡು ಹೋಗಿ ಕುತ್ತಿಗೆಯಲ್ಲಿದ್ದ 45 ಸಾವಿರ ಬೆಲೆ ಬಾಳುವ 30 ಗ್ರಾಂ ತೂಕದ ಚಿನ್ನದ  ಸರವನ್ನು ಬಿಚ್ಚಿಸಿಕೊಂಡು ಇಲ್ಲೆ ಇರಬೇಕು ಎಂದು ಹೆದರಿಸಿ, ನಿಮ್ಮ ಮೊಮ್ಮಗನನ್ನುಕರೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಸ್ ಬರಲಿಲ್ಲ,  ನನಗೆ ಸುಳ್ಳು ಹೇಳಿ ನನ್ನ ಸರವನ್ನು ಲಪಟಾಯಿಸಿಕೊಂಡು ಹೋಗಿರುವ ಕಳ್ಳನನ್ನು ಪತ್ತೆ ಮಾಡಿ ಸರವನ್ನು ಕೊಡಿಸಿಕೊಡಬೇಕೆಂದು ಶ್ರೀಮತಿ ಸಾವಿತ್ರಮ್ಮರವರು ದಿನಾಂಕ: 21-01-2018 ರಂದು ಕೊಟ್ಟದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

10,76,600/- ರೂ ಬೆಲೆಯಚಿನ್ನ ಮತ್ತು ಬೆಳ್ಳಿ ಆಭರಣಗಳ ಕಳವು                                                             

ದಿನಾಂಕ: 19-01-2019 ರಂದು ಸಕಲೇಶಪುರ ಪಟ್ಟಣ ಲಕ್ಷ್ಮಿಪುರ ಬಡಾವಣೆ ವಾಸಿ ಹೆಚ್.ಎಸ್. ಸೂರ್ಯನಾರಾಯಣಶೆಟ್ಟಿರವರು  ಮನೆಗೆ ಹೋಗಿ ಬೀಗ ಹಾಕಿಕೊಂಡುತಮ್ಮನ ಮಗನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿ ದಿನಾಂಕ: 21-01-2019 ರಂದು ಬೆಳಿಗ್ಗೆ 09-00 ಗಂಟೆಗೆ ಮನೆಯ ಹತ್ತಿರ  ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲನ್ನುಯಾರೋ ಕಳ್ಳರು ಯಾವುದೋಆಯುಧದಿಂದ ಮೀಟಿ ಮನೆಯೊಳಗೆ ಹೋಗಿ ಮನೆಯ ರೂಮಿನಲ್ಲಿಟ್ಟದ್ದ ಕಬ್ಬಿಣದ ಗಾಡ್ರೇಜ್ ಬೀರುವಿಗೆ ಹಾಕಿದ್ದ ಬೀಗವನ್ನುಯಾವುದೋ ಆಯುಧದಿಂದ ಮೀಟಿ ಬೀರುವಿನ ಲಾಕರ್ನಲ್ಲಿದ್ದ 10,76,600/- ಬೆಲೆಯಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ಶ್ರೀ ಹೆಚ್.ಎಸ್. ಸೂರ್ಯನಾರಾಯಣಶೆಟ್ಟಿರವರು ನೀಡಿದದೂರಿನ ಮೇರೆಗೆ ಸಕಲೇಶಪುರ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.


ಹೆಂಗಸು ಕಾಣೆ :

ದಿನಾಂಕ: 16-01-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿಅರಕಲಗೂಡುತಾಲ್ಲೂಕು, ಹೆಬ್ಬಾಲೆಗ್ರಾಮದ  ಮಹೇಶ ರವರ ಪತ್ನಿ ಶ್ರೀಮತಿ ಮಂದಾಕಿನಿ ಸಂಕ್ರಾಂತಿ ಹಬ್ಬಕ್ಕೆಂದುತಾಯಿ ಮನೆ ಅಗ್ರಹಾರಗ್ರಾಮಕ್ಕೆ ಹೋಗಿ ವಾಪಸ್ಊರಿಗೆ ಹೋಗಲು ಮಂದಾಕಿನಿ ಅಣ್ಣನೊಂದಿಗೆಕೊಣನೂರಿಗೆ ಬಸ್ ನಿಲ್ದಾಣಕ್ಕೆ ಬಿಡಿಸಿಕೊಂಡಿದ್ದು, ಕೊಣನೂರು ಬಸ್ ನಿಲ್ದಾಣದಿಂದ ಮಂದಾಕಿನಿ ಗಂಡನ ಮನೆಗೆ ಹೋಗದೆ ಕಾಣೆಯಾಗಿರುತ್ತಾಳೆ. ಎಲ್ಲಾಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಮಂದಾಕಿನಿ ರವರ ಪತಿ ಶ್ರೀ ಮಹೇಶ ರವರು ದಿನಾಂಕ: 21-01-2019 ರಂದುಕೊಟ್ಟದೂರಿನ ಮೇರೆಗೆಕೊಣನೂರುಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಮಂದಾಕಿನಿ ಕೋಂ ಮಹೇಶ, 28 ವರ್ಷ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ   ಕೊಣನೂರುಠಾಣೆ ಫೋನ್ ನಂ.08175-226227 ಕ್ಕೆ ಸಂಪಕರ್ಿಸುವುದು.

ಹುಡುಗಿ ಕಾಣೆ

ದಿನಾಂಕ: 16-01-2019 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ನಿಟ್ಟೂರು ಗ್ರಾಮದ ವಾಸಿ ಶ್ರೀ ರಾಜೇಗೌಡ, ರವರ ಮಗಳು ಕು|| ನೇತ್ರಾವತಿ, ಹಾಸನದ ಮಹಿಳಾ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ನೇತ್ರಾವತಿ ಬಿನ್ ರಾಜೇಗೌಡ, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268630 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ

ದಿನಾಂಕ: 20-01-2019 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ದುದ್ದ ಆರ್.ಎಸ್. ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿ, ರವರ ಮಗಳು ಕು|| ರಶ್ಮಿ @ ರೇಖಾ, ನಾಯಿಗೆ ಊಟ ಹಾಕುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋದವರು ಇದುರವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರಶ್ಮಿ @ ರೇಖಾಳ ತಂದೆ ಶ್ರೀ ಪುಟ್ಟಸ್ವಾಮಿ, ರವರು ಕೊಟ್ಟ ದೂರಿನ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಕಾಣೆಯಾದ ಹುಡುಗಿಯ ಚಹರೆ: ಕು|| ರಶ್ಮಿ @ ರೇಖಾ ಬಿನ್ ಪುಟ್ಟಸ್ವಾಮಿ, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು 08172-223935 ಕ್ಕೆ ಸಂಪರ್ಕಿಸುವುದು.
                            
ಹೆಂಗಸು ಕಾಣೆ

ದಿನಾಂಕ: 19-01-2019 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಕೆ. ಹೊಸಹಳ್ಳಿ ಗ್ರಾಮದ ವಾಸಿ ಶ್ರೀ ಕೆ.ಎನ್. ನಾಗರಾಜು, ರವರ ಮಗಳು ಶ್ರೀಮತಿ ಅರ್ಪಿತಾ, ಮನೆಯಿಂದ ತೋಟಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಅರ್ಪಿತಾಳ ತಂದೆ ಶ್ರೀ ನಾಗರಾಜು, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಅರ್ಪಿತಾ ಕೋಂ ಪ್ರಶಾಂತ, 26 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪರ್ಕಿಸುವುದು.

Monday, January 21, 2019

HASSAN DISTRICT PRESS NOTE 21-01-2019


ಪತ್ರಿಕಾ ಪ್ರಕಟಣೆ                                               ದಿ: 21-01-2019

ಜೂಜಾಡುತ್ತಿದ್ದ ಐವರ ಬಂಧನ, ಬಂಧಿತರಿಂದ 5 ಸಾವಿರ ನಗದು ವಶ:
     ದಿನಾಂಕ: 20-01-2019 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಶ್ರೀಮತಿ ರೇಖಾಬಾಯಿ, ಪಿಎಸ್ಐ, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಸಾಲಗಾಮೆ ಕಡೆ ಗಸ್ತು ಕರ್ತವ್ಯದಲ್ಲಿದ್ದಾಗ  ಹಾಸನ ತಾಲ್ಲೂಕು, ಬಲ್ಲೇನಹಳ್ಳಿ ಗ್ರಾಮದ ಸೀಗೆ ಗುಡ್ಡ ಕಾವಲ್ ನ ಪಾರೆಸ್ಟ್ ನಲ್ಲಿ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ಪವನ ಬಿನ್ ಪುಟ್ಟರಾಜ, 19 ವರ್ಷ, ಕ್ಯಾಟೀನ್ ಕೆಲಸ, ಸಂಜೀವಿನಿ ಆಸ್ಪತ್ರೆ ಹಿಂಭಾಗ, ಹಾಸನ 2) ಶ್ರೀ ಸೋಮಶೇಖರ್ ಬಿನ್ ತಿಮ್ಮೇಗೌಡ, 38 ವಷ್, ಹಳೆಕೊಪ್ಪಲು ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು 3) ಶ್ರೀ ಮುನ್ನ ಬಿನ್ ಅಬ್ದುಲ್ ಸಲಾಂ, 30 ವರ್ಷ, 1ನೇ ಕ್ರಾಸ್, ಅಂಬೇಡ್ಕರ್ ನಗರ, ಹಾಸನ 4) ಶ್ರೀ ಆದಿಲ್ ಜಾವಿದ್ ಖಾನ್, 37 ವರ್ಷ, 1ನೇ ಕ್ರಾಸ್, ಅಂಬೇಡ್ಕರ್ ನಗರ, ಹಾಸನ. ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕಟ್ಕಿದ್ದ 5,000/-ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.  
ಟ್ರ್ಯಾಕ್ಟರ್ ಬೈಕ್ ಡಿಕ್ಕಿ, ಇಬ್ಬರ ಸಾವು:
      ದಿನಾಂಕ: 20-01-2019 ರಂದು ಮಧ್ಯಾಹ್ನ 2-45 ಗಂಟೆ ಸಮಯಯದಲ್ಲಿ ಚನ್ನರಾಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಚಿಕ್ಕಸೋರೆಕಾಯಿಪುರ ಗ್ರಾಮದ ವಾಸಿ ಶ್ರೀ ಗೌರೀಶ್, ರವರ ಬಾಬ್ತು ಕೆಎ-13, ಇಎಂ-7566 ರ ಪಲ್ಸರ್ ಬೈಕ್ ನಲ್ಲಿ ಅದೇ ಗ್ರಾಮದ ವಾಸಿ ಶ್ರೀ ನಂದನ್, ರವರೊಂದಿಗೆ ಹಿರೀಸಾವೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ನಂಬರ್ ಪ್ಲೇಟ್ ಇಲ್ಲದೆ ಹುಲ್ಲು ತುಂಬಿದ ಮಹಿಂದ್ರಾ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಗೌರೀಶ್ ಬಿನ್  ರಮೇಶ್, 24 ವರ್ಷ, ಮತ್ತು ಶ್ರಿ ನಂದನ್ ಬಿನ್  ನಾಗರಾಜು,  23  ವರ್ಷ, ಚಿಕ್ಕಸೋರೆಕಾಯಿಪುರ ಗ್ರಾಮ, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಗಿರೀಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಯಾರೋ ಕಳ್ಳರು ಮನೆಯ ಬೀಗ ಮುರಿದು ಬೆಳ್ಳಿ ಮತ್ತು ಚಿನ್ನಾಭರಣ ಕಳವು:
     ದಿನಾಂಕ: 19-01-2019 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣದ ಮಡಿವಾಳರ ಬೀದಿ ವಾಸಿ ಶ್ರೀಮತಿ ನಾಗಮ್ಮ, ರವರು  ಮನೆಗೆ ಬೀಗ ಹಾಕಿಕೊಂಡು ಮಗನ ಮನೆಯ ಗೃಹಪ್ರವೇಶಕ್ಕೆ ಕುಶಾಲನಗರಕ್ಕೆ ಹೋಗಿದ್ದು, ದಿನಾಂಕ: 20-01-2019 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 60 ಗ್ರಾಂ 2 ಬೆಳ್ಳಿ ದೀಪ, 20 ಗ್ರಾಂ ತೂಕದ ಬೆಳ್ಳಿಲೋಟ, 6 ಗ್ರಾಂ ತೂಕದ 01 ಚಿನ್ನದ ಕಪಾಲಿ ಉಂಗುರ, 3 ಗ್ರಾಂ ತೂಕದ ಚಿನ್ನದ ತಾಳಿ, 5 ಗ್ರಾಂ ತೂಕದ ಚಿನ್ನದ ಚಿಕ್ಕ ಉಂಗುರ 6 ಗ್ರಾಂ ತೂಕದ ಚಿನ್ನದ ಹರಳಿನ ಓಲೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.       
ಕ್ಲುಲಕ ಕಾರಣ, ದೊಣ್ಣೆಯಿಂದ ಹೊಡೆದು ರಕ್ತಗಾಯ ಹಾಗೂ ಕೊಲೆ ಬೆದರಿಕೆ:
     ದಿನಾಂಕ:20-01-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಅಗ್ಗುಂದ ಗ್ರಾಮದ ವಾಸಿ ಶ್ರೀಮತಿ ರೇಖಾ, ರವರು ತಂದೆ ಶ್ರೀ ರಂಗಪ್ಪ ತಾಯಿ ಶ್ರೀಮತಿ ಗಂಗಮ್ಮ, ಅಕ್ಕ ಶಂಕರಮ್ಮ, ರವರೊಂದಿಗೆ ಮನೆಯಲ್ಲಿದ್ದಾಗ ಪಿರ್ಯಾದಿ ದೊಡ್ಡಪ್ಪ, ಶ್ರೀ ಗಂಗಾಧರಯ್ಯ ರವರ ಮನೆಯವರಿಗೂ ಮನೆ ಪಾಲು ಮಾಡಿಕೊಳ್ಳುವ ವಿಚಾರದಲ್ಲಿ ದ್ವೇಷದಿಂದ ಶ್ರಿ ಗಂಗಾಧರಯ್ಯ, ರವರ ಮಗ ಶ್ರೀ ನಾಗರಾಜ ಮತ್ತು ಸೊಸೆ ಶ್ರೀಮತಿ ಕೆಂಪಮ್ಮ, ರವರುಗಳು ಏಕಾ-ಏಕಿ ಜಗಳ ತೆಗೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಶ್ರೀಮತಿ ರೇಖಾ, ರವರು ತಂದೆ ಶ್ರೀ ರಂಗಪ್ಪ ತಾಯಿ ಶ್ರೀಮತಿ ಗಂಗಮ್ಮ, ಅಕ್ಕ ಶಂಕರಮ್ಮ, ರವರುಗಳಿಗೆ ದೊಣ್ಣೆಯಿಂದ ರಕ್ತಗಾಯಪಡಿಸಿ, ಕೊಲೆರುತ್ತಾರೆಂದು ಪಿರ್ಯಾದಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆ ಪ್ರಕರಣ ದಾಖಲಿಸಿ, ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.     
ಸೆಲ್ವೆದೊರೈ @ ಜಾಕಿಜಾನ್, ರವರನ್ನು ಮಚ್ಚುಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪಿತರಿಗೆ ಜೀವಾವಧಿ ಶಿಕ್ಷೆ:
      ದಿನಾಂಕ: 26-10-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಕಾಕನಮನೆ ಗ್ರಾಮದ ವಾಸಿ ಶ್ರೀ ಸೆಲ್ವದೊರೈ @ ಜಾಕಿಜಾನ್, ರವರು ಪತ್ನಿ ಶ್ರೀಮತಿ ಅಂಬಿಕಾ, ರವರು ಅದೇ ಗ್ರಾಮದ ವಾಸಿಗಳಾದ 1) ಶ್ರೀ ಮೋಹನ್ 2) ಶ್ರೀ ಚಂದ್ರ @ ಚಂದ್ರಧೇಖರ್, 3) ಶ್ರೀ ಆರ್. ಗಣೇಶ್, ರವರುಗಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿರುವ ಬಗ್ಗೆ ಪತ್ನಿ ಶ್ರೀಮತಿ ಅಂಬಿಕಗಳೊಂದಿಗೆ ಗಲಾಟೆ ಮಾಡಿದ್ದಕ್ಕೆ  ಶ್ರೀ ಅಂಬಿಕ, 3 ಜನರುನ್ನು ಮನೆಗೆ ಕರೆಯಿಸಿ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ಕೊಲೆ ಮಾಡುವಂತೆ ಕುಮ್ಮಕ್ಕು ನೀಡಿದ್ದರಿಂದ ಈ ಮೇಲ್ಕಂಡ 3 ಆರೋಪಿಗಳು ಶ್ರೀ ಸೆಲ್ವದೊರೈ@ಜಾಕಿ ಜಾನ್, ವಿನಾಯಕ ಎಸ್ಟೇಟ್ ಕರೆದುಕೊಂಡು ಹೋಗಿ ಡ್ರಿಂಗ್ಸ್ ಮಾಡಿಸುತ್ತಿರುವಾಗ 1) ಮೋಹನ್ & 2) ಚಂದ್ರ @ ಚಂದ್ರಶೇಖರ್, ಮಚ್ಚುಕತ್ತಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡಿ ಸಾಕ್ಯಾಧಾರಗಳನ್ನು ಮೆರೆ ಮಾಚುವ ಉದ್ದೇಶದಿಂದ ಗುಂಡಿಯಲ್ಲಿ ಮುಚ್ಚಿಹಾಕಿದ್ದು, ಈ ಸಂಬಂದ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು,, ಹಾಸನದ 3ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಚಂದ್ರಶೇಖರ್, ಮರಗೂರು, ಪ್ರಕರಣ ವಿಚಾರಣೆ ನಡೆಸಿ, ಆರೋಪಿತರ ಮೇಲೆ ದೋಷಾರೋಪಣಾ ಸಾಬೀತಾಗಿ ಆರೋಪಿ 1) ಮೋಹನ, 2) ಚಂದ್ರ @ ಚಂದ್ರಶೇಖರ, 3) ಆರ್. ಗಣೇಶ, ಇವರುಗಳಿಗೆ 302 ರಡಿಯಲ್ಲಿ ಎಸಗಿದ ಅಪಾಧನೆಗೆ ಜೀವಾವಧಿ ಶಿಕ್ಷೆ, ಹಾಗೂ 10,000 /- ದಂಡ ಹಾಗೂ 1) ಮೋಹನ್ 2) ಚಂದ್ರ @ ಚಂದ್ರಶೇಖರ್, 3) ಆರ್. ಗಣೇಶ್, ಇವರುಗಳಿಗೆ 201 ರಡಿಯಲ್ಲಿ 3 ವರ್ಷಗಳ ಕಠಿಣ ಕಾರಗೃಹ ವಾಸ ಮತ್ತು 5 ಸಾವಿರ ದಂಡ ಮತ್ತು ದಂಡದ ಮೊತ್ತವನ್ನು ಮೃತ ಸೆಲ್ವೆದೊರೈ ರವರ ಮಕ್ಕಳಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ದಿನಾಂಕ: 18-01-2019 ರಂದು ತೀರ್ಪಿ ವಿಧಿಸಿ, ಆದೇಶಿಸಿರುತ್ತಾರೆ ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸರ್ಕಾರಿ ಅಭಿಯೋಜಕರು) ಶ್ರೀ ಕೃಷ್ಣ ಜಿ. ದೇಶಭಂಡಾರಿ, ರವರು ವಾದ ಮಂಡಿಸಿದ್ದರು.