* * * * * * HASSAN DISTRICT POLICE

Friday, January 11, 2019

HASSAN DISTRICT PRESS NOTE 11-01-2019



                      ಪತ್ರಿಕಾ ಪ್ರಕಟಣೆ                  ದಿ: 11-01-2019

ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಬಂದು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ:
    ದಿನಾಂಕ: 10-01-2019 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಪಾಂಡುರಂಗ ದೇವಸ್ಥಾನದ ಹತ್ತಿರದ ವಾಸಿ ಶ್ರೀಮತಿ ಸಿಂಧು, ರವರು ಸ್ನೇಹಿತೆಯಾದ ಶ್ರೀಮತಿ ಮೇಘ, ರವರ ಮನೆಗೆ ಹೋಗಿ ವಾಪಸ್, ಮನೆಗೆ ಹೋಗಲು ಅರಸೀಕೆರೆ ಪಟ್ಟಣದ ಸುದರಂ ಜ್ಯೂಯಲರ್ ಅಂಗಡಿ ಹತ್ತಿರ ಹೋಗುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಬಂದು 25 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಶ್ರೀಮತಿ ಸಿಂಧು ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮನೆಯ ಬೀಗ ಮುರಿದು 80 ಸಾವಿರ ಬೆಲೆಯ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು 2 ಉಂಗುರಗಳ ಕಳವು:
     ದಿನಾಂಕ: 09-01-2019 ರಂದು ಬೆಳಿಗ್ಗೆ ಸಂಜೆ 6-00 ಗಂಟೆ ಸಮಯದಲ್ಲಿ ಹಾಸನದ ಚಿಕ್ಕಮಂಡಿಗನಹಳ್ಳಿ ಗ್ರಾಮ, ಹಾಲುವಾಗಿಲು ರಸ್ತೆ, 3ನೇ ಕ್ರಾಸ್, ವಾಸಿ ಶ್ರೀ ಎಸ್. ರಮೇಶ್, ರವರು ಮನೆಗೆ ಬೀಗ ಹಾಕಿಕೊಂಡು ಕುಟುಂಬದೊಂದಿಗೆ ಪತ್ನಿಯ ತವರು ಮನೆಯಾದ ಅರಕಲಗೂಡು ತಾಲ್ಲೂಕು, ನೇರಲಹಳ್ಳಿ ಗ್ರಾಮಕ್ಕೆ ಹೋಗಿದ್ದು, ವಾಪಸ್ ದಿನಾಂಕ: 10-01-2019 ರಂದು ಬೆಳಿಗ್ಗೆ 9-30 ಗಂಟೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 80 ಸಾವಿರ ಬೆಲೆಯ 27 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು 3 ಗ್ರಾಂ ತೂಕದ 2 ಚಿನ್ನದ ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಟ್ರ್ಯಾಕ್ಟರ್ ಡಿಕ್ಕಿ, ಹಸು ಸಾವು:
     ದಿನಾಂಕ: 10-01-2019 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಬಿಳಿತೋಳಲು ಗ್ರಾಮದ ವಾಸಿ ಶ್ರೀ ಹೊನ್ನೇಗೌಡ, ರವರ ಬಾಬ್ತು ಹಸುವನ್ನು ಹೊಡೆದುಕೊಂಡು ಸಕಲೇಶಪುರ ತಾಲ್ಲೂಕು, ಬ್ಯಾಕರವಳ್ಳಿ-ಹೆತ್ತೂರು ರಸ್ತೆ, ಲಕ್ಷ್ಮೀಪುರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ54, ಟಿ-5654 ರ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಹಸುವಿಗೆ ಡಿಕ್ಕಿಯಾದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತದೆ.

ಲಾರಿ ಗೂಡ್ಸ್ ವಾಹನಕ್ಕೆ ಡಿಕ್ಕಿ, ಒಂದು ಸಾವು:
     ದಿನಾಂಕ: 11-01-2019 ರಂದು ಬೆಳಿಗ್ಗೆ 5-45 ಗಂಟೆ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು, ನೆಲ್ಯಾಡಿ ಗ್ರಾಮದ ವಾಸಿ ಶ್ರೀ ಯಶೋಧರ, ರವರ ಬಾಬ್ತು ಕೆಎ-21, ಬಿ-3865 ರ ಮಹೀಂದ್ರ ಗೂಡ್ಸ್ ವಾಹನದಲ್ಲಿ ತಮ್ಮ ಶ್ರೀ ಹರೀಶ್, ರವರೊಂದಿಗೆ ನಾಗಮಂಗಲದಿಂದ ಸೌತೆಕಾಯಿ ತುಂಬಿಕೊಂಡು ಸುಬ್ರಹ್ಮಣ್ಯಕ್ಕೆ ಹೋಗಲು ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಎನ್ ಹೆಚ್-75, ರಸ್ತೆ, ಪಾಳ್ಯದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-46, 1918 ರ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಗೂಡ್ಸ್ ವಾಹನವನ್ನು ಡಿಕ್ಕಿ ಮಾಡಿದ ಪರಿಣಾಮ ಗೂಡ್ಸ್ ವಾಹನದಲ್ಲಿ ಕುಳಿತಿದ್ದ ಶ್ರೀ ಹರೀಶ್, ರವರಿಗೆ ಡಿಕ್ಕಿಯಾಗಿ ಶ್ರೀ ಹರೀಶ್ ಬಿನ್ ಗುಮ್ಮಣ್ಣನಗೌಡ, 35 ವರ್ಷ, ನೆಲ್ಯಾಡಿ ಗ್ರಾಮ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಯಶೋಧರ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ವಿದ್ಯುತ್ ತಂತಿ ಸ್ಪರ್ಶಿಸಿ, ವ್ಯಕ್ತಿ ಸಾವು
     ಈಗ್ಗೆ 4 ವರ್ಷಗಳಿಂದ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಅಜ್ಜೇನಹಳ್ಳಿ ಗ್ರಾಮದ ವಾಸಿ ಶ್ರೀ ಮೂತರ್ಿ, ರವರು ಆಲೂರಿನ ಕೆಇಬಿ ಕಂಟ್ರಾಕ್ಟರ್ ಶ್ರೀ ಸಂಶುದ್ದೀನ್, ರವರ ಬಳಿ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದು, ಬಜಾಜ್ ಎಲೆಕ್ಟ್ರಿಕ್ ಲಿಮಿಟೆಡ್ ಕಂಪನಿಯ ಮೀಟರ್ ಬೋರ್ಡ್ ಗಳನ್ನು ಹಲವು ಗ್ರಾಮದ ಮನೆಗೆಳಿಗೆ ಅಳವಡಿಸಲು ಶ್ರೀ ಸಂಶುದ್ದೀನ್, ರವರ ಜೊತೆ ಹೋಗುತ್ತಿದ್ದು 1 ವಾರದಿಂದ ಅನಾರೋಗ್ಯ ನಿಮಿತ್ತ ಮನೆಯಲ್ಲಿದ್ದಾಗ ಶ್ರೀ ಸಂಶುದ್ದೀನ್, ರವರು ಫೋನ್ ಕಂಟ್ರಾಕ್ಟ್ ಕೆಲಸ ಬಾಕಿ ಇದೆ ಎಂದು ಹೇಳಿ ಕರೆದಾಗ ಅನಾರೋಗ್ಯದ ಸಮಸ್ಯೆ ಎಂದು ಹೇಳಿದಾಗ ಒತ್ತಡ ಹಾಕಿದ್ದರಿಂದ ದಿನಾಂಕ: 08-01-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಮುದ್ರವಳ್ಳಿ ಗ್ರಾಮದ ದ್ಯಾವಯ್ಯ, ರವರ ಮನೆಗೆ ಮೋಟರ್ ಬೋರ್ಡ್ ಅಳವಡಿಸಿ ಕಂಬಕ್ಕೆ ಹತ್ತಿ ತಂತಿಯ ವೈರನ್ನು ಅಳವಡಿಸಲು ಹೋದಾಗ ವಿದ್ಯುತ್ ತಂತಿ ತಗುಲಿ ಶ್ರೀ ಮೂರ್ತಿ, 45 ವರ್ಷ, ಅಜ್ಜೇನಹಳ್ಳಿ ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು, ರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಹಾಗೂ ನಿರ್ಲಕ್ಷ್ಯತೆ ತೋರಿಸಿದ  ಶ್ರೀ ಸಂಶುದ್ದೀನ್, ಕೆ.ಇ.ಬಿ ಅಧಿಕಾರಿಗಳು ಮತ್ತು ಬಜಾಜ್ ಎಲೆಕ್ಟ್ರಿಕ್ ಕಂಪನಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತರ ಪತ್ನಿ ಶ್ರೀಮತಿ ಗೌರಮ್ಮ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹಳೆ ದ್ವೇಷ, ಹಲ್ಲೆ ಹಾಗೂ ಕೊಲೆ ಬೆದರಿಕೆ
     ದಿನಾಂಕ: 08-01-2019 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಆದರೆಗೆರೆ ಗ್ರಾಮದ ವಾಸಿ ಶ್ರೀ ದೇವರಾಜು, ತಾಯಿ ಹೂವಮ್ಮ, ರವರು ಮನೆಯಲ್ಲಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಚಂದ್ರ, ರವರು ಹಳೇ ದ್ವೇಷದಿಂದ ಮನೆಯ ಹತ್ತಿರ ಬಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ಶ್ರೀ ದೇವರಾಜು, ರವರನ್ನು ಹಿಡಿದು ಎಳೆದಾಡಿ, ಕೈಯಿಂದ ಹೊಡೆದು ಶ್ರೀಮತಿ ಹೂವಮ್ಮ, ರವರಿಗೆ ದೊಣ್ಣೆಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತೆ


No comments: