* * * * * * HASSAN DISTRICT POLICE

Monday, July 15, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 14-07-2019



   ಪತ್ರಿಕಾ ಪ್ರಕಟಣೆ                       ದಿನಾಂಕ: 14-07-2019

ಮನೆಯ ಬೀಗ ಮರಿದು ಅಂಗಡಿಯೊಳಗೆ ಪ್ರವೇಶಿಸಿ, ಅಂಗಡಿಯಲ್ಲಿಟ್ಟಿದ್ದ 30 ಸಾವಿರ ನಗದು ಸೇರಿ 1 ಲಕ್ಷ ಬೆಲೆಯ ಸಿಗರೇಟ್ ಬಂಡಲ್ ಗಳ ಕಳವು:
     ದಿನಾಂಕ: 13/14-07-2019 ರಂದು ರಾತ್ರಿ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಸಂತೋಷನಗರ ವಾಸಿ ಶ್ರೀ ಎಂ. ಎನ್. ಮಾದೇಗೌಡ, ರವರ ಬಾಬ್ತು ದಿನಸಿ ಅಂಗಡಿ ಇಟ್ಟುಕೊಂಡಿದ್ದು, ಎಂದಿನಂತೆ ಅಂಗಡಿ ಮುಗಿದ ಮೇಲೆ ಬೀಗ ಹಾಕಿಕೊಂಡಿದ್ದು, ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಮುರಿದು ಅಂಗಡಿಯೊಳಗೆ ಪ್ರವೇಶಿಸಿ, ಸಿಸಿ ಕ್ಯಾಮೆರಾವನ್ನು ಮುರಿದು ಅಂಗಡಿಯಲ್ಲಿಟ್ಟಿದ್ದ 30 ಸಾವಿರ ನಗದು, 10 ಸಾವಿರ ಬೆಲೆಯ ಕಿಂಗ್ ಸಿಗರೇಟ್ ಬಂಡಲ್, 36 ಸಾವಿರ ಬೆಲೆಯ 8 ಐಟಿಸಿ ಸಿಗರೇಟ್ ಬಂಡಲ್, 7 ಸಾವಿರ ಬೆಲೆಯ 2 ಬ್ರಿಸ್ಟಲ್ ಸಿಗರೇಟ್ ಬಂಡಲ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಎಂ.ಎ. ಮಾದೇಗೌಡ, ರವರು ದಿನಾಂಕ: 14-07-2019 ರಂದು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
1,50,000/- ಬೆಲೆಯ 20 ಕುರಿಗಳ ಕಳವು
     ದಿನಾಂಕ: 11-07-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಅಟ್ಟಿಹಳ್ಳಿ ಗ್ರಾಮದ ವಾಸಿ ಶ್ರೀ ಚನ್ನಯ್ಯ, ರವರ ಬಾಬ್ತು ಕೊಟ್ಟಿಯಲ್ಲಿ 15 ಕುರಿಗಳನ್ನು ಕೂಡಿಹಾಕಿ ಬೀಗ ಹಾಕಿಕೊಂಡಿದ್ದು, ದಿನಾಂಕ: 12-07-2019 ರಂದು ಬೆಳಿಗ್ಗೆ 5-00 ಗಂಟೆಗೆ ಕೊಟ್ಟಿಗೆಯ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ, 15 ಟಗರುಗಳು 5 ಗಬ್ಬದ ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಚನ್ನಯ್ಯ, ರವರು ದಿನಾಂಕ: 13-07-2019 ರಂದು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ, ಲಾರಿ ಸಮೇತ ಮರಳು ವಶ:
     ದಿನಾಂಕ: 14-07-2019 ರಂದು ಬೆಳಿಗ್ಗೆ 10-40 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಮಾರಶೆಟ್ಟಿ ಗ್ರಾಮದ ಹತ್ತಿರ ಹೇಮಾವತಿ ಹೊಳೆಯಲ್ಲಿ ಗೊಂದಿಹಳ್ಳಿ ಗ್ರಾಮದವರು ಅಕ್ರಮವಾಗಿ ಲಾರಿಗೆ ಮರಳು ತುಂಬುತ್ತಿದ್ದಾರೆಂದು ಶ್ರೀ ಕುಮಾರ, ಪಿಎಸ್ಐ ಹೊಳೆನರಸೀಪುರ ನಗರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಕೆಎ-13, ಎ-3459 ರ ಲಾರಿಗೆ ಮರಳು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಅಶ್ವಥ್ ಬಿನ್ ಮಂಜೇಗೌಡ, ಗೊಂದಿಹಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಲಾರಿ ಸಮೇತ ಮರಳನ್ನು ಅಮಾನತ್ತುಪಡಿಸಿಕೊಂಡು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಕಾರು ಜಖಂ, ಕಾರು ಚಾಲಕನಿಗೆ ರಕ್ತಗಾಯ:
     ದಿನಾಂಕ: 13-07-2019 ರಂದು ಮಧ್ಯಾಹ್ನ 3-20 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು, ದಿಂಡಗಾಡು ಗ್ರಾಮದ ವಾಸಿ ಶ್ರೀ ಡಿ. ಸಿ. ಗಿರೀಶ್, ರವರ ಬಾಬ್ತು ಕೆಎ-12, ಎಂ.ಎ 0520 ರ ಕಾರಿನಲ್ಲಿ ಸ್ನೇಹಿತನಾದ ಶ್ರೀ ಚೇತನ್, ರವರೊಂದಿಗೆ ಕೆಲಸ ನಿಮಿತ್ತ ಹಾಸನಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ಮೈಸೂರಿಗೆ ಹೋಗಲು ಅರಕಲಗೂಡು ತಾಲ್ಲೂಕು, ಪೇಟೆಮಾಚಗೌಡನಹಳ್ಳಿ ಗ್ರಾಮದ ಹತ್ತಿರ ರಾಮನಾಥಪುರ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಎಫ್-1995 ರ ಕೆಎಸ್ಆರ್ ಟಿಸಿ ಬಸ್ಸಿನ ಚಾಲಕ ನಿಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಕಾರು ಜಖಂಗೊಂಡು ಶ್ರೀ ಚೇತನ್ ರವರಿಗೆ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಗಾಯಾಳು ಸ್ನೇಹಿತರಾದ ಶ್ರೀ ಗಿರೀಶ್, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


ಅಪರಿಚಿತ ಕಾರು ಡಿಕ್ಕಿ ಪಾದಚಾರಿ ಸಾವು:
     ದಿನಾಂಕ:14-07-2019 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಬರಾಳು ಗ್ರಾಮದ ವಾಸಿ ಶ್ರೀ ಹೇಮರಾಜು, ಅದೇ ಗ್ರಾಮದ ವಾಸಿಗಳಾದ ಶ್ರೀ ರವಿ, ಶ್ರೀ ನಾಗೇಗೌಡ, ಶ್ರೀ ಮಂಜುನಾಥ್, ರವರುಗಳೊಂದಿಗೆ ವಾಕಿಂಗ್ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ-ಚನ್ನರಾಯಪಟ್ಟಣ ಮುಖ್ಯ ರಸ್ತೆ ಹಡೇನಹಳ್ಳಿ ಗ್ರಾಮದ ಶ್ರೀ ರಾಮಕೃಷ್ಣ, ರವರ ಮನೆಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಕಾರಿನ ಚಾಲಕ ತನ್ನ ವಾಹನವನ್ನು ನಿಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಹೇಮರಾಜು, ರವರಿಗೆ ಡಿಕ್ಕಿಯಾದ ಪರಿಣಾಮ ನೆಲಕ್ಕೆ ಬಿದ್ದು ಕಾರಿನ ಚಕ್ರ ಹರಿದು ಶ್ರೀ ಹೇಮರಾಜು ಬಿನ್   45 ವರ್ಷ, ಬರಾಳು ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಬಿ.ಡಿ. ರವಿ, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಪತಿ ಪತ್ನಿಯ ಮೇಲೆ ಹಲ್ಲೆ
     ದಿನಾಂಕ: 11-07-2019 ರಂದು ಮಧ್ಯಾಹ್ನ 12-00 ಗಂಟೆ ಸಮುಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಅಟ್ಟಾವರ ಗೇಟ್ ವಾಸಿ ಶ್ರೀಮತಿ ಪಾರ್ವತಿ, ರವರ ಪತಿ ಶ್ರೀ ರಂಗೇಗೌಡ, ರವರು ಈಗ್ಗೆ 6 ತಿಂಗಳಿನಿಂದ ಕುಡಿದುಕೊಂಡು ಬಂದು ನೀನು ಚೆನ್ನಾಗಿಲ್ಲ, ಬೇರೆ ಇನ್ನೊಂದು ಮದುವೆಯಾಗುತ್ತೇನೆ ಮನೆ ಬಿಟ್ಟು ಹೋಗು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಚಾಕುವಿನಿಂದ ರಕ್ತಗಾಯಪಡಿಸಿ, ಕೋಲಿನಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀಮತಿ ಪಾರ್ವತಿ, ರವರು ದಿನಾಂಕ: 13-07-2019 ರಂದು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಆಸ್ತಿಯ ವಿಚಾರಕ್ಕೆ ಪತಿ ಪತ್ನಿಯ ಮೇಲೆ ಹಲ್ಲೆ:

     ದಿನಾಂಕ: 12-07-2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಬಿಸ್ಲೆ ಗ್ರಾಮದ ವಾಸಿ ಶ್ರೀಮತಿ ಶೀಲಾ, ರವರು ಅದೇ ಗ್ರಾಮದ ವಾಸಿ ಶ್ರೀ ಪ್ರಕಾಶ್, ರವರ ಮನೆಯಲ್ಲಿದ್ದಾಗ ಪಿರ್ಯಾದಿಯ ಪತಿ ಶ್ರೀ ದಿನೇಶ್, ಆಸ್ತಿಯ ವಿಚಾರಕ್ಕೆ ಏಕಾ-ಏಕಿ ಚಾಕುವಿನಿಂದ ಚುಚ್ಚಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀಮತಿ ಶೀಲಾ, ರವರು ದಿನಾಂಕ: 13-07-2019 ರಂದು ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: