* * * * * * HASSAN DISTRICT POLICE

Thursday, January 10, 2019

HASSAN DISTRICT PRESS NOTE : 10-01-2019


ಪತ್ರಿಕಾ ಪ್ರಕಟಣೆ                          ದಿ: 10-01-2019
ಮನೆಯ ಬೀಗ ಮುರಿದು 40 ಸಾವಿರ ನಗದು ಮತ್ತು 20 ಸಾವಿರ ಬೆಲೆಯ ಬೆಳ್ಳಿಯ ಪದಾರ್ಥಗಳ ಕಳವು:
ದಿನಾಂಕ: 09-01-2018 ರಂದು ಸಂಜೆ 8-00 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣದ ಕಲಸಿನಕೆರೆ ರಸ್ತೆ, ಶ್ರೀ ರುದ್ರೇಶ್ವರ ನಿಲಯದ ವಾಸಿ ಶ್ರೀ ಕೆ. ಚಂದ್ರೇಗೌಡ, ರವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿದ್ದು, ವಾಪಸ್ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಹಿಂಭಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 40,000/- ನಗದು ಮತ್ತು 20 ಸಾವಿರ ಬೆಲೆಯ ಬೆಳ್ಳಿಯ ಪದಾರ್ಥಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ ಮರಳು ಸಮೇತ ಆಟೋರಿಕ್ಷಾ ವಶ:
ದಿನಾಂಕ: 09-01-2019 ರಂದು ಸಂಜೆ 4-15 ಗಂಟೆ ಸಮಯದಲ್ಲಿ ಶ್ರೀ ಬಿ.ಆರ್. ಗೌಡ, ಪಿಎಸ್ಐ ಹಳೇಬೀಡು ಪೊಲೀಸ್ ಠಾಣೆ, ರವರು ಸಿಬ್ಬಂದಿಗಳೊಂದಿಗೆ ಹಳೇಬೀಡು ಟೌನ್ ರೌಂಡ್ಸ್ನಲ್ಲಿದ್ದಾಗ ರಾಜನಸಿರಿಯೂರಯ ಕೆರೆ ಹತ್ತಿರ ಮರಳು ಸಾಗಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಕೆಎ-46-77 ರ ಆಟೋದಲ್ಲಿ 12 ಪ್ಲಾಸ್ಟಿಕ್ ಚೀಲದಲ್ಲಿ ಮರಳು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರಾಜೇಗೌಡ ಬಿನ್ ರಾಮೇಗೌಡ, 40 ವರ್ಷ, ಆಟೋ ಡ್ರೈವರ್, ಬಂಡಿಲಕ್ಕಪ್ಪನಕೊಪ್ಪಲು ಗ್ರಾಮ ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮರಳು ಸಮೇತ ಆಟೋ ರಿಕ್ಷಾವನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, 6604/- ಬೆಲೆಯ ಮದ್ಯ ವಶ:
ದಿನಾಂಕ: 09-01-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಮರೂರು ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಕೆ. ಜಗದೀಶ್, ಪಿಎಸ್ಐ, ಬೇಲೂರು ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ವಿರೂಪಾಕ್ಷ ಬಿನ್ ಈರೇಗೌಡ, 30 ವರ್ಷ, ಮರೂರು ಗ್ರಾಮ, ಕಸಬಾ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು 6604/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.       
                 
ನಾಡ ಕಛೇರಿಯ ಬೀಗ ಮುರಿದು 22 ಸಾವಿರ ಬೆಲೆಯ 11 ಬ್ಯಾಟರಿ ಶೆಲ್ಗಳ ಕಳವು:
ದಿನಾಂಕ: 08-01-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಮಿನಿವಿಧನಾಸೌದ ಹಿಂಭಾಗದಲ್ಲಿರುವ ನಾಡ ಕಛೇರಿಯ ಅಧಿಕಾರಿ ಶ್ರೀ ನಾಗರಾಜು, ರವರು ಕಛೇರಿಗೆ ಬೀಗ ಹಾಕಿಕೊಂಡು ಬೀಗದ ಕೀಗಳನ್ನು ಗ್ರಾಮ ಸಹಾಯಕರಾದ ಶ್ರೀ ರಘು, ರವರಿಗೆ ಕೊಟ್ಟಿದ್ದು, ದಿನಾಂಕ: 09-01-2018 ರಂದು ಬೆಳಿಗ್ಗೆ 9-50 ಗಂಟೆಗೆ ಬಾಣಾವರ ನಾಡಕಛೇರಿಯಲ್ಲಿದ್ದಾಗ ಗ್ರಾಮ ಸಹಾಯಕರಾದ ಶ್ರೀ ರಘು, ರವರು ಫೋನ್ ಮಾಡಿ ಯಾರೋ ಕಳ್ಳರು ನಾಡ ಕಛೇರಿಯ ಬೀಗ ಮುರಿದು ಸೋಲಾರ್ ಯುಪಿಎಸ್ & ಆದಾರ್ ನೊಂದಣಿ ಮಾಡುವ ಯುಪಿಎಸ್ಗೆ ಅಳವಡಿಸಿದ್ದ 22 ಸಾವಿರ ಬೆಲೆಯ 11 ಬ್ಯಾಟರಿ ಶೆಲ್ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ನಾಗರಾಜು, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಆಟೋ ಪಲ್ಟಿ, ಆಟೋ ಚಾಲಕ ಸಾವು:
ದಿನಾಂಕ: 08-01-2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ದೊಡ್ಡಕೋಡಿಹಳ್ಳಿ ಗ್ರಾಮದ ವಾಸಿ ಶ್ರೀ ನಾಗರಾಜು, ರವರ ಬಾಬ್ತು ಕೆಎ-13, ಎ-6983 ರ ಆಟೋದಲ್ಲಿ ತಮ್ಮ ಪ್ರದೀಪ & ತಾಯಿ ಶ್ರೀಮತಿ ಮಂಜುಳ, ರವರೊಂದಿಗೆ ಸಂಬಂಧಿಕರಾದ ಶ್ರೀ ವೆಂಟೇಶ್, ರವರ ಮಗನ ಬತರ್್ ಡೇ ಪಾಟರ್ಿಗೆ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ವಡ್ಡರಕೊಪ್ಪಲು ಗ್ರಾಮಕ್ಕೆ ಹೋಗಿದ್ದು, ಬತರ್್ ಡೇ ಪಾಟರ್ಿ ಮುಗಿಸಿಕೊಂಡು ಶ್ರೀ ನಾಗರಾಜು, ರವರು ಒಬ್ಬರೇ ಆಟೋದಲ್ಲಿ ವಾಪಸ್ ಮನೆಗೆ ಹೋಗಲು ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಹಳೇಬೀಡು-ಹಗರೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಆಟೋ ಪಲ್ಟಿಯಾಗಿ ಶ್ರೀ ನಾಗರಾಜು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಗರೆ ಆಸ್ಪತ್ರೆಗೆ ಕರೆದುಕೊಂಡು ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ನಾಗರಾಜು ಬಿನ್ ರಂಗಸ್ವಾಮಿ, 24 ವರ್ಷ, ದೊಡ್ಡಕೋಡಿಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು, ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತರ ತಂದೆ ಶ್ರೀ ರಂಗಸ್ವಾಮಿ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ
ದಿನಾಂಕ: 01-01-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನದ ಇಂದ್ರಾನಗರ ಸತ್ಯಮಂಗಲ ವಾಸಿ ಶ್ರೀ ಶಿವಕುಮಾರ್, ರವರ ಮಗಳು ಕು|| ಎಸ್. ಸಾಂಚಿತ್, ರವರು ಹೊಸವಷರ್ಾಚರಣೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಎಸ್. ಸಾಂಚಿತ್, ರವರ ತಂದೆ ಶ್ರೀ ಶಿವಕುಮಾರ್, ರವರು ದಿನಾಂಕ: 09-01-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಕಾಣೆಯಾದ ಹುಡುಗಿಯ ಚಹರೆ: ಕು|| ಎಸ್. ಸಾಂಚಿತ್ ಬಿನ್ ಶಿವಕುಮಾರ್, 26 ವರ್ಷ,5'5 ಅಡಿ ಎತ್ತರ,  ಗೋಧಿ ಬಣ್ಣ, ಕನ್ನಡ & ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಸಿಂಮೆಟ್ ಬಣ್ಣ ಶಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪಕರ್ಿಸುವುದು.

ಗಂಡಸು ಕಾಣೆ
ದಿನಾಂಕ: 25-12-2018 ರಂದು ಸಂಜೆ
7-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ನುಗ್ಗೇಹಳ್ಳಿ ಟೌನ್ ವಾಸಿ ಶ್ರೀ ಎನ್.ಟಿ. ಹರೀಶ್, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಎನ್.ಟಿ. ಹರೀಶ್ನ ಪತ್ನಿ ಶ್ರೀಮತಿ ಶಾರದ, ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಎನ್.ಟಿ. ಹರೀಶ್ ಬಿನ್ ತಿಮ್ಮೇಗೌಡ, 39 ವರ್ಷ, 5'7 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಈ ಗಂಡಸಿನ ಸುಳಿವು ಸಿಕ್ಕಲ್ಲಿ 08176-233033 ಕ್ಕೆ ಸಂಪಕರ್ಿಸುವುದು.


No comments: