* * * * * * HASSAN DISTRICT POLICE

Friday, January 17, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 17-01-2020




      ಪತ್ರಿಕಾ ಪ್ರಕಟಣೆ                  ದಿನಾಂಕ: 17-01-2020

ಜೂಜಾಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ 5,800/- ನಗದು ವಶ:
     ದಿನಾಂಕ: 16-01-2020 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ದಮ್ಮನಿಂಗಲ ಗ್ರಾಮದ ವಾಸಿ ಶಿವೇಗೌಡ, ರವರ ಜಮೀನಿನಲ್ಲಿರುವ ಬಸರೀಮರದ ಕೆಳಗೆ ಜೂಜಾಡುತ್ತಿದ್ದಾರೆಂದು ಶ್ರೀ ಬಿ. ಜಿ. ಕುಮಾರ್, ಸಿಪಿಐ ಚನ್ನರಾಯಪಟ್ಟಣ ವೃತ್ತ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸೃಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಾಮಚಂದ್ರ ಬಿನ್ ಕೃಷ್ಣೇಗೌಡ, 41 ವರ್ಷ, ದಮ್ಮಿನಿಂಗಲ ಗ್ರಾಮ, 20 ವರ್ಷ, 2) ರಾಜೇಶ್ ಬಿನ್ ಮರಿಯಪ್ಪ, 28 ವರ್ಷ, 3) ರವಿ ಬಿನ್ ಅಭಿಮನ್ಯು, 32 ವರ್ಷ, 4) ಮಂಜುನಾಥ ಬಿನ್ ಸುಬ್ಬೇಗೌಡ, 38 ವರ್ಷ, ಎಲ್ಲರೂ ದಮ್ಮಿನಿಂಗಲ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 5,800/- ನಗದನ್ನು ಅಮಾನತ್ತುಪಡಿಸಿಕೊಂಡು ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪರಿಚಿತರಿಂದ ಮಹಿಳೆಯ ಹತ್ಯೆ
     ಹಾಸನ ತಾಲ್ಲೂಕು ಕಸಬಾ ಹೋಬಳಿ, ದೊಡ್ಡಪುರಗೇಟ್ ರಾಮೇಶ್ವರನಗರ ವಾಸಿ ಮೃತೆ ಹೇಮಾವತಿ ಸಿ.ಪಿ. ರವರಿಗೆ ಎರಡು ಜನ ಮಕ್ಕಳಿದ್ದು, ಅದರಲ್ಲಿ ಮಗಳು ಶ್ವೇತಾ ಪಿಡಿಓ ಆಗಿದ್ದು, ಶ್ವೇತಾರವರ ಮದುವೆ ವಿಚಾರದಲ್ಲಿ ಮೃತೆ ಹೇಮಾವತಿ ಮತ್ತು ಪತಿ ರುದ್ರಪ್ಪರವರಿಗೆ  ವೈಮನಸ್ಸುಂಟಾಗಿ ಈಗ್ಗೆ 08 ವರ್ಷಗಳಿಂದ ರುದ್ರಪ್ಪರವರು ಮಗಳು ಶ್ವೇತಾ ಜೊತೆ ಬೆಳಗಾಂನಲ್ಲಿದ್ದು, ಮಗ ನಾಗೇಶ್ ಬೆಂಗಳೂರಿನಲ್ಲಿ ಇಂಜಿನಿಯರಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೇಮಾವತಿ ತಮಗೆ ಇದ್ದ ಜಮೀನನ್ನು ನೋಡಿಕೊಂಡು ಒಬ್ಬರೆ ಮನೆಯಲ್ಲಿದ್ದರು. ಹೇಮಾವತಿರವರು ಮನೆಯಲ್ಲಿ ಒಬ್ಬರೆ ಇದ್ದಾಗ ದಿನಾಂಕ: 14-01-2020 ರ ರಾತ್ರಿ ಸುಮಾರು     09-40 ರಿಂದ ದಿನಾಂಕ: 16-01-2020 ರ ಮಧ್ಯಾಹ್ನ 12-00 ಗಂಟೆಯ ಒಳಗೆ ಯಾವುದೋ ವೇಳೆಯಲ್ಲಿ ಮನೆಯ ಹಾಲಿನ ಮದ್ಯದಲ್ಲಿ ಇರುವ ರೂಮಿನಲ್ಲಿ ಕುತ್ತಿಗೆಗೆ ಟವೆಲ್ ಬಿಗಿದು, ಕುತ್ತಿಗೆಗೆ ಕಟ್ಟಿದ್ದ ಟವೆಲ್ ನ್ನು ರೂಮಿನಲ್ಲಿದ್ದಕ ಬ್ಬಿಣದ ರಾಡಿಗೆ ಕಟ್ಟಿ ಹೇಮಾವತಿ ಕೋಂ ರುದ್ರಪ್ಪ, 58 ವರ್ಷರವರನ್ನು ಯಾರೋ ಕೊಲೆ ಮಾಡಿ ಹೋಗಿರುತ್ತಾರೆಂದು ಮೃತೆ ಹೇಮಾವತಿ ಮಗ ಶ್ರೀ ನಾಗೇಶ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಡಿವೈ.ಎಸ್.ಪಿ. ಶ್ರೀ ಪುಟ್ಟಸ್ವಾಮಿಗೌಡ, ಹಾಸನ ಉಪ-ವಿಭಾಗ ರವರು ಮತ್ತು ಪಿಎಸ್ಐ ಶ್ರೀ ಆರೋಕಿಯಪ್ಪ, ಹಾಸನ ಗ್ರಾಮಾಂತರಠಾಣೆರವರು ಭೇಟಿ ನೀಡಿದ್ದು, ತನಿಖೆಕೈಗೊಂಡಿರುತ್ತದೆ.

ಶಿಕ್ಷಕಿ ಮನನೊಂದು ಔಷಧಿ ಸೇವಿಸಿ ಆತ್ಮಹತ್ಯೆ:
     ದಿನಾಂಕ: 07-01-2020 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಮಡಬಲು ಪೋಸ್ಟ್, ಮಂಜಲಗೋಡು ಗ್ರಾಮದ ವಾಸಿ ಕು|| ರಾಣಿ, ಎಂ.ಸಿ. ರವರು ಶಿಕ್ಷಕಿಯಾಗಿದ್ದು, ಬೇಲೂರಿನ ವೈಕುಂಠ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಯಾವುದೋ ವಿಷ ಸೇವಿಸಿದ್ದು, ಚಿಕಿತ್ಸೆಗಾಗಿ ಹಾಸನ ಸ್ವರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಕು|| ಎಂ.ಸಿ. ರಾಣಿ ಬಿನ್ ಚಂದ್ರಶೇಖರ, 32 ವರ್ಷ, ಮಂಜಲಗೋಡು ಗ್ರಾಮ, ಮಡಬಲು ಪೋಸ್ಟ್, ಆಲೂರು ತಾಲ್ಲೂಕು ರವರು ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ದಿನಾಂಕ: 11-01-2020 ರಂದು ಶ್ರೀ ಧನಂಜಯ, ಶಿಕ್ಷಕ, ರವರು  ಕು|| ರಾಣಿ, ಎಂ.ಸಿ. ರವರ ಮೊಬೈಲ್ ನ್ನು ತಂದು ಕೊಟ್ಟಿದ್ದು, ಅದರಲ್ಲಿರುವ ಮೇಸೆಜ್, ಟ್ರೋ ಕಾಲರ್ ಹಿಸ್ಟರಿ ಮೇಸೆಜ್ ನ್ನು ಡಿಲೀಟ್ ಮಾಡಿ ಕೊಟ್ಟಿರುತ್ತಾರೆ. ಮೃತೆ ಕು|| ರಾಣಿ, ಎಂ.ಸಿ. ರವರನ್ನು ಶ್ರೀ ಧನಂಜಯ, ರವರು ಹಣ ಕಾಸಿನ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದು ಹಾಗೂ ಮಾನಸಿಕ ಹಾಗೂ ದೈಹಿಕವಾಗಿ ಬಳಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ಮನನೊಂದು ಯಾವುದೋ ಔಷಧಿ ಸೇವಿಸಿ ಮೃತಪಟ್ಟಿರುತ್ತಾರೆಂದು ಹಾಗೂ ಸಾವಿಗೆ ಕಾರಣನಾದ ಆರೋಪಿ ಶ್ರೀ ಧನಂಜಯನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮೃತಳ ತಮ್ಮ ಶ್ರೀ ರಾಕೇಶ್, ರವರು ದಿನಾಂಕ: 16-01-2020 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನಿನ ಮೇಲೆ ಎಮ್ಮೆ ಕಟ್ಟಿರುವ ವಿಚಾರಕ್ಕೆ ಮಹಿಳೆಯ ಮೇಲೆ ಹಲ್ಲೆ:
    ದಿನಾಂಕ: 16-01-2020 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕೊಂಡನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಸರೋಜಮ್ಮ, ರವರು ಜಮೀನಿನಲ್ಲಿ ಕೆಲಸಕ್ಕೆಂದು ಹೋದಾಗ ಪಿರ್ಯಾದಿ ಮೈದುನ ಶ್ರೀ ಉದಯಕುಮಾರ್, ರವರು ಪಿರ್ಯಾದಿಯವರ ಜಮೀನಿನಲ್ಲಿ ಕಬ್ಬಿಗೆ ಎಮ್ಮೆ ಕಟ್ಟಿ ಕಬ್ಬನೆಲ್ಲ ತಿನ್ನಿಸಿ ಜಮೀನಿನ ಮೇಲೆ ಟ್ರ್ಯಾಕ್ಟರ್ ಓಡಿಸಿದ್ದ ವಿಚಾರ ಕೇಳಿದ್ದಕ್ಕೆ  ಆರೋಪಿ ಶ್ರೀ ಉದಯ್ ಕುಮಾರ್ ಮತ್ತು ಪತ್ನಿ ಶ್ರೀಮತಿ ಭಾಗ್ಯ ರವರುಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪಿರ್ಯಾದಿಯ ಜುಟ್ಟು ಹಿಡಿದು ಕೆಳಕ್ಕೆ ಕೆಡವಿದ್ದು, ಕಾಲಿನಿಂದ ಒದ್ದು, ಗುದ್ದಲಿಯಿಂದ ಮೈ ಕೈ ಹಾಗೂ ಬೆನ್ನಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಶ್ರೀಮತಿ ಸರೋಜಮ್ಮ, ರವರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ
     ದಿನಾಂಕ: 11-01-2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಪೊನ್ನಾಥಪುರ ಗ್ರಾಮದ ವಾಸಿ ಶ್ರೀ ಶಿವಕುಮಾರ್, ರವರ ಪತ್ನಿ ಶ್ರೀಮತಿ ಗೀತಾ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಗೀತಾ, ರವರ ಪತಿ ಶಿವಕುಮಾರ್, ರವರು ದಿನಾಂಕ: 16-01-2020 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಗೀತಾ ಕೋಂ ಶಿವಕುಮಾರ್, 28 ವರ್ಷ, 5 ಅಡಿ ಎತ್ತರ ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸುವುದು.

No comments: